ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಒಲಾ ಎಲೆಕ್ಟ್ರಿಕ್ ಸ್ಕೂಟರ್!

By Suvarna NewsFirst Published May 31, 2020, 2:32 PM IST
Highlights

 ಕ್ಯಾಬ್ ಸರ್ವೀಸ್ ದಿಗ್ಗಜನಾಗಿರುವ ಓಲಾ ಇದೀಗ ಆಟೋಮೊಬೈಲ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಶೀಘ್ರದಲ್ಲೇ ಓಲಾ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಒಲಾ ಸ್ಕೂಟರ್ ವಿಶೇಷತೆ ಇಲ್ಲಿದೆ.

ನವದೆಹಲಿ(ಮೇ.31): ಕ್ಯಾಬ್ ಸರ್ವೀಸ್ ಮೂಲಕ ಆರಂಭಗೊಂಡ ಒಲಾ ಕಂಪನಿ ಇದೀಗ ವಿಶ್ವದಲ್ಲೇ ದಿಗ್ಗಜ ಕ್ಯಾಬ್ ಸರ್ವೀಸ್ ಕಂಪನಿಯಾಗಿ ಬೆಳೆದು ನಿಂತಿದೆ. ಭಾರತದ ಎಲ್ಲಾ ನಗರ ಸೇರಿದಂತೆ ವಿದೇಶದಲ್ಲೂ ಒಲಾ ಸರ್ವೀಸ್ ಲಭ್ಯವಿದೆ. ಇದೀಗ ಒಲಾ ಕ್ಯಾಬ್ ಆಟೋಮೊಬೈಲ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಶೀಘ್ರದಲ್ಲೇ ಭಾರತದಲ್ಲಿ ಒಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ.

ಕೈಗೆಟುಕವ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಬ್ಯಾಟ್‌ರೆ!.

2014ರಲ್ಲಿ ನೆದರ್ಲೆಂಡ್ ಮೂಲದ ಎಟೆರ್ಗೋ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ಎಟೆರ್ಗೋ ಕಂಪನಿ ಜೊತೆ ಒಲಾ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣ ಆರಂಭಗೊಂಡಿದೆ. ನೆದರ್ಲೆಂಡ್‌ನ ಎಟೆರ್ಗೋ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಯೂರೋಪಿಯನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ದರ ಬೆಲೆ 2.80 ಲಕ್ಷ ರೂಪಾಯಿ(ಭಾರತೀಯ ರೂಪಾಯಿಗಳಲ್ಲಿ).

ಎಟೆರ್ಗೋ ಕಂಪನಿ ಮಾರಾಟ ಮಾಡುತ್ತಿರುವ ಯೂರೋಪಿಯನ್ ಬೆಲೆ, ಭಾರತಕ್ಕೆ ದುಬಾರಿಯಾಗಿದೆ. ಹೀಗಾಗಿ ಒಲಾ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣ ಮಾಡಲು ಮುಂದಾಗಿದೆ. ಈ ಮೂಲಕ ವೆಚ್ಚ ಕಡಿಮೆ ಮಾಡಿ, ಕೈಗೆಟುಕುವ ದರದಲ್ಲಿ ಸ್ಕೂಟರ್ ಬಿಡುಗಡೆ ಮಾಡಲು ಒಲಾ ರೆಡಿಯಾಗಿದೆ.

ವೆಸ್ಪಾ ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿಗೆ ಬಿತ್ತು ಭಾರಿ ದಂಡ!..

ಮೊದಲ ಹಂತದಲ್ಲಿ ದೆಹಲಿಯಲ್ಲಿ ಸ್ಕೂಟರ್ ಬಿಡುಗಡೆಯಾಗಲಿದೆ. ಬಳಿಕ ಬೆಂಗಳೂರು, ಮುಂಬೈ, ಚೆನ್ನೈ ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ ಓಲಾ ಸ್ಕೂಟರ್ ಬಿಡುಗಡೆಯಾಗಲಿದೆ. 2021ರಲ್ಲಿ ಒಲಾ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಮೂಲಕ ಒಲಾ ಭಾರತದಲ್ಲಿ ಮತ್ತೊಂದು ಸಂಚಲನ ಮೂಡಿಸಲು ರೆಡಿಯಾಗಿದೆ.

click me!