ಮಾರುತಿ ಸುಜುಕಿ ಹೊಸ ಸೇವೆಯನ್ನು ಗ್ರಾಹಕರಿಗಾಗಿ ನೀಡುತ್ತಿದೆ. ಕಾರು ಸರ್ವೀಸ್ ಇನ್ಮುಂದೆ ಮತ್ತಷ್ಟು ಸುಲಭವಾಗಲಿದೆ. ಮಾರುತಿ ಸುಜುಕಿ ಸಂಸ್ಥೆಯ ನೂತನ ಸೇವೆ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಜು.15): ಭಾರತದಲ್ಲಿ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿಪುವ ಮಾರುತಿ ಸುಜುಕಿ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದೀಗ ನೂತನ ಸೇವೆ ಜಾರಿ ಮಾಡಿದೆ. ಕಾರು ಸರ್ವೀಸ್ ಮಾಡಲು ಶೋ ರೂಂ ಅಥವಾ ಸರ್ವೀಸ್ ಸೆಂಟರ್‌ಗೆ ಕಾರು ತೆಗೆದುಕೊಂಡು ಹೋಗಬೇಕಿಲ್ಲ. ಇನ್ಮುಂದೆ ಮಾರುತಿ ಸರ್ವೀಸ್ ನಿಮ್ಮ ಮನೆಬಾಗಿಲಿಗೆ ಬರಲಿದೆ.
ಇದನ್ನೂ ಓದಿ: 53 ಬಾರಿ ನಿಯಮ ಉಲ್ಲಂಘಿಸಿದ ಬೆಂಗಳೂರು ಫುಡ್ ಡೆಲಿವರಿ ಬಾಯ್!
undefined
ಮಾರುತಿ ಸುಜುಕಿ ಗ್ರಾಹಕರು ಕಾರು ಸರ್ವೀಸ್ ಮಾಡಲು ಡೂರ್ ಸ್ಟೆಪ್ ಸರ್ವೀಸ್ ಆಯ್ಕೆ ಮಾಡಿದರೆ, ಕಾರು ಸರ್ವೀಸ್ ನಿಮ್ಮ ಮನೆಬಾಗಿಲಿಗೆ ಬರಲಿದೆ. ಎಲ್ಲಾ ಸಾಮಾಗ್ರಿಗಳ ಜೊತೆ ಸರ್ವೀಸ್ ಮಾಡಲು ಮಾರುತಿ ಸುಜುಕಿ ಸೆಂಟರ್ ಆಗಮಿಸುತ್ತದೆ. ನಿಮ್ಮ ಮುಂದೆಯೇ ಕಾರು ಸರ್ವೀಸ್ ಮಾಡಿ ಕೊಡಲಿದ್ದಾರೆ.