ಹಾರ್ಲೆ ಡೇವಿಡ್‌ಸನ್‌ ಲೈವ್‌ ವೈರ್‌ ಹಾಗೂ ಸ್ಟ್ರೀಟ್‌ 750 ಬೈಕ್‌ಗಳ ಖದರ್‌ ನೋಡಿ!

By Web Desk  |  First Published Sep 21, 2019, 5:18 PM IST

ಭಾರತದ ವಾಹನ ಮಾರಾಟ  ಇಳಿಮುಖವಾಗುತ್ತಿರುವ ಬೆನ್ನಲ್ಲೇ ಜನಪ್ರಿಯ ಹಾರ್ಲೆ ಡೇವಿಡ್ಸನ್ ಎರಡು ಹೊಸ ಬೈಕ್ ಬಿಡುಗಡೆ ಮಾಡಿದೆ. ಲೈವ್‌ ವೈರ್‌ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಟ್ರೀಟ್‌ 750 ಭಾರತದ ಮಾರುಕಟ್ಟೆ ಪ್ರವೇಸಿಸಿದೆ. ಈ ಬೈಕ್ ಕುರಿತ ಹೆಚ್ಚಿನ ವಿವರ ಇಲ್ಲಿದೆ. 


ನವದೆಹಲಿ(ಸೆ.21):  ಒಂದು ಕಡೆ ಪೊಲೀಸರ ಕಾಟ, ಇನ್ನೊಂದು ಕಡೆ ಏರ್ತಿರೋ ಪೆಟ್ರೋಲ್‌, ಡಿಸೆಲ್‌ ರೇಟು. ಸ್ವಂತ ವಾಹನಕ್ಕಿಂತ ಬಸ್‌, ಮೆಟ್ರೋನೋ ವಾಸಿ ಅನ್ನೋ ಕಾಮನ್‌ಮ್ಯಾನ್‌ ಚಿಂತನೆಯ ಫಲವೋ ಏನೋ.. ವೆಹಿಕಲ್‌ ಖರೀದಿದಾರರ ಸಂಖ್ಯೆ ಪಾತಾಳಕ್ಕಿಳಿದಿದೆ. ಹೀಗಾದ್ರೆ ಏನಪ್ಪಾ ಕತೆ ಅಂತ ಇದ್ದಬದ್ದ ವೆಹಿಕಲ್‌ ಇಂಡಸ್ಟ್ರಿಗಳೆಲ್ಲ ಆಕಾಶ ಭೂಮಿ ಒಂದು ಮಾಡ್ತಿರೋ ಕಾಲದಲ್ಲೇ ಹಾರ್ಲೆ ಡೇವಿಡ್‌ಸನ್‌ ಬೈಕ್‌ ಅಖಾಡಕ್ಕಿಳಿದಿದೆ. ಅದೂ ಸಮಕಾಲೀನ ಮಾರುಕಟ್ಟೆಯಲ್ಲಿ ನಿಧಾನಕ್ಕೆ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಎಲೆಕ್ಟ್ರಿಕ್‌ ಬೈಕ್‌ನೊಂದಿಗೆ.

ಇದನ್ನೂ ಓದಿ: ಶೀಘ್ರದಲ್ಲೇ ಕೈಗೆಟುಕುವ ದರದಲ್ಲಿ ಹಾರ್ಲೆ ಡೇವಿಡ್ಸನ್ ಬೈಕ್ ಬಿಡುಗಡೆ!

Latest Videos

undefined

ಲೈವ್‌ ವೈರ್‌!
ಇದು ಹಾರ್ಲೆ ಡೇವಿಡ್‌ಸನ್‌ನ ಹೊಸ ಬೈಕ್‌. ಎಲೆಕ್ಟ್ರಿಕ್‌ ಬೈಕ್‌ಗಳು ಇಂಡಿಯನ್‌ ಮಾರುಕಟ್ಟೆಗೆ ಹೊಸತಲ್ಲ. ಸ್ಕೂಟರ್‌ನಲ್ಲಿ ಈ ಮಾದರಿ ಈಗಾಗಲೇ ಜನಪ್ರಿಯವಾಗಿದೆ. ಆದರೆ ಲೈವ್‌ ವಯರ್‌ನ ಸ್ಪೆಷಾಲಿಟಿಯೇ ಬೇರೆ. ಇದು ಸ್ಕೂಟರ್‌ ಅಲ್ಲ, ಪಕ್ಕಾ ಸ್ಟೈಲಿಶ್‌ ಬೈಕ್‌. ಈವರೆಗೆ ಬಂದಿರುವ ಸ್ಕೂಟರ್‌ಗಳೆಲ್ಲ ಒಮ್ಮೆ ಚಾಜ್‌ರ್‍ ಮಾಡಿದರೆ ಗರಿಷ್ಠ ಅಂದರೆ 70 ಕಿಮೀ ದೂರ ಕ್ರಮಿಸಬಲ್ಲ ಸಾಮರ್ಥ್ಯದವು. ಆದರೆ ಈ ಬೈಕ್‌ ಒಮ್ಮೆ ಚಾಜ್‌ರ್‍ ಮಾಡಿದರೆ 235 ಕಿಮೀ ಓಡಬಲ್ಲದು. ಈಗಾಗಲೇ ಅಮೆರಿಕಲ್‌ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ವೈರ್‌, ಇಂಡಿಯನ್‌ ಮಾರುಕಟ್ಟೆಗೆ ಎಂಟ್ರೀ ಕೊಡಲು ಕ್ಷಣಗಣನೆ ಸಿದ್ಧವಾಗಿದೆ. ಲಿಥಿಯಂ ಐಯಾನ್‌ನ ಹೈ ವೋಲ್ಟೇಜ್‌ ಬ್ಯಾಟರಿ ಇದರಲ್ಲಿದೆ. ಮನೆಯಲ್ಲೇ ಚಾಜ್‌ರ್‍ ಮಾಡಬಹುದಾದ ಬ್ಯಾಟರಿಗಳು ಇದರಲ್ಲಿರುತ್ತವೆ.

ಇದನ್ನೂ ಓದಿ: ಹಾರ್ಲೆ ಡೇವಿಡ್ಸನ್ ಸ್ಟ್ರೀಟ್‌ಫೈಟರ್ ಬೈಕ್ ಹಿಂದಿದೆ ಭಾರತೀಯನ ಕೈಚಳಕ

ಎಲೆಕ್ಟ್ರಾನಿಕ್‌ ಕಂಟ್ರೋಲ್‌ ಸಿಸ್ಟಮ್‌ ಇಸಿಸಿ ಬೈಕ್‌ ಕಂಟ್ರೋಲಿಂಗ್‌ನಲ್ಲಿ ಮುಖ್ಯ ಪಾತ್ರ ವಹಿಸಲಿದೆ. ಲಿಕ್ವಿಡ್‌ ಕ್ರಿಸ್ಟಲ್‌ ಕಲರ್‌ನಲ್ಲಿರುವ ಈ ಬೈಕ್‌ ಕೆಲವೆ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ.

ಹಾರ್ಲೆಯ ಇನ್ನೊಂದು ಬೈಕ್‌ ಸ್ಟ್ರೀಟ್‌ 750
ಲೈವ್‌ ವೈರ್‌ ಜೊತೆಗೇ ಹಾರ್ಲೆ ಡೇವಿಡ್‌ಸನ್‌ನ ಬಹುನಿರೀಕ್ಷೆಯ ಇನ್ನೊಂದು ಬೈಕ್‌ ಮಾರುಕಟ್ಟೆಯಲ್ಲಿ ಸೌಂಡ್‌ ಮಾಡ್ತಿದೆ. ಅದು ಸ್ಟ್ರೀಟ್‌ 750. ಕ್ರೇಜಿ ಗ್ರಾಫಿಕ್‌ ಪೈಂಟ್‌ ಇರುವ ಈ ಬೈಕ್‌ಗಳ ಲಿಮಿಟೆಡ್‌ ಎಡಿಶನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. 740 ಸಿಸಿ ಲಿಕ್ವಿಡ್‌ ಕೂಲ್ಡ್‌ ಬೈಕ್‌ ಇದು. ಹಾರ್ಲೆ ಭಾರತದ ಮಾರುಕಟ್ಟೆಗೆ ಕಾಲಿಟ್ಟು ಹತ್ತು ವರ್ಷವಾದ ಸಂಭ್ರಮಕ್ಕೆ ಹಾರ್ಲೆ ಈ ಬೈಕ್‌ಅನ್ನು ಬಿಡುಗಡೆ ಮಾಡ್ತಿದೆ. ಇದರ ಇಂಧನ ಟ್ಯಾಂಕ್‌ ಮೇಲೆ ಆಕರ್ಷಕ ಪೈಂಟ್‌ನಲ್ಲಿ ಕಂಪೆನಿಯ ಸೀಲ್‌ ಜೊತೆಗೆ 10 ವರ್ಷದ ನೆನಪನ್ನು ದಾಖಲಿಸಲಾಗಿದೆ. ಸ್ಟಾಂಡರ್ಡ್‌ ವರ್ಶನ್‌ನಿಂದ 13,000 ರುಪಾಯಿ ಹೆಚ್ಚು ತೆತ್ತರೆ ಈ ವಿಶೇಷ ವಿನ್ಯಾಸ ಇರುವ ಬೈಕ್‌ಅನ್ನು ನಿಮ್ಮ ಗರೇಜ್‌ ತುಂಬಿಸಬಹುದು. ಸ್ಪೋಟ್ಸ್‌ರ್‍ ಬ್ಲ್ಯಾಕ್‌ ಬಣ್ಣದಲ್ಲಿ 6 ಗೇರ್‌ ಬಾಕ್ಸ್‌ ಹೊಂದಿದೆ. ಬ್ಯಾಲೆನ್ಸ್‌, ಲುಕ್‌, ಖದರ್‌ನಲ್ಲಿ ತನ್ನ ಮೀರಿಸುವಂತಿಲ್ಲ ಅಂತ ಸಾರಿಹೇಳ್ತಿರೋ ಸ್ಟ್ರೀಟ್‌ 750 ಹಾರ್ಲೆ ಬೈಕ್‌ ಪ್ರಿಯರಿಗೆ ಅಚ್ಚುಮೆಚ್ಚಾಗುವುದರಲ್ಲಿ ಡೌಟ್‌ ಬೇಡ. ಬೆಲೆ: 5.47 ಲಕ್ಷ (ಎಕ್ಸ್‌ಶೋರೂಂ)

click me!