ಡ್ರೈವರ್‌ ನಿದ್ದೆ ಮಾಡಿದ್ರೂ 90 ಕಿ.ಮೀ. ವೇಗದಲ್ಲಿ ಚಲಿಸಿದ ಟೆಸ್ಲಾ ಕಾರು!

By Web Desk  |  First Published Sep 11, 2019, 9:02 AM IST

ತಮಾಷೆಯಲ್ಲ... ಡ್ರೈವರ್‌ ನಿದ್ದೆ ಮಾಡಿದ್ರೂ 90 ಕಿ.ಮೀ. ವೇಗದಲ್ಲಿ ಚಲಿಸಿದ ಟೆಸ್ಲಾ ಕಾರು, ಇಲ್ಲಿದೆ ನೋಡಿ ವಿಡಿಯೋ


ಕಾರು ಚಾಲಕ ನಿದ್ದೆಗೆ ಅಪಘಾತ ಕಟ್ಟಿಟ್ಟಬುತ್ತಿ. ಆದರೆ, ಅಮೆರಿಕದ ಮ್ಯಾಸಚೂಸೆಟ್ಸ್‌ನಲ್ಲಿ ಹೆದ್ದಾರಿಯೊಂದರಲ್ಲಿ ಟೆಸ್ಲಾ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಚಾಲಕ ಹಾಗೂ ಸಹ ಪ್ರಯಾಣಿಕ ನಿದ್ದೆಗೆ ಜಾರಿದ್ದರು.

ಆದರೆ, ಅಪಘಾತವೇನೂ ಸಂಭವಿಸಿಸಲ್ಲ. ಅದರ ಬದಲು ಕಾರು 90 ಕಿ.ಮೀ. ವೇಗದಲ್ಲಿ ತನ್ನಿಂದ ತಾನೇ ಚಲಿಸಿದೆ.

Some guy literally asleep at the wheel on the Mass Pike (great place for it).

Teslas are sick, I guess? pic.twitter.com/ARSpj1rbVn

— Dakota Randall (@DakRandall)

Tap to resize

Latest Videos

ಹಿಂಬದಿಯಲ್ಲಿ ಬರುತ್ತಿದ್ದ ಇನ್ನೊಬ್ಬ ವಾಹನ ಸವಾರ ಹಾರ್ನ್‌ ಹೊಡೆದರೂ ಚಾಲಕ ಮಾತ್ರ ನಿದ್ದೆಯಿಂದ ಎಚ್ಚರಗೊಳ್ಳಲಿಲ್ಲ. ಟೆಸ್ಲಾ ಕಾರಿನಲ್ಲಿ ಆಟೋ ಪೈಲಟ್‌ ವ್ಯವಸ್ಥೆ ಇದ್ದು ತಾನೇ ಸ್ವತಃ ಡ್ರೈವ್‌ ಮಾಡಬಲ್ಲದು.

click me!