ನಿಸಾನ್ ಮ್ಯಾಗ್ನೈಟ್ ಭಾರತದ ಅತ್ಯಂತ ಕಡಿಮೆ ಬೆಲೆ SUV ಕಾರು!

By Suvarna News  |  First Published Nov 8, 2020, 4:04 PM IST

ನಿಸಾನ್ ಮ್ಯಾಗ್ನೈಟ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಆಕರ್ಷಕ ಲುಕ್, ಎಂಜಿನ್ ಸಾಮರ್ಥ್ಯ ಹೊಂದಿರುವ SUV ಕಾರು ಇದೀಗ ಪ್ರತಿಸ್ಪರ್ಧಿಗಳಿ ಅತೀ ದೊಡ್ಡ ಶಾಕ್ ನೀಡಲು ಸಜ್ಜಾಗಿದೆ. ಬಿಡುಗಡೆ ಮುನ್ನ ನಿಸಾನ್ ಮ್ಯಾಗ್ನೈಟ್ ಕಾರಿನ ಬೆಲೆ ಬಹಿರಂಗವಾಗಿದೆ. 


ನವದೆಹಲಿ(ನ.08): ಮುಂದಿನ ತಿಂಗಳು ನಿಸಾನ್ ಮ್ಯಾಗ್ನೈಟ್  SUV ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ. ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಹೀಂದ್ರ ಎಕ್ಸ್‌ಯುವಿ 300, ಕಿಯಾ ಸೊನೆಟ್ ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ನಿಸಾನ್ ಮ್ಯಾಗ್ನೈಟ್ ಕಾರು ಬಿಡುಗಡೆಯಾಗಲಿದೆ. ಸದ್ಯ ಭಾರತದಲ್ಲಿ ಕಿಯಾ ಸೊನೆಟ್ ಅತ್ಯಂತ ಕಡಿಮೆ ಬೆಲೆಯ ಸಬ್ ಕಾಂಪಾಕ್ಟ್ SUV ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಇದೀಗ ನಿಸಾನ್ ಮ್ಯಾಗ್ನೈಟ್ ಕಡಿಮೆ ಬೆಲೆ ಮಾತ್ರವಲ್ಲ, ಕೈಗೆಟುಕುವ ದರದಲ್ಲಿ ಕಾರು ಬಿಡುಗಡೆ ಮಾಡುತ್ತಿದೆ.

Tap to resize

Latest Videos

undefined

ನಿಸಾನ್ ನೂತನ SUV ಕಾರಿಗೆ ಮ್ಯಾಗ್ನೈಟ್ ಹೆಸರು, ಶೀಘ್ರದಲ್ಲಿ ಬಿಡುಗಡೆ!

ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ನಿಸಾನ್ ಮ್ಯಾಗ್ನೈಟ್ ಕಾರಿನ ಬೆಲೆ 5.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಹೇಳಲಾಗುತ್ತಿದೆ. ಹೀಗಾದಲ್ಲಿ ಇದು ಅತ್ಯಂತ ಕಡಿಮೆ ಬೆಲೆ ಹಾಗೂ ಕೈಗೆಟುಕುವ ದರ  SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದು ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರಿನ ಬೆಲೆಗಿಂತ ಕಡಿಮೆಯಾಗಿದೆ.

ಹೆಚ್ಚಾದ ಪೈಪೋಟಿ; ನಿಸಾನ್ ಕಿಕ್ಸ್ XE ಕಾರು ಬಿಡುಗಡೆ!

ನಿಸಾನ್ ಮ್ಯಾಗ್ನೈಟ್ ಕಾರಿನ ಗರಿಷ್ಠ ಬೆಲೆ 9 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ.  ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಲು ರೆಡಿಯಾಗಿರುವ ನಿಸಾನ್ ಇದೀಗ ಕೈಗೆಟುಕುವ ದರಗ ಕಾರು ಹೊರತರುತ್ತಿದೆ. ಭಾರತದಲ್ಲಿ  SUV ಕಾರುಗಳಿಗೆ ಹೆಚ್ಚಿನ ಬೇಡಿಕೆ ಹೆಚ್ಚಾಗುತ್ತಿದೆ. ಇದೇ ವೇಳೆ ನಿಸಾನ್ ಭಾರತೀಯ ಮಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿದೆ.

ಅಕ್ಟೋಬರ್ ತಿಂಗಳಲ್ಲಿ ನಿಸಾನ್ ಮ್ಯಾಗ್ನೈಟ್ ಕಾರು ಅನಾವರಣಗೊಂಡಿದೆ. XE, XL, XV ಹಾಗೂ XV ಪ್ರಿಮಿಯಂ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ನಿಸಾನ್ ಮ್ಯಾಗ್ನೈಟ್ ಕಾರು ಲಭ್ಯವಿದೆ. ಇನ್ನು HRA0 1.0 ಲೀಟರ್ ಎಂಜಿನ್ ವೇರಿಯೆಂಟ್ ಲಭ್ಯವಿದೆ. ಇದು 97 bhp ಗರಿಷ್ಠ ಪವರ್ ಹಾಗೂ   160 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

click me!