500ಸಿಸಿ ಗಿಂತ ಹೆಚ್ಚಿನ ಎಂಜಿನ್ ಹೊಂದಿದ ಬೈಕ್ ಮಾಲೀಕರಿಗೆ ನೊಟೀಸ್!

Published : Jan 12, 2019, 05:58 PM IST
500ಸಿಸಿ ಗಿಂತ ಹೆಚ್ಚಿನ ಎಂಜಿನ್ ಹೊಂದಿದ ಬೈಕ್ ಮಾಲೀಕರಿಗೆ ನೊಟೀಸ್!

ಸಾರಾಂಶ

500 ಸಿಸಿ ಹಾಗೂ ಅದಕ್ಕಿಂತ ಹೆಚ್ಚಿನ ಸಿಸಿ ಹೊಂದಿದ ಬೈಕ್‌ಗಳ ರೈಡಿಂಗ್ ನೀಡೋ ಮಜಾನೆ ಬೇರೆ. ಹೀಗಾಗಿ ಹೆಚ್ಚಿನವರು ಸೂಪರ್ ಬೈಕ್, ರಾಯಲ್ ಎನ್‌ಫೀಲ್ಡ್, ಹಯಬುಸಾ ಸೇರಿದಂತೆ ಗರಿಷ್ಠ ಸಿಸಿ ಎಂಜಿನ್ ಬೈಕ್ ಮೊರೆ ಹೋಗುತ್ತಾರೆ. ಆದರೆ ಇದೀಗ 500 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಸಿಸಿ ಹೊಂದಿದ ಬೈಕ್ ಮಾಲೀಕರಿಗೆ ಸಂಕಷ್ಟ ಎದುರಾಗಿದೆ.

ಮುಂಬೈ(ಜ.12):  500ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಸಿಸಿ ಎಂಜಿನ್ ಹೊಂದಿದ ಬೈಕ್ ವೇಗ ಹಾಗೂ ಶಬ್ದ ವಿಪರೀತ. ಅತೀಯಾದ ವೇಗ ಹಾಗೂ ವಿಪರೀತ ಶಬ್ದದಿಂದ ಮನೆಯಲ್ಲಿ ನೆಮ್ಮದಿಯಾಗಲು  ಮಲಗಲು ಸಾಧ್ಯವಾಗುತ್ತಿಲ್ಲ ಎಂದು ನಗರವಾಸಿಗಳು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 

ಇದನ್ನೂ ಓದಿ: ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾದ ಹತ್ತು ಕಾರುಗಳು!

ವಿಕೆಂಡ್‌ಗಳಲ್ಲಿ ಪೊಲೀಸರಿಗೆ 10 ರಿಂದ 15 ಕರೆಗಳು ಇದೇ ಕಾರಣಕ್ಕಾಗಿ ಬರುತ್ತಿದೆ. ನವಿ ಮುಂಬೈನ ಪಾಮ್ ಬೀಚ್ ಬಳಿಯ ನಿವಾಸಿಗಳು ದೂರಿನಿಂದ ಇದೀಗ ಪೊಲೀಸರು  500ಸಿಸಿ ಹಾಗೂ ಅದಕ್ಕಿಂತ ಹೆಚ್ಚಿನ ಎಂಜಿನ್ ಹೊಂದಿದ ಬೈಕ್ ಮಾಲೀಕರಿಗೆ ನೊಟೀಸ್ ನೀಡಿದ್ದಾರೆ. 

ಇದನ್ನೂ ಓದಿ:3ನೇ ಮಹಡಿಯಿಂದ ಕಳೆಗೆ ಬಿತ್ತು ಮರ್ಸಡೀಸ್ ಕಾರು-ಚಾಲಕ ಅಪಾಯದಿಂದ ಪಾರು!

ಪಾಮ್ ಬೀಚ್‌ ಬಳಿ ವಾರಾಂತ್ಯದಲ್ಲಿ 500 ಸಿಸಿ ಬೈಕ್ ಮೇಲೆ ಅತೀವೇಗದಲ್ಲಿ ಬೈಕ್ ರೈಡ್ ಮಾಡುತ್ತಾರೆ. ಅದರಲ್ಲೂ ತಡ ರಾತ್ರಿ ಈ ರೀತಿ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಿಂದ ರೋಸಿ ಹೋದ ಪಾಮ್ ಬೀಚ್ ಬಳಿಯ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದರು. ವಿಕೆಂಡ್ ವೇಳೆ ಪೊಲೀಸರು ಇಲ್ಲಿ ಮೊಕ್ಕಾಂ ಹೂಡಿ ನಿಯಮ ಉಲ್ಲಂಘಿಸುವವರನ್ನ ಹಿಡಿಯಲು ಪ್ಲಾನ್ ಮಾಡಿದ್ದರು. ಸೂಪರ್ ಬೈಕ್ ಹಾಗೂ ಅತೀ ವೇಗದಿಂದಾಗಿ ಪೊಲೀಸರಿಗೆ ನಿಯಮ ಉಲ್ಲಂಘಿಸುವವರನ್ನ ಹಿಡಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಾಮ್ ಬೀಚ್ ಹಾಗೂ ಸುತ್ತ ಮುತ್ತ ಪ್ರದೇಶದಲ್ಲಿ ದಾಖಲಾಗಿರುವ 500ಸಿಸಿ ಹಾಗೂ ಅದಕ್ಕಿಂತ ಹೆಚ್ಚಿನ ಎಂಜಿನ್ ಹೊಂದಿದ ಬೈಕ್ ಮಾಲೀಕರಿಗೆ ನೊಟೀಸ್ ನೀಡಲಾಗಿದೆ.

ಇದನ್ನೂ ಓದಿ:ರೋಡ್ ಟ್ರಿಪ್‌ನಲ್ಲಿ ಎದುರಾಗೋ 5 ಸಮಸ್ಯೆಗಳು ಮತ್ತು ಪರಿಹಾರ!

ಪಾಮ್ ಬೀಚ್ ಬಳಿ ಸ್ಪೀಡ್ ಟ್ರಾಕರ್ ಹಾಗೂ ಸಿಸಿಟಿವಿ ಅಳವಡಿಸಲಾಗಿದೆ. ಈ ಮೂಲಕ ನಿಯಮ ಮೀರುವ ಬೈಕರ್‌ಗಳನ್ನ ಹಿಡಿಯಲು ಮುಂದಾಗಿದ್ದಾರೆ. ನೊಟೀಸ್ ನೀಡಿದವರ ಪೈಕಿ ನಿಯಮ ಮೀರಿದರೆ ಅವರ ಲೈಸೆನ್ಸ್ ರದ್ದಾಗಲಿದೆ.

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ