ಭಾರತದ ಮೊದಲ ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್ ಉದ್ಘಾಟಿಸಿದ ಗಡ್ಕರಿ!

By Suvarna News  |  First Published Feb 15, 2020, 8:20 PM IST

ಭಾರತದ ಮೊದಲ ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಗೊಂಡಿದೆ. ಎರಡು ನಗರಗಳಿಗೆ ಸೇವೆ ಲಭ್ಯವಿದೆ. ನೂತನ ಇಂಟರ್ ಸಿಟಿ ಬಸ್ ಸೇವೆಯನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದ್ದಾರೆ. 


ಮುಂಬೈ(ಫೆ.15): ಎಲೆಕ್ಟ್ರಿಕ್ ವಾಹನಗಳತ್ತ ಕೇಂದ್ರ ಸರ್ಕಾರ ಹೆಚ್ಚು ಗಮನ ಹರಿಸಿದೆ. 2030ರ ವೇಳೆಗೆ ಭಾರತವನ್ನು ಸಂಪೂರ್ಣವಾಗಿ ಎಲಕ್ಟ್ರಿಕ್ ವಾಹನ ಮಯ ಮಾಡಲು ಮುಂದಾಗಿದೆ. ಈಗಾಗಲೇ ಹಲವು ಎಲೆಕ್ಟ್ರಿಕ್ ಕಾರು, ಸ್ಕೂಟರ್ ಬಿಡುಗಡೆಯಾಗಿದೆ. ಇದೀಗ ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಗೊಂಡಿದೆ.

 

Live from the Inauguration of Pune - Mumbai - Pune Electric Bus https://t.co/QxDDNUrbmP

— Nitin Gadkari (@nitin_gadkari)

Latest Videos

undefined

ಇದನ್ನೂ ಓದಿ: BS4 ವಾಹನ ಮಾರಾಟ ದಿನಾಂಕ ವಿಸ್ತರಣೆ ಇಲ್ಲ, ಸುಪ್ರೀಂ ಶಾಕ್ ಬೆನ್ನಲ್ಲೇ ಭರ್ಜರಿ ಡಿಸ್ಕೌಂಟ್!

ಮುಂಬೈ ಹಾಗೂ ಪುಣೆ ನಗರಗಳಿಗೆ ಇಂಟರ್ ಸಿಟಿ ಬಸ್ ಸೇವೆ ಆರಂಭಗೊಂಡಿದೆ. ವಿಶೇಷ ಬಸ್ ಸೇವೆಯನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದ್ದಾರೆ. 43 ಸೀಟುಗಳ ಸಾಮರ್ಥ್ಯವಿರುವ ಲಕ್ಸುರಿ ಎಲೆಕ್ಟ್ರಿಕ್ ಬಸ್‌ನ್ನು ಮಿತ್ರಾ ಮೊಬಿಲಿಟಿ ಸೊಲ್ಯುಶನ್ ನಿರ್ಮಿಸಿದೆ.

ಇದನ್ನೂ ಓದಿ: ಭಾರತೀಯ ಆಟೋಮೊಬೈಲ್‌ಗೆ ಮತ್ತೊಂದು ಹೊಡೆತ, ಮೋದಿ ಸರ್ಕಾರಕ್ಕೆ ಆತಂಕ!

ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 300 ಕಿ.ಮೀ ಪ್ರಯಾಣ ಮಾಡಲಿದೆ. ಮೊದಲ ಹಂತದಲ್ಲಿ  ದಿನಕ್ಕೆರಡು ಬಾರಿ ಇಂಟರ್ ಸಿಟಿ ಬಸ್ ಸೇವೆ ಲಭ್ಯವಿದೆ. ಇಂಟರ್ ಸಿಟಿ ಬಸ್ ಸೇವೆ ಉದ್ಘಾಟಿಸಿ ಮಾತನಾಡಿದ ನಿತಿನ್ ಗಡ್ಕರಿ, ಶೀಘ್ರದಲ್ಲೇ ಮಹಾರಾಷ್ಟ್ರದ ಇನ್ನಷ್ಟು ನಗರಗಳಿಗೆ ವಿಸ್ತರಿಸಲು ಯೋಜನೆ ರೂಪಿಸಲಾಗುವುದು ಎಂದರು.  ಕೆಲ ವರ್ಷಗಳಲ್ಲೇ ಭಾರತದ ಸಾರಿಗೆ ವ್ಯವಸ್ಥೆ ಎಲೆಕ್ಟ್ರಿಕ್ ಮಯವಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ. 

click me!