ಉಪ ಮೇಯರ್ ಕಾರಿಗೆ ಒಂದು ವಾರದಲ್ಲಿ 2 ಬಾರಿ ಫೈನ್!

By Suvarna News  |  First Published Nov 13, 2020, 8:57 PM IST

ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ದುಬಾರಿ ದಂಡಕ್ಕೆ ಗುರಿಯಾಗಬೇಕಾಗುತ್ತದೆ. ಇದೀಗ ಉಪ ಮೇಯರ್ ಒಂದೇ ವಾರದಲ್ಲಿ ತಪ್ಪನ್ನು ಪುನಾರವರ್ತಿಸಿ ಎರಡೆರಡು ಬಾರಿ ದಂಡ ಹಾಕಿಸಿಕೊಂಡಿದ್ದಾರೆ.
 


ಮುಂಬೈ(ನ.13);  ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಪ್ರಕಾರ, ಕಾರಿನ ನಂಬರ್ ಪ್ಲೇಟ್ ಮೇಲೆ ನಿಯಮ ಮೀರಿ ಅಕ್ಷರಗಳನ್ನು ಬರೆಸುವುದು, ಫ್ಯಾನ್ಸಿ ನಂಬರ್ ಪ್ಲೇಟ್ ಹಾಕಿಸುವುದು ನಿಯಮ ಉಲ್ಲಂಘನೆಯಾಗಿದೆ. ಮುಂಬೈನ ಥಾಣೆಯ ಉಲ್ಲಾಸನಗರ ಉಪಮೇಯರ್ ಫ್ಯಾನ್ಸಿ ನಂಬರ್ ಪ್ಲೇಟ್ ಹಾಕಿ ನಿಯಮ ಉಲ್ಲಂಘಿಸಿದ ಘಟನೆ ನಡೆದಿದೆ.

ದಂಡ ಕಟ್ಟಿ ಜಾರಿಕೊಳ್ಳೋ ಚಾನ್ಸೇ ಇಲ್ಲ, ನಿಯಮ ಉಲ್ಲಂಘಿಸಿದರೆ ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸಲ್!.

Latest Videos

undefined

ಉಲ್ಲಾಸನಗರ ಉಪ ಮೇಯರ್ ತಮ್ಮ ಟೊಯೋಟಾ ಫಾರ್ಚುನರ್ ಕಾರಿಗೆ ಫ್ಯಾನ್ಸಿ ನಂಬರ್ ಹಾಕಿಸಿದ್ದಾರೆ. ಹಿಂದಿಯಲ್ಲಿ ದಾದಾ ಎಂದು ಬರುವಂತೆ ಅದನ್ನು ಸಂಖ್ಯೆಗಳಲ್ಲಿ ಓದುವುದಾದರೆ 4141 ಎಂದ ನಂಬರ್ ಪ್ಲೇಟ್ ಮಾಡಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಸರಿತಾ ಕಾಂಚನದಾನಿ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು.

ಉದ್ದೇಶಪೂರ್ವಕವಾಗಿ KSRTC ಬಸ್ ಪ್ರಯಾಣಕ್ಕೆ ಅಡ್ಡಿ; ಪುಂಡರಿಗೆ ಪೊಲೀಸ್ ತಕ್ಕ ಶಾಸ್ತಿ!.

ಅಕ್ಟೋಬರ್ 29 ರಂದು ಮೊದಲ ಬಾರಿಗೆ ಉಪಮೇಯರ್ ಫಾರ್ಚುನರ್ ಕಾರಿಗೆ 1,200 ರೂಪಾಯಿ ಗಂಡ ಹಾಕಲಾಗಿತ್ತು. ಇಷ್ಟೇ ಅಲ್ಲ ತಕ್ಷಣವೇ ಕಾರಿನ ನಂಬರ್ ಪ್ಲೇಟ್ ಬದಲಾಯಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಆದರೆ ಉಪ ಮೇಯರ್ ಕಾರಿನ ನಂಬರ್ ಪ್ಲೇಟ್ ಬದಲಾಯಿಸುವ ಗೋಜಿಗೆ ಹೋಗಿಲ್ಲ. ಎರಡನೇ ಬಾರಿಗೆ ಸರಿತಾ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ಗಮನಿಸಿದ್ದಾರೆ.

ಮತ್ತೆ ಉಪಮೇಯರ್ ಕಾರು ಭಾರಿ ಚರ್ಚೆಗೆ ಕಾರಣವಾಗಿದೆ. ಹೀಗಾಗಿ ಎರಡನೇ ಬಾರಿಗೆ ಪೊಲೀಸರು ದಂಡ ಹಾಕಿದ್ದಾರೆ. ಇಷ್ಟೇ ಕಠಿಣ ವಾರ್ನಿಂಗ್ ನೀಡಿದ್ದಾರೆ. ನಿಯಮ ಪಾಲಿಸಲೇಬೇಕು ಎಂದು ಸೂಚಿಸಿದ್ದಾರೆ. 

click me!