FASTag ನಿಯಮ ಮತ್ತಷ್ಟು ಕಠಿಣ, 2021ರ ಜನವರಿಯಿಂದ ಹೊಸ ನಿಯಮ ಜಾರಿ!

By Suvarna News  |  First Published Nov 8, 2020, 3:14 PM IST

ದೇಶದಲ್ಲಿ ಸುಗಮ ಸಂಚಾರಕ್ಕೆ ಅನುಮಾಡಿಕೊಡಲು ಹಾಗೂ ಇತರ ಸಮಸ್ಯೆಗೆ ಮುಕ್ತಿ ಹಾಡಲು ವಾಹನಗಳಿಗೆ ಫಾಸ್ಟ್ ಟ್ಯಾಗ್(FASTag) ಕಡ್ಡಾಯ ಮಾಡಲಾಗಿದೆ. 2019ರಲ್ಲಿ ಟೋಲ್ ಗೇಟ್‌ಗಳಲ್ಲಿ ಫಾಸ್ಟ್ ಟ್ಯಾಗ್ ಬಳಕೆ ಕಡ್ಡಯಾವಾಗಿದೆ. ಇದೀಗ FASTag ನಿಮಯದಲ್ಲಿ ಮತ್ತೆ ತಿದ್ದುಪಡಿ ಮಾಡಲಾಗಿದೆ. ಹೊಸ ವರ್ಷದಿಂದ ನೂತನ ನಿಯಮ ಜಾರಿಗೆ ಬರಲಿದೆ.
 


ನವದೆಹಲಿ(ನ.07): ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾದಿಕಾರ ಇದೀದ ಫಾಸ್ಟ್ ಟ್ಯಾಗ್(FASTag) ನಿಯಮ ಮತ್ತಷ್ಟು ಬಿಗಿಗೊಳಿಸಿದೆ. ಡಿಸೆಂಬರ್ 1, 2017ರಿಂದ ಎಲ್ಲಾ ಹೊಸ ವಾಹನಗಳ ಖರೀದಿ ವೇಳೆ FASTag ಕಡ್ಡಾಯವಾಗಿ ಅಳವಡಿ ಮಾಡಬೇಕು ಅನ್ನೋ ನಿಯಮ ತರಲಾಗಿದೆ. ಇನ್ನ 2019ರಿಂದ ಎಲ್ಲಾ ವಾಹನಗಳು FASTag ಬಳಕೆ ಮಾಡಲು ಸೂಚಿಸಿದೆ. ಆದರೆ ಈ ನಿಯಮದಲ್ಲಿ ಹಳೇ ವಾಹನಗಳಿಗೆ ವಿನಾಯಿತಿ ನೀಡಲಾಗಿತ್ತು. ಇದೀಗ ಎಲ್ಲಾ ವಿನಿಯಾತಿ ರದ್ದುಗೊಳಿಸಿದ್ದು, ಹಳೇ ಹಾಗೂ ಹೊಸ ಎಲ್ಲಾ ನಾಲ್ಕು ಚಕ್ರ ವಾಹನಗಳು ಕಡ್ಡಾಯವಾಗಿ FASTag ಬಳಕೆ ಮಾಡಬೇಕು.

ವಾಹನ ಸವಾರರೇ ಎಚ್ಚರ : ಡಬಲ್ ಹಣ ಕಟ್ಬೇಕಾಗುತ್ತೆ !

Tap to resize

Latest Videos

undefined

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾದಿಕಾರ(MoRTH) ಮೋಟಾರು ವಾಹನ ಕಾಯ್ದೆ ತಿದ್ದುಪಡಿ ತಂದಿದ್ದು, 2017ಕ್ಕಿಂತ ಹಿಂದಿನ ಹಾಗೂ ನಂತರದ ಎಲ್ಲಾ ವಾಹನಗಳಿಗೆ FASTag ಕಡ್ಡಾಯ ಮಾಡಲಾಗಿದೆ. ನೂತನ ನಿಯಮ 2021ರ ಜನವರಿಯಿಂದ ಜಾರಿಗೆ ಬರಲಿದೆ. 

ಇನ್ನು ಹಳೆ ವಾಹನಗಳಿಗೆ ಫಿಟ್‌ನೆಸ್ ಸರ್ಟಿಫಿಕೇಟ್ ಅಗತ್ಯ. ಫಿಟ್‌ನೆಸ್ ಸರ್ಟಿಫಿಕೇಟ್ ಮಾಡಿಸಲು ಫಾಸ್ಟ್ ಟ್ಯಾಗ್ ಅಳವಡಿಸಿರಬೇಕು. ಥರ್ಡ್ ಪಾರ್ಟಿ ವಿಮೆ ಮಾಡಸಲು ಕೂಡ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಇದುವರೆಗೆ ಹಳೇ ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಸಿದೆ ಸಂಚರಿಸಲು ಅವಕಾಶವಿತ್ತು. ಟೋಲ್ ಬಳಿಕ ನಗದು ಹಣ ನೀಡಿ ಟೋಲ್ ದಾಟಲು ಒಂದು ಲೇನ್ ಇಡಲಾಗಿತ್ತು. 

2021ರ ಜನವರಿಯಿಂದ ಎಲ್ಲಾ ವಾಹನಗಳು ಫಾಸ್ಟ್ ಟ್ಯಾಗ್ ಕಡ್ಡಾಯವಾಗಿ ಅಳವಡಿಸಬೇಕಿದೆ. ಇನ್ನು ನಗದು ಹಣ ನೀಡಿ ಟೋಲ್ ದಾಡುವ ಪರಿಪಾಠಕ್ಕೂ ಬ್ರೇಕ್ ಬೀಳಲಿದೆ. ಹೀಗಾಗಿ ಫಾಸ್ಟ್ ಟ್ಯಾಗ್ ಇಲ್ಲದಿದ್ದರೆ, ಟೋಲ್ ದಾಟವುದು ಅಸಾಧ್ಯವಾಗಲಿದೆ.

click me!