ಮಾರ್ಚ್ ತಿಂಗಳಲ್ಲಿ ಮಾರಾಟವಾದ ಕಾರುಗಳೆಷ್ಟು - ಇಲ್ಲಿದೆ ಕಂಪ್ಲೀಟ್ ಲಿಸ್ಟ್!

By Web DeskFirst Published Apr 23, 2019, 3:47 PM IST
Highlights

ಮಾರ್ಚ್ ತಿಂಗಳಲ್ಲಿ ಯಾವ ಕಂಪನಿ ಕಾರುಗಳು ಎಷ್ಟು ಮಾರಾಟವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮವಾಗಿದೆಯಾ ಅಥವಾ ಕಳಪೆಯಾಗಿದೆಯಾ? ಭಾರತೀಯರು ಇಷ್ಟ ಪಟ್ಟ ಕಾರು ಯಾವುದು?ಇಲ್ಲಿದೆ ಸಂಪೂರ್ಣ ವಿವರ.

ನವದೆಹಲಿ(ಏ.23): ಮಾರ್ಚ್ ತಿಂಗಳು ಲೆಕ್ಕಾಚಾರದ ತಿಂಗಳು. ಫೈನಾನ್ಷಿಯಲ್‌ ಇಯರ್‌ ಎಂಡ್‌ ಆದ್ದರಿಂದ ಚಾರ್ಟರ್ಡ್‌ ಅಕೌಂಟೆಂಟ್‌ಗಳು ಬ್ಯುಸಿಯಾಗಿರುತ್ತಾರೆ. ಅದೇ ಥರ ಅಟೋಮೊಬೈಲ್‌ ಕ್ಷೇತ್ರ ಕೂಡ ಜಾಸ್ತಿ ಬ್ಯುಸಿಯಾಗಿರುತ್ತದೆ. ಕಾರು ಖರೀದಿ ಜಾಸ್ತಿಯಾಗಿರುತ್ತದೆ. ಅದಕ್ಕೆ ಬೇರೆ ಬೇರೆ ಲೆಕ್ಕಾಚಾರಗಳೂ ಇದೆ. ಆ ಲೆಕ್ಕಾಚಾರವನ್ನು ಹೊರತುಪಡಿಸಿದರೆ ಮಾರ್ಚ್ ತಿಂಗಳ ಕಾರು ಮಾರಾಟ ಲೆಕ್ಕ ನಿಜಕ್ಕೂ ಇಂಟರೆಸ್ಟಿಂಗ್‌. ಅದರಲ್ಲೂ ಒಂದು ತಿಂಗಳಿನಲ್ಲಿ ಎಷ್ಟುಕಾರುಗಳು ಮಾರಾಟವಾಗುತ್ತದೆ ಅನ್ನುವ ಲೆಕ್ಕಾಚಾರ ನಿಮಗೆ ಇರಲಿಕ್ಕಿಲ್ಲ. ದಾರಿಯಲ್ಲಿ ಕಾರುಗಳನ್ನು ನೋಡುತ್ತೇವಷ್ಟೇ. ಆದರೆ ಈಗಲೂ ತಿಂಗಳಲ್ಲಿ ಎಷ್ಟುಕಾರುಗಳು ಕಂಪನಿಯಿಂದ ರೋಡಿಗಿಳಿಯುತ್ತವೆ ಅನ್ನುವ ಲೆಕ್ಕಾಚಾರ ನೋಡಿದರೆ ನಿಮಗೆ ಆಶ್ಚರ್ಯವಾಗದೇ ಇರದು. ಇಲ್ಲಿ 2019ರ ಮಾರ್ಚ್ ತಿಂಗಳಿನ ವಾಹನ ಮಾರಾಟದ ಲೆಕ್ಕ ಇದೆ. ಅಲ್ಲದೇ ಕಳೆದ ವರ್ಷ ಮಾರ್ಚ್‌ನಲ್ಲಿ ಎಷ್ಟುಕಾರುಗಳು ಮಾರಾಟವಾಗಿತ್ತು ಅನ್ನುವ ಲೆಕ್ಕವೂ ಇದೆ. ಈ ಎಲ್ಲಾ ಲೆಕ್ಕಗಳನ್ನು ನೋಡಿದರೆ ವಾಹನ ಮಾರಾಟದಲ್ಲಿ ಭಾರಿ ಏರಿಕೆಯಾಗಿದ್ದಂತೂ ಸ್ಪಷ್ಟ. ಮುಂದಿನ ವರ್ಷ ಈ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಈ ಲೆಕ್ಕಾಚಾರದಲ್ಲಿ ನಿಮ್ಮ ಕೊಡುಗೆ ಇದೆಯಾ?

ಮಾರುತಿ ಸುಜುಕಿ ಇಂಡಿಯಾ


ನಮ್ಮ ದೇಶದಲ್ಲಿ 2019ರ ಮಾಚ್‌ರ್‍ನಲ್ಲಿ ಮಾರಾಟವಾದ ಮಾರುತಿ ಕಾರುಗಳ ಸಂಖ್ಯೆ 1,47,613. ಒಟ್ಟಾರೆ ಅಟೋಮೊಬೈಲ್‌ ಕ್ಷೇತ್ರವನ್ನು ನೋಡಿದರೆ ಈ ಸಂಖ್ಯೆಯನ್ನು ಬೇರೆ ಕಂಪನಿಗಳು ದಾಟಿ ಹೋಗುವುದು ಕಷ್ಟ. ಆದರೆ ಮಾರುತಿಯ ಮಾರಾಟವನ್ನೇ ನೋಡಿದರೆ ಮಾರುತಿಗೆ ಈ ಮಾಚ್‌ರ್‍ ತಿಂಗಳು ಹಿನ್ನಡೆ ಉಂಟುಮಾಡಿದೆ. ಅದೇ 2018ರ ಮಾಚ್‌ರ್‍ನಲ್ಲಿ 1,60,598 ಕಾರುಗಳು ಮಾರಾಟವಾಗಿದೆ. ಆ ಲೆಕ್ಕ ನೋಡಿದರೆ 12985 ವ್ಯತ್ಯಾಸ ಬರುತ್ತದೆ. 2018-2019 ಫೈನಾನ್ಷಿಯಲ್‌ ಇಯರ್‌ನಲ್ಲಿ ಮಾರುತಿ ಒಟ್ಟು 18,62,449 ಕಾರುಗಳನ್ನು ಸೇಲ್‌ ಮಾಡಿದೆ. ಇದಂತೂ ಅಟೋಮೊಬೈಲ್‌ ಕ್ಷೇತ್ರ ಕ್ರಾಂತಿಯೇ. ಮಾರುತಿ ಮಾರಾಟ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಲೇ ಇದೆ. 2017-18ರಲ್ಲಿ ಮಾರುತಿಯ 17,79,574 ಕಾರುಗಳು ಸೇಲಾಗಿದ್ದವು. ಆ ಲೆಕ್ಕ ನೋಡಿದರೆ ಮಾರುತಿ ಸುಝುಕಿ ಹಲವಾರು ವರ್ಷ ನಂಬರ್‌ ಒನ್‌ ಸ್ಥಾನದಲ್ಲೇ ಇರಲಿದೆ. ಇಂಟರೆಸ್ಟಿಂಗ್‌ ಅಂದ್ರೆ ನೀವು ದಾರಿಯಲ್ಲಿ ಹತ್ತು ಕಾರುಗಳನ್ನು ನೋಡಿದರೆ ಅದರಲ್ಲಿ ಬಹುತೇಕ ಎಂಟು ಕಾರುಗಳು ಮಾರುತಿಯೇ ಆಗಿರಲಿದೆ.

ಟೊಯೋಟ ಇಂಡಿಯಾ


ಟೊಯೋಟ ಲೆಕ್ಕಗಳು ಮಾರುತಿಯಷ್ಟಿಲ್ಲ. ಈ ವರ್ಷದ ಮಾಚ್‌ರ್‍ನಲ್ಲಿ 13,662 ಕಾರುಗಳು ಮಾರಾಟವಾಗಿವೆ. ಕಳೆದ ವರ್ಷ ಮಾಚ್‌ರ್‍ನಲ್ಲಿ ಟೊಯೋಟಾದ 13,537 ಕಾರುಗಳು ಮಾರಾಟವಾಗಿತ್ತು. ಈ ಲೆಕ್ಕ ನೋಡಿದರೆ ಮಾರಾಟದಲ್ಲಿ ಟೊಯೋಟ ಮೇಲೆ ಹೋಗುತ್ತಲೇ ಇದೆ. ಅದರಲ್ಲೂ ಟೊಯೋಟಾದ ಇನ್ನೋವಾ ಕ್ರಿಸ್ಟಾಮತ್ತು ಫಾರ್ಚುನರ್‌ ಕಾರುಗಳಿಗೆ ಬೇಡಿಕೆ ಜಾಸ್ತಿಯಾಗುತ್ತಿದೆ. ಈ ಎರಡು ಕಾರುಗಳೇ ಜಾಸ್ತಿ ಮಾರಾಟವಾಗಿದೆ ಅಂತ ಲೆಕ್ಕಾಚಾರ ಹೇಳುತ್ತದೆ. ಇಟಿಯೋಸ್‌ ಲಿವಾ ಕೂಡ ಜನ ಮೆಚ್ಚುಗೆ ಗಳಿಸಿದೆ.

ಮಹೀಂದ್ರಾ & ಮಹೀಂದ್ರಾ


ಮಹೀಂದ್ರಾ ಎಸ್‌ಯುವಿಗಳಿಗೆ ಬೇಡಿಕೆ ಜಾಸ್ತಿ. ನೀವು ಸಾಮಾನ್ಯವಾಗಿ ನೋಡುವ ಕಾರುಗಳಲ್ಲಿ ಅದ್ದೂರಿ ಕಾರುಗಳಂತೆ ಕಾಣುವ ಕಾರುಗಳಿವು. ಅಲ್ಲದೇ ಇವರ ವ್ಯಾಪ್ತಿ ದೊಡ್ಡದಿದೆ. ಕಾರುಗಳಷ್ಟೇ ಇವರ ತಾಕತ್ತು ಅಲ್ಲ. 2019ರ ಮಾಚ್‌ರ್‍ ತಿಂಗಳ ಈ ಕಂಪನಿಯ ವಹಿವಾಟು ಗಮನಿಸಿದರೆ ಮಹೀಂದ್ರಾ ಮಾರಾಟದಲ್ಲಿ ಅಭಿವೃದ್ಧಿ ಕಂಡಿದೆ. ಈ ತಿಂಗಳೊಂದರಲ್ಲೇ 62,952 ವಾಹನಗಳು ಮಾರಾಟವಾಗಿವೆ. ಮಾಚ್‌ರ್‍ 2018ರಲ್ಲಿ ಮಹೀಂದ್ರಾದ 62,076 ವಾಹನಗಳು ಮಾರಾಟವಾಗಿದ್ದುವು. 2018-2019ರ ಫೈನಾನ್ಷಿಯಲ್‌ ಇಯರ್‌ನ ಪೂರ್ತಿ ಮಾರಾಟ ಗಮನಿಸುವುದಾದರೆ ಸುಮಾರು 6,08,596 ವಾಹನಗಳು ಮಾರಾಟವಾಗಿವೆ. 2018-2019ರ ಫೈನಾನ್ಷಿಯಲ್‌ ಇಯರ್‌ನಲ್ಲಿ ಈ ಸಂಖ್ಯೆ ಕಡಿಮೆ ಇತ್ತು. 5,49,153 ವಾಹನಗಳು ಮಾರಾಟವಾಗಿದ್ದುವು ಅಂತ ಲೆಕ್ಕ ಹೇಳುತ್ತದೆ.

ಹೋಂಡಾ ಕಾರ್‌


ಕಳೆದ ವರ್ಷ ಮಾಚ್‌ರ್‍ ಮತ್ತು ಈ ವರ್ಷದ ಮಾಚ್‌ರ್‍ಗೆ ಹೋಲಿಸಿದರೆ ಗಣನೀಯವಾಗಿ ಅಭಿವೃದ್ಧಿ ಕಾಣುವುಡು ಹೋಂಡಾದಲ್ಲಿ 2019ರ ಮಾಚ್‌ರ್‍ನಲ್ಲಿ ಮಾರಾಟವಾದ ಹೋಂಡಾ ವಾಹನಗಳ ಸಂಖ್ಯೆ 17,202. ಈ ಮಾರಾಟದ ಸಂಖ್ಯೆ 2018 ಮಾರ್ಚ್‌ನಲ್ಲಿ 13,574ರಷ್ಟಿತ್ತು. ಈ ಲೆಕ್ಕ ಪ್ರಕಾರ ಹೋಂಡಾ ಈ ಸಲ ಹಬ್ಬ ಮಾಡಬೇಕು. ಯಾಕೆಂದರೆ ಅದರ ಮಾರಾಟದಲ್ಲಿ ಗಣನೀಯ ಏರಿಕೆಯಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಹೋಂಡಾ ಸಿವಿಕ್‌ ಮತ್ತು ಹೋಂಡಾ ಸಿಆರ್‌ವಿಗಳಿಗೆ ಜಾಸ್ತಿ ಬೇಡಿಕೆ ಅಂತ ಕಂಪನಿ ಹೇಳುತ್ತದೆ. ಹೋಂಡಾ ಅಮೇಝ್‌ ಕೂಡ ಹಿಂದೆ ಬಿದ್ದಿಲ್ಲ.

click me!