ಟ್ರಾಫಿಕ್ ಪೊಲೀಸರ ಎಡವಟ್ಟು; ಹೆಲ್ಮೆಟ್ ಹಾಕದ ಬಸ್ ಚಾಲಕನಿಗೆ ದಂಡ!

By Web Desk  |  First Published Sep 21, 2019, 6:43 PM IST

ಹೊಸ ಟ್ರಾಫಿಕ್ ರೂಲ್ಸ್ ಬಂದ ಮೇಲೆ ದಂಡದ ಚಲನ್ ಹೆಚ್ಚಾಗುತ್ತಿದೆ. ಇದೀಗ ಪೊಲೀಸರ ಎಡವಟ್ಟಿನಿಂದ ಬಸ್ ಚಾಲಕ ಹೆಲ್ಮೆಟ್ ಹಾಕಿಲ್ಲ ಎಂದು ದಂಡ ಹಾಕಲಾಗಿದೆ. ಪೊಲೀಸರ ಇ ಚಲನ್‌ಗೆ ರೊಚ್ಚಿಗೆದ್ದಿರುವ ಬಸ್ ಮಾಲೀಕ ಇದೀಗ ಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದಾರೆ.


ನೋಯ್ಡಾ(ಸೆ.21): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಮೇಲೆ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರು ದುಬಾರಿ ದಂಡ ಹಾಕುತ್ತಿದ್ದಾರೆ. ಟ್ರಾಫಿಕ್ ಕ್ಯಾಮಾರ ದೃಶ್ಯ ಆಧರಿಸಿ ಇ ಚಲನ್ ಮೂಲಕವೂ ಪೊಲೀಸರು ಸವಾರರಿಗೆ ದಂಡ ಹಾಕುತ್ತಿದ್ದಾರೆ. ಇದೀಗ ನೋಯ್ಡಾ ಪೊಲೀಸರು ಮಾಡಿದ ಎಡವಟ್ಟಿದೆ ಬಸ್ ಚಾಲಕ ಮಾಡದ ತಪ್ಪಿಗೆ ದಂಡ ಕಟ್ಟಬೇಕಾಗಿದೆ.

ಇದನ್ನೂ ಓದಿ: ಕಮಿಷನರ್ ಸಾಹೇಬ್ರೇ... ಇದೇನಾ ಟ್ರಾಫಿಕ್ ಪೊಲೀಸಿಂಗ್ ಅಂದ್ರೆ?

Latest Videos

undefined

ನೋಯ್ಡಾದ ನಿರಂಕಾರ್ ಸಿಂಗ್ ಬಳಿ 40 ರಂದ 50 ಬಸ್‌ಗಳಿವೆ. ಇದರಲ್ಲಿ ಒಂದು ಬಸ್ ಚಾಲಕ ಹೆಲ್ಮೆಟ್ ಹಾಕಿಲ್ಲ ಎಂದು 500 ರೂಪಾಯಿ ದಂಡ ಹಾಕಿದ್ದಾರೆ. ನೋಯ್ಡಾ ಪೊಲೀಸರ ಇ ಚಲನ್ ಮಾಲೀಕನ ಕೈಸೇರಿದೆ. ಪೊಲೀಸರ ಎಡವಟ್ಟಿಗೆ ಆಕ್ರೋಶಗೊಂಡಿರುವ ನಿರಂಕಾರ್, ಪ್ರತಿ ದಿನ 100ಕ್ಕೂ ಹೆಚ್ಚು ಚಲನ್‌ಗಳನ್ನು ಸವಾರರಿಗೆ ಕಳುಹಿಸಲಾಗುತ್ತಿದೆ. ಇದರಲ್ಲಿ ಎಷ್ಟು ಸರಿಯಾಗಿದೆ ಅನ್ನೋ ಪ್ರಶ್ನೆ ಇದೀಗ ಮೂಡುತ್ತಿದೆ ಎಂದು ನಿರಾಂಕರ್ ಹೇಳಿದ್ದಾರೆ.

ಇದನ್ನೂ ಓದಿ: ಸೈಕಲ್‌ನಲ್ಲಿ ಬಂದ ವಿದ್ಯಾರ್ಥಿಗೂ ಬಿತ್ತು ಟ್ರಾಫಿಕ್ ಫೈನ್; ವಿಡಿಯೋ ವೈರಲ್!

ಜವಾಬ್ದಾರಿಯುತ ಸ್ಥಾನದಲ್ಲಿರುವ ಪೊಲೀಸ್ ಇಲಾಖೆ ಸೂಕ್ಷ್ಮ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಪೊಲೀಸ್ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದ್ದೇನೆ. ಅವರ ಪ್ರತಿಕ್ರಿಯೆ ಬಳಿಕ ಅವಶ್ಯಕತೆ ಇದ್ದರೆ ಕೋರ್ಟ್ ಮೆಟ್ಟಿಲು ಹತ್ತಲಿದ್ದೇನೆ ಎಂದು ನಿರಾಂಕರ್ ಹೇಳಿದ್ದಾರೆ. ಬೈಕ್ ಸವಾರನಿಗೆ ಹಾಕಬೇಕಿದ್ದ ದಂಡವನ್ನು ತಪ್ಪಾಗಿ ಬಸ್ ಚಾಲಕನಿಗೆ ಹಾಕಲಾಗಿದೆ. ತಪ್ಪುಗಳಾಗಿದ್ದರೆ ಸರಿಪಡಿಸುತ್ತೇವೆ ಎಂದು ನೋಯ್ಡಾ ಪೊಲೀಸರು ಹೇಳಿದ್ದಾರೆ. 

click me!