ಹೊಸ ವರ್ಷದಲ್ಲಿ ಹೊಸ ನಿಯಮ- ಕಾರು ಮಾಡಿಫೈ ಮಾಡಿದರೆ ಕೇಸ್!

By Web DeskFirst Published Jan 12, 2019, 5:06 PM IST
Highlights

ಕಾರು ಮಾಡಿಫಿಕೇಶನ್ ಮಾಡಿ ರಸ್ತೆಗಿಳಿಸುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಹಳೇ ಕಾರುಗಳಿಗೆ ಹೊಸ ರೂಪ ನೀಡುವುದಕ್ಕಾಗಿಯೇ ಹಲವು ಕಂಪೆನಿಗಳಿವೆ. ನೂತನ ನಿಯಮದ ಪ್ರಕಾರ ಕಾರು ಮಾಡಿಫೈ ಮಾಡುವಂತಿಲ್ಲ. ಯಾಕೆ? ಇಲ್ಲಿದೆ ಕಾರಣ.

ನವದೆಹಲಿ(ಜ.12): ಕಾರು ಖರೀದಿಸಿ ಮಾಡಿಫೈ ಮಾಡುವರ ಸಂಖ್ಯೆ ಹೆಚ್ಚಾಗುತ್ತಿದೆ. ಹಳೇ ಕಾರುಗಳಿಗೆ ಹೊಸ ರೂಪ ನೀಡಲು ಹಲವು ಮಾಡಿಫೈ ಕಂಪೆನಿಗಳು ಇವೆ.  ಇನ್ಮುಂದೆ ವಾಹನ ಮಾಡಿಫೈ ಮಾಡುವುದು ನಿಯಮ ಬಾಹಿರ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಇದೀಗ ಭಾರತದ ಕಾರು ಪ್ರಿಯರು ಹಾಗೂ ಮಾಡಿಫೈ ಕಂಪೆನಿಗಳಿಗೆ ನುಂಗಲಾದ ತುತ್ತಾಗಿ ಪರಿಣಮಿಸಿದೆ.

ಇದನ್ನೂ ಓದಿ: ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾದ ಹತ್ತು ಕಾರುಗಳು!

ಕೇರಳ ಹೈಕೋರ್ಟ್ ನೀಡಿದ ಆದೇಶವನ್ನ ಮರುಪರಿಶೀಲಿಸಿದ ಸುಪ್ರೀಂ ಕೋರ್ಟ್ ಕಾರುಗಳ ಮಾಡಿಫೈ  ನಿಯಮ ಉಲ್ಲಂಘನೆ ಮಾಡಿದಂತೆ. ಕಾರಿನ ಆಲೋಯ್ ವೀಲ್ಹ್ಸ್, ಹಾರ್ನ್, ದೊಡ್ಡ ಚಕ್ರ ಬಳಕೆ ಸೇರಿದಂತೆ ಯಾವುದೇ ಬದಲಾವಣೆ ಮಾಡಿದರೆ ನಿಯಮ ಉಲ್ಲಂಘಿಸಿದಂತೆ. ನೂತನ ನಿಯಮದ  ಪ್ರಕಾರ ಮಾಡಿಫಿಕೇಶನ್ ಮಾಡಿದರೆ ಕೇಸ್ ದಾಖಲಾಗುತ್ತೆ. 

ಇದನ್ನೂ ಓದಿ: ಹೆಲ್ಮೆಟ್‌ಗೆ ಅಂತ್ಯಕ್ರಿಯೆ: ಪೊಲೀಸರ ವಿರುದ್ಧ ವಿನೂತನ ಪ್ರತಿಭಟನೆ!

ಮಾಡಿಫಿಕೇಶ್ ಮಾಡುವುದರಿಂದ ಕಾರಿನ ರಿಜಿಸ್ಟ್ರೇಶನ್ ದಾಖಲೆಯಲ್ಲಿ ನಮೂದಿಸಿ ಅಂಶಗಳು ಬದಲಾಗುತ್ತವೆ. ಇದು ಕಾನೂನಿನ ವಿರುದ್ಧ ಎಂದಿದೆ. ಈ ಹಿಂದೆ ಕೇರಳ ಹೈಕೋರ್ಟ್ ಮಾಡಿಫಿಕೇಶನ್‌ಗೆ ಅನುಮತಿ ನೀಡಿತ್ತು. ನೂತನ ನಿಯಮ ಇದೀಗ ಸರ್ಕಾರದ ಮೇಲೆ ಮಾಡಿಫಿಕೇಶನ್ ಕಂಪೆನಿಗಳ ಒತ್ತಡ ಬೀಳಲಿದೆ. 

ಇದನ್ನೂ ಓದಿ: ನಟ ಸಿದ್ಧಾರ್ಥ್ ಮಲ್ಹೋತ್ರ ಖರೀದಿಸಿದ ರೇಂಜ್ ರೋವರ್ ಕಾರಿನ ವಿಶೇಷತೆ ಏನು?

ಭಾರತದಲ್ಲಿ ಕಾರು ಅಥವಾ ವಾಹನ ಮಾಡಿಫಿಕೇಶನ್ ಅತೀ ದೊಡ್ಡ ಉದ್ಯಮವಾಗಿ ಬೆಳೆದಿದೆ. ಇದೀಗ ಸುಪ್ರೀಂ ಕೋರ್ಟ್ ನೂತನ ನಿಯಮ ಉದ್ಯಮದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಕಂಪೆನಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ನಿಯಮದಲ್ಲಿ ಕೆಲ ತಿದ್ದುಪಡಿ ಮಾಡಲು ಸೂಚಿಸುವ ಸಾಧ್ಯತೆ ಇದೆ. 

click me!