ಕೇಂದ್ರ ಸರ್ಕಾರ GST ಬೆಲೆ ಕಡಿತಗೊಳಿಸಿದ ಬೆನ್ನಲ್ಲೇ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆಯಾಗಿದೆ. ಇಲ್ಲಿದೆ ಒಕಿನಾವ ಸ್ಕೂಟರ್ ನೂತನ ಬೆಲೆ ವಿವರ.
ದೆಹಲಿ(ಆ.05): ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದೆ. ಸದ್ಯ ದೆಹಲಿ, ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ಕೇಂದ್ರ ಸರ್ಕಾ ಎಲೆಕ್ಟ್ರಿಕ್ ವಾಹನಗಳ ಮೇಲಿನ GST ಕಡಿತಗೊಳಿಸಿದ ಬೆನ್ನಲ್ಲೇ ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೆಲೆ ಕಡಿತಗೊಂಡಿದೆ. ಇದೀಗ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕಡಿತಗೊಂಡಿದೆ.
ಇದನ್ನೂ ಓದಿ: ಎದರ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆ; ಇಲ್ಲಿದೆ ನೂತನ ದರ ಪಟ್ಟಿ!
undefined
ಕೇಂದ್ರ ಸರ್ಕಾರಾ ಹಾಗೂ GST ಕೌನ್ಸಿಲ್ ಎಲೆಕ್ಟ್ರಿಕ್ ವಾಹನದ ಮೇಲಿ 12% GST(ತೆರಿಗೆ)ಯನ್ನು 5% ಕ್ಕೆ ಇಳಿಸಲಾಗಿದೆ. ಹೀಗಾಗಿ ಒಕಿನಾವ ಸ್ಕೂಟರ್ ಬೆಲೆಯಲ್ಲಿ ಕನಿಷ್ಠ 3,400 ರೂಪಾಯಿಂದ 8,600 ರೂಪಾಯಿ ವರೆಗೆ ಇಳಿಕೆಯಾಗಿದೆ. ಒಕಿನಾವಾ ಸ್ಕೂಟರ್‌ನಲ್ಲಿ i-ಪ್ರೈಸ್+, ರಿಡ್ಜ್+, ರಿಡ್ಜ್, ಪ್ರೈಸ್, ರೈಸ್ ಹಾಗೂ ರಿಡ್ಜ್ 30 ವೇರಿಯೆಂಟ್ ಲಭ್ಯವಿದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಕ್ಕೆ ಬಂಪರ್ ಕೊಡುಗೆ; GST ಇಳಿಕೆ, ಕೈಗೆಟುಕಲಿದೆ ಕಾರು!
ಒಕಿನಾವಾ ಸ್ಕೂಟರ್ ಸಂಪೂರ್ಣ ಚಾರ್ಜ್‌ಗೆ 3 ಗಂಟೆ ಸಮಯ ತೆಗೆದುಕೊಳ್ಳಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 160 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ. ಒಕಿನಾವ ಗರಿಷ್ಠ ವೇಗ ಗರಿಷ್ಠ ವೇಗ 77 ಕಿಲೋಮೀಟರ್ ಪ್ರತಿ ಗಂಟೆಗೆ. ಈ ಸ್ಕೂಟರ್ ಐ ಪ್ರೈಸ್ ಬೆಲೆ(ಹಳೇ ಬೆಲೆ) 1.15 ಲಕ್ಷ ರೂಪಾಯಿ.