ಮಾರುತಿ ಸುಜುಕಿ ಸಂಸ್ಥೆಯ ನೂತನ ವ್ಯಾಗನ್ಆರ್ ಕಾರು ಬಿಡುಗಡೆ ದಿನಾಂಕ ಪ್ರಕಟಗೊಂಡಿದೆ. ಹೊಸ ಕಾರಿನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ನವದೆಹಲಿ(ಡಿ.26): ಮಾರುತಿ ಸುಜುಕಿ ಸಂಸ್ಥೆಯ ನೂತನ ವ್ಯಾಗನ್ಆರ್ ಕಾರು ಬಿಡುಗಡೆ ದಿನಾಂಕವನ್ನ ಕಂಪೆನಿ ಪ್ರಕಟಿಸಿದೆ. ಜನವರಿ 23 ರಂದ ನೂತನ ವ್ಯಾಗನ್ಆರ್ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಹಲವು ವಿಶೇಷತೆ, ಹೊಸ ವಿನ್ಯಾಸದೊಂದಿ ಬಿಡುಗಡೆಯಾಗುತ್ತಿರುವು ವ್ಯಾಗನ್ಆರ್ ಕಾರು ಟಾಟಾ ಟಿಯಾಗೋ, ಹ್ಯುಂಡೈ ಸ್ಯಾಂಟ್ರೋ ಕಾರಿಗೆ ಪೈಪೋಟಿ ನೀಡಲಿದೆ.
undefined
ಇದನ್ನೂ ಓದಿ:ರೋಲ್ಸ್ ರಾಯ್ಸ್ TO ವಿಹಾರ ನೌಕೆ-ಎಲ್ಲವನ್ನೂ ಕಳೆದುಕೊಂಡ ಮಲ್ಯ!
ನೂತನ ವ್ಯಾಗನ್ಆರ್ ಕಾರಿನ ಬೆಲೆ 4 ರಿಂದ 5 ಲಕ್ಷ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಈ ಹಿಂದಿನ ವ್ಯಾಗನ್ಆರ್ ಕಾರಿಗಿಂತ ಹೆಚ್ಚು ಸ್ಥಳವಕಾಶ, ಹೆಚ್ಚು ಫೀಚರ್ಸ್ ಹಾಗೂ ಸುರಕ್ಷತೆಯಲ್ಲೂ ಮುಂದಿದೆ. 2020ರಲ್ಲಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ.
ಇದನ್ನೂ ಓದಿ: ನಿದ್ದೆ ಕಣ್ಣಿನಲ್ಲಿ BMW ಕಾರನ್ನ ವಿಮಾನ ತರ ಹಾರಿಸಿದ ಭೂಪ-ವೀಡಿಯೋ ವೈರಲ್!
1 ಲೀಟರ್, 3 ಸಿಲಿಂಡರ್ ಎಂಜಿನ್ ಹಾಗೂ 5 ಸ್ವೀಡ್ ಗೇರ್ ಬಾಕ್ಸ್, AMT ವರ್ಶನ್ ಕೂಡ ಲಭ್ಯವಿದೆ. ಫ್ಯಾಮಿಲಿ ಕಾರು ಎಂದೇ ಗುರುತಿಸಿಕೊಂಡಿರುವ ವ್ಯಾಗನ್ಆರ್ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿರುವುದು ಗ್ರಾಹಕರ ಸಂಸತ ಹೆಚ್ಚಿಸಿದೆ.
ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: