ಮೋಟಾರು ವಾಹನ ಕಾಯ್ದೆಯಡಿ, ನಿಯಮ ಮೀರಿ ಸರಕು ತುಂಬಿದಕ್ಕೆ ಲಾರೀ ಚಾಲಕರೊಬ್ಬರಿಗೆ ರಾಜಸ್ಥಾನ ಪೊಲೀಸರು 1.50 ಲಕ್ಷ ರು. ದಂಡ ವಿಧಿಸಿದ್ದಾರೆ.
ಜೈಪುರ [ಸೆ.11]: ಹೊಸ ಮೋಟಾರು ವಾಹನ ಕಾಯ್ದೆಯಡಿ, ನಿಯಮ ಮೀರಿ ಸರಕು ತುಂಬಿದಕ್ಕೆ ಲಾರೀ ಚಾಲಕರೊಬ್ಬರಿಗೆ ರಾಜಸ್ಥಾನ ಪೊಲೀಸರು 1.50 ಲಕ್ಷ ರು. ದಂಡ ವಿಧಿಸಿದ್ದಾರೆ.
ಹೌದು. ಭಗವಾನ್ ರಾಮ್ ಎಂಬ ಟ್ರಕ್ ಚಾಲಕನಿಗೆ ಓವರ್ ಲೋಡ್ ಮಾಡಿದ್ದಕ್ಕೆ ಸಂಚಾರಿ ಪೊಲೀಸರು 1,41,700 ರು. ದಂಡ ವಿಧಿಸಿದ್ದಾರೆ. ಸೆ.5 ರಂದು ಚಾಲಕನಿಗೆ ದಂಡ ವಿಧಿಸಲಾಗಿದೆ.
ಡ್ರೈವರ್ ನಿದ್ದೆ ಮಾಡಿದ್ರೂ 90 ಕಿ.ಮೀ. ವೇಗದಲ್ಲಿ ಚಲಿಸಿದ ಟೆಸ್ಲಾ ಕಾರು!
ಸೆ.9 ರಂದು ರೋಹಿಣಿ ನ್ಯಾಯಾಲಯದಲ್ಲಿ ದಂಡ ಪಾವತಿ ಮಾಡಿದ್ದಾರೆ. ಇದು ದೇಶದಲ್ಲೇ ಈ ವರೆಗೆ ಓರ್ವ ವ್ಯಕ್ತಿಯಿಂದ ವಸೂಲಿ ಮಾಡಲಾದ ಅತ್ಯಧಿಕ ದಂಡ ಎಂದು ಹೇಳಲಾಗಿದೆ.