ಸಂಚಾರಿ ಪೊಲೀಸರು ನಿಯಮ ಉಲ್ಲಂಘಿಸಿದರೆ ಡಬಲ್‌ ದಂಡ!

By Web DeskFirst Published Sep 6, 2019, 10:57 AM IST
Highlights

ಹೊಸ ಮೋಟಾರು ಕಾಯ್ದೆಯಡಿ, ನಿಯಮ ಉಲ್ಲಂಘಿಸಿದ ಸಾರ್ವಜನಿಕರಿಗೆ ಭಾರೀ ದಂಡ| ಸಂಚಾರಿ ಪೊಲೀಸರು ನಿಯಮ ಉಲ್ಲಂಘಿಸಿದರೆ ಡಬಲ್‌ ದಂಡ!

ನವದೆಹಲಿ[ಸೆ.06]: ಹೊಸ ಮೋಟಾರು ಕಾಯ್ದೆಯಡಿ, ನಿಯಮ ಉಲ್ಲಂಘಿಸಿದ ಸಾರ್ವಜನಿಕರಿಗೆ ಭಾರೀ ದಂಡ ವಿಧಿಸುತ್ತಿರುವುದು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವೆಂದರೆ, ಯಾವ ನಿಯಮ ಉಲ್ಲಂಘಿಸಿದ್ದಕ್ಕೆ ಜನಸಾಮಾನ್ಯರಿಗೆ ಇಷ್ಟೊಂದು ದಂಡ ವಿಧಿಸಲಾಗುತ್ತಿದೆಯೋ ಅದೇ ನಿಯಮಗಳನ್ನು ಸಂಚಾರಿ ಪೊಲೀಸರು ಉಲ್ಲಂಘಿಸಿದ್ದೇ ಆದಲ್ಲಿ, ಆಗ ಅವರಿಗೆ ಸಾಮಾನ್ಯ ದಂಡದ ಡಬ್ಬಲ್‌ ದಂಡ ವಿಧಿಸಲಾಗುವುದು.

ಇತ್ತೀಚೆಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿಯೇ ಈ ಅಂಶವಿದೆ ಎಂದು ದೆಹಲಿ ಪೊಲೀಸ್‌ ಮುಖ್ಯಸ್ಥರೇ ಸುತ್ತೋಲೆ ಹೊರಡಿಸಿದ್ದಾರೆ.

ಟ್ರಾಫಿಕ್‌ ದಂಡಕ್ಕೆ ಸವಾರರು ಹೈರಾಣು!

ಸಂಚಾರಿ ಪೊಲೀಸರು ಖಾಸಗಿ ಅಥವಾ ಸರ್ಕಾರಿ ವಾಹನ ಬಳಕೆ ಮಾಡುವಾಗಲೂ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಸವಾರರಿಗೆ ವಿಧಿಸುವ ದಂಡದ ದುಪ್ಪಟ್ಟು ಜುಲ್ಮಾನೆ ವಿಧಿಸಲಾಗುವುದು.

ಈ ಬಗ್ಗೆ ಎಲ್ಲಾ ಜಿಲ್ಲೆಯ ಸಹಾಯಕ ಪೊಲೀಸ್‌ ಕಮೀಷನರ್‌ಗೂ ಸೂಚನೆ ನೀಡಲಾಗಿದ್ದು, ಸರ್ಕಾರಿ ಅಥವಾ ಖಾಸಗಿ ವಾಹನ ಚಲಾಯಿಸುವಾಗಲೂ ಅಧಿಕಾರಿಗಳು ಸಂಚಾರಿ ನಿಯಮ ಪಾಲಿಸಿ ವೃತ್ತಿಪರತೆ ಮೆರೆಯಬೇಕು ಎಂದು ಸೂಚನೆ ನೀಡಲಾಗಿದೆ.

ಟ್ರಾಫಿಕ್ ನಲ್ಲಿ ಯಾವ ದಾಖಲೆ ತೋರಿಸಬೇಕು?

click me!