ಹೆಲ್ಮೆಟ್ ಹಾಕದಿದ್ರೆ ಈ ಹೆದ್ದಾರಿಗೆ ಪ್ರವೇಶವಿಲ್ಲ| ಉತ್ತರಪ್ರದೇಶದ ಅಧಿಕಾರಿಗಳ ಹೊಸ ಉಪಾಯ
ನವದೆಹಲಿ[ಜು.16]: ಹೆಲ್ಮೆಟ್ ಹಾಕಿಕೊಳ್ರಪ್ಪಾ ಅಂಥ ಎಷ್ಟು ಸಾರಿ ಹೇಳಿದರೂ ಕೇಳಿದರೂ ಬೈಕ್ ಸವಾರರಿಗೆ ಪಾಠ ಕಲಿಸಲು ಉತ್ತರಪ್ರದೇಶದ ಅಧಿಕಾರಿಗಳು ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದಾರೆ.
ಇನ್ನು ಮುಂದೆ ಹೆಲ್ಮೆಟ್ ಹಾಕಿಕೊಳ್ಳದ ಬೈಕ್ ಸವಾರರಿಗೆ ಲಖನೌ- ಆಗ್ರಾ ಎಕ್ಸ್‌ಪ್ರೆಸ್‌ವೇನಲ್ಲಿ ಸಂಚಾರ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಎಷ್ಟುಕೇಳಿದರೂ ಕೇಳೋದಿಲ್ಲ. ಆದರೆ ನಮಗೆ ಜನರ ಪ್ರಾಣ ಮುಖ್ಯ. ಹೀಗಾಗಿ ಹೆಲ್ಮೆಟ್ ಇರದಿದ್ರೆ ಎಕ್ಸ್‌ಪ್ರೆಸ್‌ವೇ ಪ್ರವೇಶವೂ ಕೊಡಲಲ್ಲ ಎಂದು ಅಧಿಕಾರಿಗಳು ಘೋಷಿಸಿದ್ದಾರೆ.
UP Expressway Industrial Development Authority (UPEIDA) issues direction that no two wheeler be allowed to enter the Agra-Lucknow expressway without the riders wearing helmets. (file pic) pic.twitter.com/gkqVMANu4s
— ANI UP (@ANINewsUP)
ಈ ಹೆದ್ದಾರಿ ಒಟ್ಟು 302 ಕಿ.ಮೀ ಉದ್ದವಿದೆ.