ನಿಸಾನ್ ನೂತನ SUV ಕಾರಿಗೆ ಮ್ಯಾಗ್ನೈಟ್ ಹೆಸರು, ಶೀಘ್ರದಲ್ಲಿ ಬಿಡುಗಡೆ!

By Suvarna News  |  First Published Jul 17, 2020, 6:53 PM IST

ಮಾರುತಿ ಬ್ರೆಜಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಸೇರಿದಂತೆ ಸಬ್ ಕಾಂಪಾಕ್ಟ್ SUVಗೆ ಪ್ರತಿಸ್ಪರ್ಧಿಯಾಗಿ ಇದೀಗ ನಿಸಾನ್ ನೂತನ SUV ಕಾರು ಬಿಡುಗಡೆ ಮಾಡುತ್ತಿದೆ. ಮ್ಯಾಗ್ನೈಟ್ ಎಂದು ಹೆಸರಿಟ್ಟಿರುವ ಈ ಕಾರು ಆತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ. ನೂತನ ಕಾರಿನ ವಿವರ ಇಲ್ಲಿದೆ.


ಬೆಂಗಳೂರು(ಜು.16): : ನಿಸಾನ್ ಇಂಡಿಯಾ ಇಂದು ತನ್ನ ಬಹುನಿರೀಕ್ಷಿತ ಬಿ-ಎಸ್ ಯುವಿಯ ಪರಿಕಲ್ಪನೆಯನ್ನು ಬಹಿರಂಗಪಡಿಸಿದೆ. ತಂತ್ರಜ್ಞಾನದಿಂದ ಶ್ರೀಮಂತಗೊಂಡಿದೆ ಮತ್ತು ಸ್ಟೈಲಿಶ್ ಆಗಿರುವ ಬಿ-ಎಸ್ ಯುವಿಗೆ ನಿಸಾನ್ ಮ್ಯಾಗ್ನೈಟ್ ಎಂಬ ಹೆಸರಿಡಲಾಗಿದ್ದು, ಭಾರತದಲ್ಲಿ 2020 ನೇ ಸಾಲಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.

Tap to resize

Latest Videos

undefined

ಶೀಘ್ರದಲ್ಲೇ ಭಾರತದಲ್ಲಿ ನಿಸಾನ್ B-SUV ಬಿಡುಗಡೆ; ಕುತೂಹಲ ಹೆಚ್ಚಿಸಿದ ಕಾರು!..

ಮ್ಯಾಗ್ನೆಟ್ ಅನ್ನು ಮ್ಯಾಗ್ನೆಟಿಕ್ ಮತ್ತು ಇಗ್ನೈಟ್ ಪದಗಳಿಂದ ಸಮ್ಮಿಳಿತಗೊಂಡಿದೆ. ಮ್ಯಾಗ್ನೆಟಿಕ್ ವಿನ್ಯಾಸ ಮತ್ತು ಗುಣಲಕ್ಷಣಗಳಿಂದ ಗ್ರಾಹಕರನ್ನು ಆಕರ್ಷಿಸಲಿದ್ದರೆ, ಭಾರತದಲ್ಲಿ ಹೊಸ ಯುಗವನ್ನು ಆರಂಭ ಮಾಡುವ ನಿಸಾನ್ ನ ಆಕಾಂಕ್ಷೆಯನ್ನು ಇಗ್ನೈಟ್ ಎತ್ತಿ ತೋರಿಸುತ್ತದೆ.

ನಿಸಾನ್ ಕಿಕ್ಸ್-ಜೂಮ್ ಕಾರು ಒಪ್ಪಂದ; ಬೆಂಗಳೂರಿಗರಿಗೆ ಭರ್ಜರಿ ಕೊಡುಗೆ!.

ನಿಸಾನ್ ನ ಜಾಗತಿಕ SUV ಡಿಎನ್ಎನಲ್ಲಿ ನಿಸಾನ್ ಮ್ಯಾಗ್ನೈಟ್ ಒಂದು ವಿಕಸನದ ದಿಟ್ಟ ಹೆಜ್ಜೆಯಾಗಿದೆ. ಕಟ್ಟಿಂಗ್ ಹೆಡ್ಜ್ ತಂತ್ರಜ್ಞಾನವನ್ನು ಒಳಗೊಂಡಿರುವ ಈ ವಾಹನ ತನ್ನ ವಿಭಾಗದಲ್ಲಿ ಗೇಮ್ ಚೇಂಜರ್ ಆಗಲಿದೆ. ಸಬ್-ಫೋರ್-ಮೀಟರ್ ವಿಭಾಗದಲ್ಲಿ ಇದೊಂದು ಬೋಲ್ಡ್ ಆದ ಆಫರ್ ಆಗಿದ್ದು, ಬಿ-ಎಸ್ ಯುವಿ ಉದ್ಯಮದಲ್ಲಿ ನಿಸಾನ್ ಮ್ಯಾಗ್ನೈಟ್ ಹೊಸ ವ್ಯಾಖ್ಯಾನ ಬರೆಯಲಿದೆ ಎಂದು ನಿಸಾನ್ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಹೇಳಿದರು.

ಈ ನಿಸಾನ್ ಮ್ಯಾಗ್ನೈಟ್ ಅನ್ನು ಮೇಕ್ ಇನ್ ಇಂಡಿಯಾ ಮೇಕ್ ಫಾರ್ ದಿ ವರ್ಲ್ಡ್ ತತ್ತ್ವದ ಆಧಾರದಲ್ಲಿ ತಯಾರಿಸಲಾಗುತ್ತಿದ್ದು, ಜಪಾನ್ ನಲ್ಲಿ ವಿನ್ಯಾಸಗೊಳಿಸಲಾಗಿದೆ. ಒಟ್ಟಾರೆ, ಭಾರತೀಯ ಗ್ರಾಹಕರ ನಿರೀಕ್ಷೆಗಳು ಮತ್ತು ಅಗತ್ಯತೆಗಳಿಗೆ ತಕ್ಕಂತೆ ವಾಹನವನ್ನು ತಯಾರಿಸಲಾಗುತ್ತಿದೆ ಎಂದರು.

ಶಕ್ತಿಶಾಲಿಯಾದ ಮತ್ತು ಡೈನಾಮಿಕ್ ರೋಡ್ ಪ್ರೆಸೆನ್ಸ್ ಅನ್ನು ನೀಡಲಿರುವುದರೊಂದಿಗೆ ಸ್ಟೈಲಿಶ್ ಆಗಿರುವ ನಿಸಾನ್ ಮ್ಯಾಗ್ನೈಟ್ ಪ್ರೀಮಿಯಂ ಆಫರ್ ಅನ್ನು ಒಳಗೊಂಡಿದೆ.

click me!