ರಾಜ್ಯದಲ್ಲಿ ಹೊಸ ಸಂಚಾರಿ ನಿಯಮ ಜಾರಿ ಮಾಡಲ್ಲ: ಸಿಎಂ ಘರ್ಜನೆ!

Published : Sep 11, 2019, 08:38 PM IST
ರಾಜ್ಯದಲ್ಲಿ ಹೊಸ ಸಂಚಾರಿ ನಿಯಮ ಜಾರಿ ಮಾಡಲ್ಲ: ಸಿಎಂ ಘರ್ಜನೆ!

ಸಾರಾಂಶ

‘ರಾಜ್ಯದಲ್ಲಿ ಹೊಸ ಸಂಚಾರಿ ನಿಯಮ ಜಾರಿಯಿಲ್ಲ’| ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಕಾಯ್ದೆಗೆ ವಿರೋಧ| ಹೊಸ ಕಾಯ್ದೆ ಜಾರಿ ಸಾಧ್ಯವಿಲ್ಲ ಎಂದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ| ಹೊಸ ಸಂಚಾರಿ ದಂಡ ತುಂಬಾ ಕಠಿಣ ಹಾಗೂ ಅಸಮರ್ಪಕವಾಗಿದೆ ಎಂದ ಮಮತಾ|

ಕೋಲ್ಕತ್ತಾ(ಸೆ.11): ಕೇಂದ್ರ ಸರ್ಕಾರದ ನೂತನ ಮೋಟಾರು​ ವಾಹನ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

ಹೊಸ ಸಂಚಾರಿ ದಂಡ ತುಂಬಾ ಕಠಿಣ ಹಾಗೂ ಅಸಮರ್ಪಕವಾಗಿದೆ ಎಂದು ದೂರಿರುವ ಮಮತಾ,  ಈ ಕಾಯ್ದೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

ಟಿಎಂಸಿ ಈ ಹಿಂದೆಯೇ ಸಂಸತ್ತಿನಲ್ಲಿ ಮೋಟರ್​ ವಾಹನ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿದ್ದು, ಜನರ ಭಾವನೆಗೆ ಧಕ್ಕೆಯಾಗುವ ಈ ಅಸಂವಿಧಾನಿಕ ಕಾನೂನನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಮಮತಾ ಸ್ಪಷ್ಟಪಡಿಸಿದ್ದಾರೆ.

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ