BMW ಹೊಸ Z4 ರೋಡ್‌ಸ್ಟರ್‌ ಕಾರು ಬಿಡುಗಡೆ

By Web DeskFirst Published Apr 23, 2019, 3:58 PM IST
Highlights

ವಿಶ್ವದ ಐಷಾರಾಮಿ ಹಾಗೂ ದುಬಾರಿ ಕಾರು ಎಂದು ಹೆಸರುವಾಸಿಯಾಗಿರುವ BMW ನೂತನ ರೋಡ್‌ಸ್ಟರ್ ಕಾರು ಬಿಡುಗಡೆ ಮಾಡಿದೆ. ನೂತನ Z4 ರೋಡ್‌ಸ್ಟರ್‌ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.
 

ಲಂಡನ್(ಏ.23): ಬಿಎಂಡಬ್ಲ್ಯೂನ ಹೊಸ ಸ್ಪೋರ್ಟ್ಸ್ ಕಾರು Z4 ರೋಡ್‌ಸ್ಟರ್‌ ಬಿಡುಗಡೆಯಾಗಿದೆ. ಅತ್ಯಾಧುನಿಕ ಡಿಸೈನ್‌ ಹೊಂದಿರುವ ಈ ಟಾಪ್‌ ಎಂಡ್‌ ಕಾರಿನಲ್ಲಿ ಆರಾಮದಾಯಕ ಡ್ರೈವಿಂಗ್‌ ಅನುಭವ ಪಡೆಯಬಹುದು. ಈ ಕುರಿತು ಮಾಹಿತಿ ನೀಡಿದ ಬಿಎಂ ಡಬ್ಲ್ಯೂಗ್ರೂಪ್‌ನ ಮುಖ್ಯಸ್ಥ ಡಾ.ಹನ್ಸ್‌ ಕ್ರಿಶ್ಚಿಯನ್‌ ಬಾರ್ಟೆಲ್ಸ್‌, ಸಾಹಸಿ ಪ್ರವೃತ್ತಿಯವರಿಗೆ ಇದು ಹೇಳಿ ಮಾಡಿಸಿದ ಕಾರು ಎಂದರು. 

ಇದನ್ನೂ ಓದಿ: ಮಾರ್ಚ್ ತಿಂಗಳಲ್ಲಿ ಮಾರಾಟವಾದ ಕಾರುಗಳೆಷ್ಟು - ಇಲ್ಲಿದೆ ಕಂಪ್ಲೀಟ್ ಲಿಸ್ಟ್!

ಇದರಲ್ಲಿ ಮುಂಭಾಗದ ಎರಡು ಸೀಟ್‌ಗಳಿದ್ದು ಟಾಪ್‌ ಓಪನ್‌ ಆಗಿರುತ್ತದೆ. ಇದು ಚಾಲನೆಗೆ ಮೋಜಿನ ಸ್ಪರ್ಶ ನೀಡುತ್ತದೆ. ಥ್ರಿಲಿಂಗ್‌ ಅನುಭವ ನೀಡುವ ಈ ಓಪನ್‌ ಟಾಪ್‌ ಟೂ ಸೀಟರ್‌, ಭವಿಷ್ಯದ ಕಾರ್‌ ಆಗಿ ಗುರುತಿಸಿಕೊಳ್ಳುತ್ತಿದೆ’ ಎಂದರು.

ಇದನ್ನೂ ಓದಿ: ಮಾರುತಿ ಬಲೆನೊ ಮೈಲ್ಡ್ ಹೈಬ್ರಿಡ್ ಕಾರು ಬಿಡುಗಡೆ- 23.87 Kmpl ಮೈಲೇಜ್!

ಈ ಕಾರು ಬಿಳಿ ಬಣ್ಣದಲ್ಲಿ ನಾನ್‌-ಮೆಟಾಲಿಕ್‌ ಪೇಂಟ್‌ವರ್ಕ್ ಮಾದರಿಯಲ್ಲಿ ಲಭ್ಯ. ಜೊತೆಗೆ ಮೆಟಾಲಿಕ್‌ ಮಾದರಿಯ ಪೇಂಟ್‌ವರ್ಕ್ಸ್‌ ಇರುವ ಕಾರುಗಳಲ್ಲಿ ಬ್ಲಾಕ್‌ ಸಫೈರ್‌, ಗ್ಲೇಷಿಯರ್‌ ಸಿಲ್ವರ್‌, ಮಿನರಲ್‌ ವೈಟ್‌, ಮೆಡಿಟರೇನಿಯನ್‌ ಬ್ಲೂ , ಸ್ಯಾನ್‌ ಫ್ರಾನ್ಸಿಸ್ಕೊ ರೆಡ್‌ ಬಣ್ಣಗಳ ಆಯ್ಕೆ ಇದೆ. ಸ್ಪೋರ್ಟ್‌ ವಿಭಾಗದಲ್ಲಿ ಮಿಸ್ಸನೊ ಬ್ಲೂ ಮೆಟಾಲಿಕ್‌ ಮತ್ತು ಪೇಂಟ್‌ವರ್ಕ್ ಇರುವ ಫೋ ಝನ್‌ ಗ್ರೇ ಬಣ್ಣಗಳಿವೆ.

click me!