ರಾಜಧಾನಿಯಲ್ಲಿ ನಾಳೆಯಿಂದ ರಸ್ತೆಗಿಳಿಯಲಿದೆ ಎಲೆಕ್ಟ್ರಿಕ್ ಬಸ್!

By Web DeskFirst Published Dec 26, 2018, 8:21 PM IST
Highlights

ಹೆಚ್ಚಾಗುತ್ತಿರುವ ಮಾಲಿನ್ಯ, ತೈಲ ಬೆಲೆ ಏರಿಕೆಗಳಿಂದ ಮುಕ್ತಿ ಪಡೆಯಲು ಇದೀಗ ಸರ್ಕಾರಗಳು ಎಲೆಕ್ಟ್ರಿಕ್ ಬಸ್‌ಗಳತ್ತ ಮುಖ ಮಾಡಿದೆ. ಸಾರ್ವಜನಿಕೆ ಸಾರಿಗೆ ವಾಹನವಾಗಿ ಎಲೆಕ್ಟ್ರಿಕ್ ಬಸ್ ಉಪಯೋಗಿಸಲು ನಿರ್ಧರಿಸಿದೆ. ಇದೀಗ ರಾಷ್ಟ್ರ ರಾಜಧಾನಿಯಲ್ಲಿ ನಾಳೆಯಿಂದ ಇ ಬಸ್ ಸೇವೆ ಆರಂಭಗೊಳ್ಳುತ್ತಿದೆ.

ನವದಹೆಲಿ(ಡಿ.26): ಭಾರತದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ನಿರ್ಮಾಣದಲ್ಲಿ ಅಗ್ರಸ್ಥಾನ ಪಡೆದಿರುವ ಒಲೆಕ್ಟ್ರಾ ಕಂಪೆನಿ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇ ಬಸ್ ಸೇವೆ ಆರಂಭಿಸುತ್ತಿದೆ. ಈಗಾಗಲೇ ಹಿಮಾಚಲ ಪ್ರದೇಶ, ಮುಂಬೈ, ಕೇರಳದಲ್ಲಿ ಯಶಸ್ವಿಯಾಗಿರುವ ಒಲೆಕ್ಟ್ರಾ ಇ ಬಸ್ ಇದೀಗ ದೆಹಲಿಯಲ್ಲಿ ಕಾರ್ಯ ಆರಂಭಿಸಲಿದೆ.

ಇದನ್ನೂ ಓದಿ:  ಗುಡ್ ಬೈ 2018: ಈ ವರ್ಷ ಬಿಡುಗಡೆಯಾದ ಟಾಪ್ 6 ದುಬಾರಿ ಕಾರು!

ದೆಹಲಿಯಲ್ಲಿ ಮಾಲಿನ್ಯ ಮೀತಿ ಮೀರಿ ಹೋಗಿದೆ. ಹೀಗಾಗಿ ಇದೀಗ ದೆಹಲಿ ನಗರದಲ್ಲಿ ಇ ಬಸ್ ಪ್ರಾಯೋಗಿಕವಾಗಿ ಸೇವೆ ಆರಂಭಿಸುತ್ತಿದೆ. 40 ಜನರನ್ನ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಈ ಎಲೆಕ್ಟ್ರಿಕ್ ಬಸ್ ಒಂದು ಬಾರಿ ಚಾರ್ಜ್ ಮಾಡಿದರೆ 250 ಕಿ.ಮೀ ಪ್ರಯಾಣ ಮಾಡಬಹುದಾಗಿದೆ.

ಇದನ್ನೂ ಓದಿ: ಮಾರುತಿ ವ್ಯಾಗನ್ಆರ್ ಕಾರು ಬಿಡುಗಡೆ ದಿನಾಂಕ ಪ್ರಕಟ-ಬೆಲೆ ಎಷ್ಟು?

4 ರಿಂದ 5 ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲಿದೆ. ತೆಲಂಗಾಣ ಸರ್ಕಾರ ಈಗಾಗಲೇ 40 ಬಸ್ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಇದೀಗ ಉತ್ತರಖಂಡ ಸರ್ಕಾರ ಎಲೆಕ್ಟ್ರಿಕ್ ಬಸ್‌ಗಾಗಿ 700 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿದೆ. 

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!