2019ರಲ್ಲಿ ಹಲವು ವಿದೇಶಿ ಕಂಪೆನಿಗಳು ಭಾರತದಲ್ಲಿ ಕಾರು ಬಿಡುಗಡೆ ಮಾಡುತ್ತಿದೆ. ಇದೀಗ ಬ್ರಿಟೀಷ್ ಕಾರೊಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಈ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.
ನವದೆಹಲಿ(ಫೆ.01): ಭಾರತದ ಆಟೋಮೊಬೈಲ್ ಕ್ಷೇತ್ರ ಅತೀ ವೇಗದಲ್ಲಿ ಬೆಳೆಯುತ್ತಿದೆ. ಅದರಲ್ಲೂ 2019ರಲ್ಲಿ ಹೊಸ ಹೊಸ ಆಟೋಮೊಬೈಲ್ ಕಂಪೆನಿಗಳು ಭಾರತದಲ್ಲಿ ಕಾರು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಕಿಯಾ ಮೋಟಾರ್ಸ್ ಕಾರು ಬಿಡುಗಡೆಗೆ ಸಜ್ಜಾಗಿದ್ದರೆ, ಇತ್ತ ಬ್ರಿಟೀಷ್ ಮೂಲದ MG ಮೋಟಾರ್ಸ್ ಇದೀಗ SUV ಕಾರು ಬಿಡುಗಡೆಗೆ ಮುಂದಾಗಿದೆ.
undefined
ಇದನ್ನೂ ಓದಿ: ಬ್ರೈಟ್ ಹೆಡ್‌ಲೈಟ್ಸ್ ಅಳವಡಿಸಿದರೆ ವಾಹನದ RC, ಲೈಸೆನ್ಸ್ ರದ್ದು!
MG ಮೋಟಾರ್ಸ್ ನೂತನ SUV ಕಾರಿಗೆ ಹೆಕ್ಟರ್ ಎಂದು ಹೆಸರಿಟ್ಟಿದೆ. ಅತೀ ದೊಡ್ಡ ಪನೊರಮಿಕ್ ಸನ್‌ರೂಫ್, ಇನ್ಫೋಟೈನ್‌ಮೆಂಟ್ ಟಚ್ ಸ್ಕ್ರೀನ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ನೂತನ ಹೆಕ್ಟರ್ ಬಿಡುಗಡೆಗೆ ಸಜ್ಜಾಗಿದೆ.
ಇದನ್ನೂ ಓದಿ:ಆಮದು ಸುಂಕ ಕಡಿತ- ಕಡಿಮೆ ಬೆಲೆಗೆ ಸಿಗಲಿದೆ ಎಲೆಕ್ಟ್ರಿಕ್ ಕಾರು, ಬೈಕ್ !
ನೂತನ ಹೆಕ್ಟರ್ 2.0 ಲೀಟರ್ ಡೀಸೆಲ್ ಎಂಜಿನ್, 170 Bhp ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇನ್ನೂ 1.5 ಲೀಟರ್ ಪೆಟ್ರೋಲ್ ಎಂಜಿನ್ ಕಾರು ಕೂಡ ಲಭ್ಯವಿದೆ. ಟಾಟಾ ಹರಿಯರ್, ಜೀಪ್ ಕಂಪಾಸ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ MG ಮೋಟಾರ್ಸ್ ಹೆಕ್ಟರ್ ಕಾರು ಬಿಡುಗಡೆಯಾಗುತ್ತಿದೆ. 2019ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ಸದ್ಯ ಈ ಕಾರಿನ ಬೆಲೆಯನ್ನ MG ಮೋಟಾರ್ಸ್ ಬಹಿರಂಗಪಡಿಸಿಲ್ಲ.