ನಾಳೆಯಿಂದ ಜಿಎಸ್‌ಟಿ 2.0 ಅನ್ವಯ: ಕಾರಿನ ಬೆಲೆ ₹1 ಲಕ್ಷವರೆಗೆ ದರ ಇಳಿಕೆ, ದಸರಾ ಹಬ್ಬಕ್ಕೆ ಸಿಗಲಿದೆ ಸೂಪರ್ ಆಫರ್!

Published : Sep 21, 2025, 11:58 AM IST
Car booking GST benefit

ಸಾರಾಂಶ

ಕೇಂದ್ರ ಸರ್ಕಾರದ ಜಿಎಸ್‌ಟಿ ಇಳಿಕೆ ನಿರ್ಧಾರದಿಂದಾಗಿ 1200 cc ಗಿಂತ ಕಡಿಮೆ ಸಾಮರ್ಥ್ಯದ ಹಲವು ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಕಾರು ಖರೀದಿಸಲು ಯೋಜಿಸುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.

ಕೇಂದ್ರ ಸರ್ಕಾರ ಹಲವು ವಸ್ತುಗಳ ಮೇಲೆ ಜಿಎಸ್‌ಟಿ ಇಳಿಕೆ ಮಾಡಿರುವುದು ಗೊತ್ತೆ ಇದೆ. ಇದರಿಂದ ಹಲವು ದಿನನಿತ್ಯದ ವಸ್ತುಗಳ ಬೆಲೆ ಇಳಿಕೆಯಾಗುವುದರ ಜೊತೆಗೆ ಮೋಟಾರ್ ವಾಹನಗಳು ಹಾಗೂ ಇಲೆಕ್ಟ್ರಿಕ್ ವಸ್ತುಗಳ ಮೇಲೆಯೂ ಬೆಲೆ ಭಾರಿ ಇಳಿಕೆ ಆಗಿದೆ. ಹೀಗಾಗಿ ದಸರಾ ಹಬ್ಬದ ಸಮಯದಲ್ಲಿ ವಾಹನ ಖರೀದಿ ಮಾಡಲು ಬಯಸುವವರಿಗೆ ಇಲ್ಲೊಂದು ಗುಡ್‌ನ್ಯೂಸ್ ಇದೆ. ಹಲವು ವಾಹನಗಳ ದರದಲ್ಲಿ ಇಳಿಕೆ ಆಗಿದ್ದು, ಜಿಎಸ್‌ಟಿ ಕಡಿತದಿಂದಾಗಿ ಕಾರುಗಳ ದರದಲ್ಲಿ ಭಾರಿ ವ್ಯತ್ಯಾಸವಾಗಲಿದೆ. ಹೀಗಾಗಿ ಆಯುಧ ಪೂಜೆಗೆ ಕಾರು ಖರೀದಿಸಲು ಬಯಸುವವರು ಯಾವ ಕಾರಿಗೆ ಎಷ್ಟು ಬೆಲೆ ಇಳಿಕೆಯಾಗಿದೆ ಎಂಬುದರ ವಿವರ ಇಲ್ಲಿದೆ.

1200 cc ಗಿಂತ ಕಡಿಮೆ ಸಾಮರ್ಥ್ಯದ ಕಾರುಗಳಿಗೆ 28% ರಿಂದ 18% ರಷ್ಟು ಜಿಎಸ್‌ಟಿ ಇಳಿಕೆಯಾಗಿದೆ. ಇಲ್ಲಿ ಯಾವ ಕಾರುಗಳ ಬೆಲೆಗಳನ್ನು ಕಡಿಮೆ ಮಾಡಲಾಗಿದೆ (ಎಕ್ಸ್-ಶೋರೂಂ ಬೆಲೆ) ಎಂಬ ವಿವರ ಇಲ್ಲಿದೆ.

ಕಾರುಹಳೆಯ ಬೆಲೆಹೊಸ ಬೆಲೆಉಳಿತಾಯ
ಸ್ವಿಫ್ಟ್7,96,0006,84,9001,12,600.
ಗ್ರ್ಯಾಂಡ್ ವಿಟಾರಾ11,83,00010,76,5001,07,000
ಬಲೆನೊ6,84,000 5,98,90086,100.
ಇಗ್ನಿಸ್6,06,4005,35,10071,300.
ಜಿಮ್ಮಿ12,83,40012,31,50051,900.
ಸ್ಕೋಡಾ ಸ್ಲಾವಿಯಾ10,49,0009,99,00050,000
ಸ್ಕೋಡಾ ಕೊಡಿಯಾಕ್46,89,00043,76,0003,13,000.
ಎಸ್-ಪ್ರೆಸ್ಸೊ4,79,5003,49,9001,29,600.
ಆಲ್ಟೊ ಕೆ104,77,5003,69,5001,07,600.
ಸೆಲೆರಿಯೊ5,64, 0004,69, 90094100.
ವ್ಯಾಗ್ನರ್5,83,5004,98,90084600
ಡಿಜೈರ್7,13,3006,25,60087,700.
ಬ್ರೆಝಾ9,38,6008,25,9001,12,700.
ಎರ್ಟಿಗಾ9,26,4008,80,00046,400.
ಇಕೋ5,86,1005,18,10068,000

 

ಇದನ್ನೂ ಓದಿ: ಮ್ಯಾಟ್ರಿಮೋನಿಯಲ್‌ ಸೈಟಲ್ಲಿ ಬಂತು ಲಂಡನ್ ಯುವತಿಯ ಪ್ರಪೋಸಲ್: ಮದ್ವೆಯಾಗುವ ಕನಸಲ್ಲಿದ್ದ ಯುವಕನಿಗೆ ದೊಡ್ಡ ನಾಮ...
ಇದನ್ನೂ ಓದಿ: ಶಿಕ್ಷಕಿ ಹೊಡೆದ ಏಟಿಗೆ ಬಾಲಕಿಯ ತಲೆಬುರುಡೆಯೇ ಜಖಂ: ಸಿಟಿ ಸ್ಕ್ಯಾನ್ ಮಾಡಿಸಿದ ಪೋಷಕರಿಗೆ ಆಘಾತ..!

PREV
Read more Articles on
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ