ದೀಪಾವಳಿಗೆ ಭರ್ಜರಿ ಆಫರ್ ಘೋಷಿಸಿದ ನಿಸಾನ್, ಗರಿಷ್ಠ 55,000 ರೂ ಡಿಸ್ಕೌಂಟ್!

By Suvarna News  |  First Published Nov 7, 2020, 9:00 PM IST

ದೀಪಾವಳಿ ಹಬ್ಬಕ್ಕೆ ನಿಸಾನ್ ಇಂಡಿಯಾ ಭರ್ಜರಿ ಆಫರ್ ಘೋಷಿಸಿದೆ. ನಿಸಾನ್ ಕಿಕ್ಸ್ ಕಾರು ಖರೀದಿಸುವ ಗ್ರಾಹಕರಿಗೆ ಈ ಆಫರ್ ಅನ್ವಯವಾಗಲಿದೆ. ನೂತನ ಆಫರ್ ಕುರಿತ ಮಾಹಿತಿ ಇಲ್ಲಿದೆ.


ನವದೆಹಲಿ(ನ.07): ದೀಪಾಳಿ ಹಬ್ಬಕ್ಕೆ ಭಾರತೀಯ ಆಟೋಮೊಬೈಲ್ ಕಂಪನಿಗಳು ಡಿಸ್ಕೌಂಟ್ ಆಫರ್ ಘೋಷಿಸುತ್ತಿದೆ. ಇದೀಗ ನಿಸಾನ್ ಭರ್ಜರಿ ಆಫರ್ ಘೋಷಿಸಿದೆ. ನಿಸಾನ್ ಕಿಕ್ಸ್ SUV ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ನೀಡಿದೆ. ಗರಿಷ್ಠ 55,000 ರೂಪಾಯಿ ಡಿಸ್ಕೌಂಟ್ ಘೋಷಿಸಿದೆ.

Tap to resize

Latest Videos

undefined

ಹೊಚ್ಚ ಹೊಸ SUV ನಿಸಾನ್ ಮ್ಯಾಗ್ನೈಟ್ ಬಿಡುಗಡೆ: ಹೆಚ್ಚಾಯ್ತು ಪೈಪೋಟಿ!.

ದೀಪಾವಳಿ ಹಬ್ಬದ ಪ್ರಯುಕ್ತ ನಿಸಾನ್ ಕಿಕ್ಸ್ SUV ಕಾರಿನ ಮೇಲೆ ಎಕ್ಸ್‌ಜೇಂಜ್ ಬೋನಸ್ 40,000 ರೂಪಾಯಿ ಆಫರ್ ನೀಡಲಾಗಿದೆ. ಇನ್ನು ಹಬ್ಬದ ಬೋನಸ್ 15,000 ರೂಪಾಯಿ ಆಫರ್ ನೀಡಲಾಗಿದೆ. ಈ ಆಫರ್ ನವೆಂಬರ್ 15ರ ವರೆಗೆ ಇರಲಿದೆ.

XL, XV, XV ಪ್ರಿಮಿಯಂ ಹಾಗೂ XV ಪ್ರಿಮಿಂಯ (O)  ಸೇರಿದಂತೆ 8 ವೇರಿಯೆಂಟ್‌ಗಳಲ್ಲಿ BS6 ನಿಸಾನ್ ಕಿಕ್ಸ್ ಕಾರು ಲಭ್ಯವಿದೆ. ಕಾಸ್ಕೇಡಿಂಗ್ ಗ್ರಿಲ್, LED ಹೆಡ್‌ಲ್ಯಾಂಪ್ಸ್, ಮಸ್ಕಲರ್ ಬೊನೆಟ್, ಸಿಲ್ವರ್ ಕಲರ್ ಸ್ಕಿಡ್ ಪ್ಲೇಟ್, ಸಿಲ್ವರ್ ರೂಫ್ ರೈಲ್ಸ್,  ಇಂಡಿಕೇಟರ್ ಮೌಂಟೆಡ್ ORVMs, ಅಲೋಯ್ ವೀಲ್ಸ್ ಸೇರಿದಂತೆ ಹಲವು ವಿಶೇತೆಗಳು ಈ ಕಾರಿನಲ್ಲಿದೆ.
 

click me!