ಜಾವಾ ಪೆರಾಕ್ ಬೈಕ್ ಡೆಲಿವರಿ ಆರಂಭ; ಟೆಸ್ಟ್ ರೈಡ್‌ಗೂ ಲಭ್ಯ!

By Suvarna NewsFirst Published Jul 16, 2020, 6:16 PM IST
Highlights

ಕ್ಲಾಸಿಕ್ ಲೆಜೆಂಡ್ ಮಾಲೀಕತ್ವದ ಜಾವಾ ಬೈಕ್ ಮೇಲೆ ಡೆಲಿವರಿ ಸರಿಯಾಗಿ ಆಗುತ್ತಿಲ್ಲ ಅನ್ನೋ ಆರೋಪಗಳಿವೆ. ಇದೀಗ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಂಡು ಜಾವಾ ಪೆರಾಕ್ ಡೆಲಿವರಿ ಆರಂಭಿಸಿದೆ. ಟೆಸ್ಟ್ ರೈಡ್‌ಗೂ ಲಭ್ಯವಿದೆ.
 

ಮುಂಬೈ(ಜು.16): ಜಾವಾ ಮೋಟಾರ್‌ಸೈಕಲ್ ಮತ್ತೆ ಸದ್ದು ಮಾಡತೊಡಗಿದೆ. ದಶಕಗಳ ಬಳಿಕ ಜಾವಾ ಮೋಟಾರ್ ಭಾರತದಲ್ಲಿ ಮತ್ತೆ ಬಿಡುಗಡೆಯಾಗಿತ್ತು ಜಾವಾ 42, ಹಾಗೂ ಜಾವಾ ಕ್ಲಾಸಿಕ್ ಬೈಕ್ ಮೂಲಕ ಹಳೇ ನೆನಪನ್ನು ಮತ್ತೆ ತಂದಿತ್ತು. ಈ ಬೈಕ್ ವರ್ಷಾಚರಣೆಗೆ ಜಾವಾ ಪೆರಾಕ್ ಬೊಬರ್ ಬೈಕ್ ಬಿಡುಗಡೆಯಾಗಿತ್ತು. ಬುಕಿಂಗ್ ಆರಂಭಿಸಿದ್ದ ಕ್ಲಾಸಿಕ್ ಲೆಜೆಂಡ್ಸ್ ಜಾವಾ, ಇದೀಗ ಜಾವಾ ಪೆರಾಕ್ ಬೈಕ್ ಡೆಲಿವರಿ ಆರಂಭಿಸಿದೆ. ಇಷ್ಟೇ ಅಲ್ಲ ಟೆಸ್ಟ್ ರೈಡ್‌ಗೂ ಲಭ್ಯವಿದೆ.

ಜಾವಾ ಮೀಟರ್, ಬೊಲೆರೋ ಕನ್ಸೋಲ್; ಮಹೀಂದ್ರ ವೆಂಟಿಲೇಟರ್ ಹಿಂದಿದೆ ರೋಚಕ ಕತೆ!.

ಜಾವಾ ಪೆರಾಕ್ ಬೈಕ್ ಬುಕ್ ಮಾಡಿದ ಗ್ರಾಹಕರಿಗೆ ಜುಲೈ 20 ರಿಂದ ಡೆಲಿವರಿ ಆರಂಭಗೊಂಡಿದೆ.  ಸದ್ಯ ಜಾವಾ ಪೆರಾಕ್‌ಗೆ ಪ್ರತಿಸ್ಪರ್ಧಿ ಇಲ್ಲ. ಹೀಗಾಗಿ ಜಾವೆ ಪೆರಾಕ್ ಮಾರುಕಟ್ಟೆ ಹೊಸ ಟ್ರೆಂಡ್ ಸೃಷ್ಟಿ ಮಾಡಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಪ್ರತಿಸ್ಪರ್ಧಿ ಬೊಬರ್ ವಿಭಾಗದಲ್ಲಿ ಬೈಕ್ ಲಭ್ಯವಿದ್ದರೂ ದುಬಾರಿಯಾಗಿದೆ. 

ಯುರೋಪ್‌ನಲ್ಲಿ ಮಹೀಂದ್ರ ಮಾಲೀಕತ್ವದ ಜಾವಾ ಮೋಟಾರ್‌ಸೈಕಲ್ ಬಿಡುಗಡೆಗೆ ತಯಾರಿ!.

ಜಾವಾ ಪೆರಾಕ್ ಬೈಕ್ ಬೆಲೆ 1.94 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಸದ್ಯ ಕೊರೋನಾ ವೈರಸ್ ಹೊಡೆತದಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಜಾವಾ ಪೆರಾಕ್ ಗ್ರಾಹಕರಿಗೆ ವಿಶೇಷ ಆಫರ್ ನೀಡುತ್ತಿದೆ.  0 ಡೌನ್‌ಪೇಮೆಂಟ್, ಆರಂಭಿಕ 3 ತಿಂಗಳು 50% EMI ಕಡಿತ ಸೇರಿದಂತೆ ಹಲವು ಆಫರ್ ನೀಡಲಾಗಿದೆ. ವಿಶೇಷ EMI 6,666 ರೂಪಾಯಿ ಹಾಗೂ 8,000 ರೂಪಾಯಿ(0 ಡೌನ್ ಪೇಮೆಂಟ್) ಆಯ್ಕೆಯನ್ನೂ ನೀಡಿದೆ.

ಜಾವಾ ಪೆರಾಕ್ ಬೈಕ್ 334 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಫ್ಯುಯೆಲ್ ಇಂಜೆಕ್ಟೆಡ್, DOHC ಎಂಜಿನ್ ಹೊಂದಿದ್ದು, 30.64 ps ಪವರ್ ಹಾಗೂ 32.74 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಬಿಎಸ್ 6 ಎಂಜಿನ್ ಹೊಂದಿದ್ದು, 6 ಸ್ಪೀಡ್ ಟ್ರಾನ್ಸ್‌ಮಿಶನ್ ಹೊಂದಿದೆ.

click me!