ಮಹೀಂದ್ರ ಕಾರು ಬೆಲೆ ಹೆಚ್ಚಳ- ಇಲ್ಲಿದೆ ನೂತನ ದರ!

By Web Desk  |  First Published Jun 23, 2019, 9:12 PM IST

ಮಹೀಂದ್ರ ಕಾರುಗಳ ಬೆಲೆ ಹೆಚ್ಚಾಗುತ್ತಿದೆ. ಜುಲೈ 1 ರಿಂದ ನೂತನ ದರ ಅನ್ವಯವಾಗಲಿದೆ. ಮಹೀಂದ್ರ ದಿಢೀರ್ ಕಾರಿನ ಬೆಲೆ ಹೆಚ್ಚಿಸಲು ಕಾರಣವೇನು? ಇಲ್ಲಿದೆ ವಿವರ.


ನವದೆಹಲಿ(ಜೂ.23): ಭಾರತದ  ಆಟೋಮೊಬೈಲ್ ಕ್ಷೇತ್ರ ಬದಲಾವಣೆ ಕಾಣುತ್ತಿದೆ. ಹಳೇ ನಿಯಮಗಳು ತಿದ್ದುಪಡಿಯಾಗಿ ಹೊಸದಾಗಿ ಜಾರಿಯಾಗುತ್ತಿದೆ.  ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ಹೆಚ್ಚಾಗಿದೆ. ಮಾಲಿನ್ಯ ತಡೆಗೆ ಗರಿಷ್ಠ ಪ್ರಯತ್ನಗಳು ನಡೆಯುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಕಟ್ಟು ನಿಟ್ಟಿನ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಜುಲೈ 1 ರಿಂದ ಮತ್ತಷ್ಟು ಹೊಸ ನಿಯಮಗಳು ಜಾರಿಯಾಗುತ್ತಿದೆ. ಹೀಗಾಗಿ ಬಹುತೇಕ ಎಲ್ಲಾ ಕಾರು ಕಂಪನಿಗಳು ಬೆಲೆ ಹೆಚ್ಚಳ ಮಾಡುತ್ತಿದೆ.

ಇದನ್ನೂ ಓದಿ: MG ಹೆಕ್ಟರ್ ಕಾರಿನಲ್ಲಿದೆ 5 ವಿಶೇಷತೆ-ಇತರ ಕಾರಿಗಿಂತ ಭಿನ್ನ!

Tap to resize

Latest Videos

undefined

ಮಹೀಂದ್ರ ಮೋಟಾರ್ಸ್ ಜುಲೈ 1 ರಿಂದ ಕಾರು ಬೆಲೆ ಹೆಚ್ಚಳ ಮಾಡುತ್ತಿದೆ. ಮಹೀಂದ್ರ ಕಾರುಗಳ ಬೆಲೆ ಗರಿಷ್ಠ 36,000 ರೂಪಾಯಿ ಹೆಚ್ಚಾಗಲಿದೆ. ಡ್ರೈವರ್ ಏರ್‌ಬ್ಯಾಗ್, ಡ್ರೈವರ್ -ಕೋ ಡ್ರೈವರ್ ಸೀಟ್ ಬೆಲ್ಟ್ ರಿಮೈಂಡರ್,  ರೇರ್ ಪಾರ್ಕಿಂಗ್ ಸೆನ್ಸಾರ್ ಹಾಗೂ ಅತೀ ವೇಗದ ಅಲರ್ಟ್ ಫೀಚರ್ಸ್ ಎಲ್ಲಾ ಮಾಡೆಲ್ ಕಾರುಗಳಲ್ಲಿ ಕಡ್ಡಾಯ. ಹೀಗಾಗಿ ಮಹೀಂದ್ರ ತನ್ನ ಕಾರುಗಳ ಬೆಲೆ ಹೆಚ್ಚಿಸಿದೆ.

ಇದನ್ನೂ ಓದಿ: ಮಾರಾಟಕ್ಕಿದೆ ಸಲ್ಮಾನ್ ಖಾನ್ ಖರೀದಿಸಿದ BMW 7 ಸೀರಿಸ್ ಕಾರು!

ಮಹೀಂದ್ರ ಕಂಪನಿಯ ಎಲ್ಲಾ ಕಾರುಗಳ ಬೆಲೆ ಹೆಚ್ಚಾಗಲಿದೆ. ಜುಲೈ 1 ರಿಂದ ನೂತನ ದರ ಅನ್ವಯವಾಗಲಿದೆ. ಬೇಸ್ ಮಾಡೆಲ್, ಮಿಡ್ ವೇರಿಯೆಂಟ್ ಹಾಗೂ ಟ್ರಿಮ್ ಮಾಡೆಲ್ ಬೆಲೆ ಹೆಚ್ಚಾಗಲಿದೆ. ಆದರೆ ಟಾಪ್ ವೇರಿಯೆಂಟ್ ಕಾರಿನ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಗಳಾಗೋ ಸಾಧ್ಯತೆ ಕಡಿಮೆ.
 

click me!