ಬೇಸಿಗೆಯಲ್ಲಿ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಿದ ನಿಸ್ಸಾನ್!

Published : Apr 23, 2019, 04:09 PM IST
ಬೇಸಿಗೆಯಲ್ಲಿ  ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಿದ ನಿಸ್ಸಾನ್!

ಸಾರಾಂಶ

ನಿಸ್ಸಾನ್ ಕಾರು ಗ್ರಾಹಕರಿಗೆ ಬಂಪರ್ ಕೊಡುಗೆ  ನೀಡಲಾಗಿದೆ. ಉರಿ ಬಿಸಿಲಿಗೆ ದಣಿದಿರುವ ನಿಸಾನ್ ಕಾರು ಗ್ರಾಹಕರು ಈ ಸೇವೆ ಬಳಸಿಕೊಳ್ಳಲು ನಿಸ್ಸಾನ್ ಮನವಿ ಮಾಡಿದೆ. ಇಲ್ಲಿದೆ ನಿಸ್ಸಾನ್ ಕೊಡುಗೆ ವಿವರ.

ನವದೆಹಲಿ(ಏ.23): ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತನ್ನ ಕಂಪೆನಿಯ ಕಾರ್‌ಗಳ ಏರ್‌ ಕಂಡೀಶನರ್‌ಅನ್ನು ಸುಸ್ಥಿತಿಯಲ್ಲಿಡಲು ನಿಸ್ಸಾನ್‌ ಕಂಪೆನಿ ಏರ್‌ ಕಂಡೀಷನ್‌ ತಪಾಸಣಾ ಕ್ಯಾಂಪ್‌ಅನ್ನು ಆಯೋಜಿಸಿದೆ. ಇದು ಕಂಪೆನಿಯ ನಿಸ್ಸಾನ್‌ ಹಾಗೂ ದಾಟ್ಸುನ್‌ ಕಾರ್‌ಗಳಿಗೆ ಅನ್ವಯಿಸುತ್ತದೆ. ಮೇ 31ರ ತನಕ ಈ ಕ್ಯಾಂಪ್‌ ಡೀಲರ್‌ಶಿಪ್‌ಗಳಲ್ಲಿ ನಡೆಯಲಿದೆ.

ಇದನ್ನೂ ಓದಿ: BMW ಹೊಸ Z4 ರೋಡ್‌ಸ್ಟರ್‌ ಕಾರು ಬಿಡುಗಡೆ

ಈ ಕುರಿತು ಮಾತನಾಡಿದ ನಿಸ್ಸಾನ್‌ ಮೋಟರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಇಂಡಿಯಾದ ಮುಖ್ಯಸ್ಥ ಅತುಲ್‌ಅಗರ್‌ವಾಲ್‌, ‘ತನ್ನ ಗ್ರಾಹಕರಿಗೆ ಆಫ್ಟರ್‌ ಸೇಲ್ಸ್‌ ಅನುಭವ ಒದಗಿಸಲು ನಿಸ್ಸಾನ್‌ ಸದಾ ಶ್ರಮಿಸುತ್ತದೆ. ನಮ್ಮ ಗ್ರಾಹಕರ ಕಾರುಗಳ ಎ ಸಿ ವ್ಯವಸ್ಥೆಯನ್ನು ಪೂರ್ವಭಾವಿಯಾಗಿ ತಪಾಸಣೆ ನಡೆಸುವುದು ಹಾಗೂ ಅಗತ್ಯಇರುವ ಸರ್ವಿಸ್‌ಗಳನ್ನು ಶಿಫಾರಸು ಮಾಡುವುದೇ ಈ ಕ್ಯಾಂಪ್‌ನ ಪ್ರಮುಖಉದ್ದೇಶ,’ ಎಂದು ಹೇಳಿದರು. ಈ ಕ್ಯಾಂಪ್‌ನಲ್ಲಿ ಉಚಿತವಾಗಿ ಕಾರಿನ ಟಾಪ್‌ವಾಶ್‌ ಮಾಡಲಾಗುತ್ತದೆ. ಜತೆಗೆ ಆಕ್ಸೆಸರಿಗಳಲ್ಲಿ ಆಕರ್ಷಣೀಯ ಕೊಡುಗೆಗಳು ದೊರೆಯಲಿದೆ. ಬಿಡಿಭಾಗಗಳ ಖರೀದಿಯಲಿ ್ಲಆಫರ್‌ ಘೋಷಿಸಲಾಗಿದ್ದು, ಲೇಬರ್‌ಚಾಚ್‌ರ್‍ನಲ್ಲಿ ಶೇ. 20ರಷ್ಟುರಿಯಾಯಿತಿ ಸಿಗಲಿದೆ.
 

PREV
click me!

Recommended Stories

ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?
Virat Kohli to KL Rahul: ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು