ನಿಯಮ ಉಲ್ಲಂಘಿಸಿದ್ರೆ ದಂಡ ಇಲ್ಲ, ಪೊಲೀಸರೇ ನೀಡುತ್ತಾರೆ ಲೈಸೆನ್ಸ್, ಹೆಲ್ಮೆಟ್!

By Web DeskFirst Published Sep 15, 2019, 8:46 PM IST
Highlights

ಟ್ರಾಫಿಕ್ ನಿಯಮ  ಉಲ್ಲಂಘಿಸಿದರೆ ಕತೆ ಮುಗಿಯಿತು. ಮತ್ತೆ ಸಾಲ ಮಾಡಿ ಫೈನ್ ಕಟ್ಟಬೇಕಾದಿತು. ಇದೀಗ ನಿಯಮ ಉಲ್ಲಂಘಿಸಿದರೆ ದಂಡವಿಲ್ಲ. ಬದಲಾಗಿ ಪೊಲೀಸರೇ ಹೆಲ್ಮೆಟ್, ಲೈಸೆನ್ಸ್, ವಿಮೆ, ಎಮಿಶನ್ ಸೇರಿದಂತೆ ಹಲವು ದಾಖಲೆಗಳನ್ನು ನೀಡಲಿದ್ದಾರೆ. ಈ  ಮೂಲಕ 2ನೇ ಬಾರಿ ಇದೇ ತಪ್ಪು ಮಾಡದಂತೆ ಎಚ್ಚರ ವಹಿಸುತ್ತಿದ್ದಾರೆ. ನೂತನ ಯೋಜನೆ ಸೆ.14 ರಿಂದ ಜಾರಿಯಾಗಿದೆ. ಈ ಯೋಜನೆ ಜಾರಿಯಾಗಿದ್ದು ಎಲ್ಲಿ? ಇಲ್ಲಿದೆ ವಿವರ.

ಹೈದರಾಬಾದ್(ಸೆ.15): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬಳಿಕ  ಝೀಬ್ರಾ ಕ್ರಾಸ್ ಮಾಡಲು ವಾಹನ ಸವಾರರು ಭಯ ಪಡುತ್ತಿದ್ದಾರೆ.ಇತ್ತ ಲೈನ್ ಕ್ರಾಸ್ ಮಾಡಿದರೆ ಪೊಲೀಸರು ಹಿಡಿದು ಫೈನ್ ಹಾಕುತ್ತಿದ್ದಾರೆ. ದುಬಾರಿ ದಂಡ ನೋಡಿದ ಸಾವರರು ಬೆಚ್ಚಿ ಬೀಳುತ್ತಿದ್ದಾರೆ. ಈಗಾಗಲೇ ಲಕ್ಷ ಲಕ್ಷ ರೂಪಾಯಿಗೂ ಅಧಿಕ ದಂಡ ಹಾಕಿ  ದಾಖಲೆ ಬರೆದ ಊದಾಹರಣೆಗಳೂ ಇವೆ. ಇದರ ನಡುವೆ ನಿಯಮ ಉಲ್ಲಂಘಿಸಿದರೆ ಯಾವುದೇ ದಂಡ ಇಲ್ಲ. ಬದಲಾಗಿ ಪೊಲೀಸರು ಸವಾರರಿಗೆ ಹೆಲ್ಮೆಟೆ ಸೇರಿದಂತೆ ಎಲ್ಲಾ ದಾಖಲೆ ಪತ್ರಗಳನ್ನು ಮುಂದೆ ನಿಂತು ಮಾಡಿಸಿಕೊಡುತ್ತಿದ್ದಾರೆ. ಸೆ.14 ರಿಂದ ಈ ಯೋಜನೆ ಜಾರಿಯಾಗಿದೆ.

ಇದನ್ನೂ ಓದಿ: ಅಧಿಕೃತ ಆದೇಶ ಬರೋತನಕ ಯಥಾಪ್ರಕಾರ ದಂಡ

ಪೊಲೀಸರ ಈ ಭರ್ಜರಿ ಯೋಜನೆ ಹೈದರಾಬಾದ್‌ನಲ್ಲಿ ಮಾತ್ರ. ಇಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ದಂಡವಿಲ್ಲ. ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದರೆ, ಪೊಲೀಸರೇ ಹೆಲ್ಮೆಟ್ ನೀಡಲಿದ್ದಾರೆ. ಇನ್ನು ವಿಮೆ, ಲೈಲೆನ್ಸ್, ಎಮಿಶನ್ ಟೆಸ್ಟ್ ನಿಯಮ ಉಲ್ಲಂಘಿಸಿದರೆ, ಪೊಲೀಸರೇ ನಿಮಗೆ ಎಲ್ಲಾ ದಾಖಲೆ ಪತ್ರ ನೀಡಲಿದ್ದಾರೆ. ಹೈದರಾಬಾದ್ ಪೊಲೀಸ್ ಕಮೀಶನರ್ ರಾಚಕೊಂಡ ಈ ನೂತನ ಯೋಜನೆ ಜಾರಿಗೊಳಿಸಿದ್ದಾರೆ.

ಇದನ್ನೂ ಓದಿ: ಹೊಸ ಟ್ರಾಫಿಕ್ ರೂಲ್ಸ್: ನಿಯಮ ಉಲ್ಲಂಘಿಸುವವರಿಗೆ ಸಿಗಲಿದೆ ಫ್ರಿ ಹೆಲ್ಮೆಟ್!

ನೂತನ ಯೋಜನೆಯಲ್ಲಿ 4 ರೀತಿಯ ನಿಯಮ ಉಲ್ಲಂಘನೆಗೆ ಯಾವುದೇ ದಂಡವಿಲ್ಲ. ಹೆಲ್ಮೆಟ್ ರಹಿತ ಪ್ರಯಾಣ, ವಿಮೆ ರಹಿತ, ಲೈಸೆನ್ಸ್ ರಹಿತ ಹಾಗೂ ಎಮಿಶನ್ ರಹಿತ ಪ್ರಯಾಣ ಮಾಡಿದರೆ ಹೈದರಾಬಾದ್ ಪೊಲೀಸರು ದಂಡ ಹಾಕುವುದಿಲ್ಲ.ಈ ನಿಯಮ ಉಲ್ಲಂಘಿಸಿದವರಿಗೆ ಅಗತ್ಯ ದಾಖಲೆ ಪತ್ರ ಅಥವ ಹೆಲ್ಮೆಟ್‌ನ್ನು ಪೊಲೀಸರೆ ನೀಡಲಿದ್ದಾರೆ. ಇನ್ನುಳಿದಂತೆ ಸಿಗ್ನಲ್ ಜಂಪ್, ಒನ್ ವೇ, ನೋ ಪಾರ್ಕಿಂಗ್ ಸೇರಿದಂತೆ ಯಾವುದೇ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ಬೀಳಲಿದೆ.
 

click me!