ಹೀರೋ ಮೋಟಾರ್ ಕಾರ್ಪ್ ತನ್ನ ದ್ವಿಚಕ್ರವಾಹನಗಳನ್ನು BS6 ಎಮಿಶನ್ ಎಂಜಿನ್‌ಗೆ ಪರಿವರ್ತಿಸುತ್ತಿದೆ. ಇದೀಗ ಸ್ಪ್ಲೆಂಡರ್ ಪ್ಲಸ್ ಬೈಕ್ BS6 ಎಂಜಿನ್ ಅಪ್‌ಗ್ರೇಡ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನೂತನ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ನವದೆಹಲಿ(ಫೆ.15): ಈಗಾಗಲೇ ಸುಪ್ರೀಂ ಕೋರ್ಟ್ BS4 ವಾಹನಗಳ ಮಾರಾಟ ದಿನಾಂಕ ವಿಸ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಆಟೋಮೊಬೈಲ್ ಕಂಪನಿಗಳು ಕೆಲ ದಿನಗಳಲ್ಲೇ ತಮ್ಮ ವಾಹನಗಳನ್ನು BS6 ಎಂಜಿನ್ ಆಗಿ ಪರಿವರ್ತಿಸಬೇಕಿದೆ. ಹಲವು ಕಂಪನಿಗಳು BS6 ಎಂಜಿನ್ ವಾಹನ ಬಿಡುಗಡೆ ಮಾಡಿದೆ. ಇದೀಗ ಹೀರೋ ಮೋಟಾರ್ ಕಾರ್ಪ್ ತನ್ನು ಸ್ಪ್ಲೆಂಡರ್ ಪ್ಲಸ್ ಬೈಕ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಬಜಾಜ್ ಪಲ್ಸರ್ 150 BS6 ಬೈಕ್ ಬಿಡುಗಡೆ; ಬೆಲೆ ವಿಶೇಷತೆ ಇಲ್ಲಿದೆ!.
undefined
BS6 ಎಂಜಿನ್ ಅಪ್‌ಗ್ರೇಡ್ ನೂತನ ಸ್ಪ್ಲೆಂಡರ್ ಪ್ಲಸ್ ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನೂತನ ಬೈಕ್ ಬೆಲೆ 59,600 ರೂಪಾಯಿ(ಎಕ್ಸ್ ಶೋ ರೂಂ). ಸ್ಪ್ಲೆಂಡರ್ ಜೊತೆಗೆ ಹೀರೋ ಡೆಸ್ಟಿನಿ 125, ಮಾಸ್ಟ್ರೋ ಎಡ್ಜ್ ಸ್ಕೂಟರ್ ಕೂಡ BS6 ಎಂಜಿನ್ ಅಪ್‌ಗ್ರೇಡ್ ಆಗಿ ಪರಿವರ್ತನೆಯಾಗಿದೆ.
ಇದನ್ನೂ ಓದಿ: Auto expo 2020: ಸುಜುಕಿ ಕಟಾನಾಗೆ ಬೆಸ್ಟ್ ಬೈಕ್ ಪ್ರಶಸ್ತಿ!
ನೂತನ ಹಿರೋ ಡೆಸ್ಟಿನಿ ಬೆಲೆ 64,310 ರೂಪಾಯಿ(ಎಕ್ಸ್ ಶೋ ರೂಂ) ಹಾಗೂ ಮಾಸ್ಟ್ರೋ ಎಡ್ಜ್ ಬೆಲೆ 67,950 ರೂಪಾಯಿ(ಎಕ್ಸ್ ಶೋಂ ರೂಂ). ಈ ಮೂಲಕ ಹೀರೋ ಮೋಟಾರ್ ಕಾರ್ಪ್ ಸಂಸ್ಥೆಯ ಬಹುತೇಕ ದ್ವಿಚಕ್ರ ವಾಹನಗಳು BS6 ಎಂಜಿನ್ ಅಪ್‌ಗ್ರೇಡ್ ಆಗಿದೆ.