ಮೀನು ಊಟಕ್ಕೆ ಕಾರು ನಿಲ್ಲಿಸಿದ ಮೇಯರ್‌ಗೆ 10 ಸಾವಿರ ರೂ. ದಂಡ!

By Web Desk  |  First Published Jul 17, 2019, 3:11 PM IST

ಮೇಯರ್‌ಗೆ  ಮೀನು ಊಟ ತಿನ್ನೋ ಆಸೆಯಾಗಿದೆ.  ಕಾರ್ಯ ನಿಮಿತ್ತ ತೆರಳುತ್ತಿದ್ದ ಮೇಯರ್‌, ಪ್ರಸಿದ್ಧ ಮೀನು ಊಟದ ಹೊಟೆಲ್ ನೋಡಿ  ತಕ್ಷಣ ಕಾರು ನಿಲ್ಲಿಸಿ ರುಚಿಕರ ಮೀನು ಊಟ ಸವಿದಿದ್ದಾರೆ. ಆದರೆ ಊಟದ ಬಿಲ್ ಕೈಸೇರೋ ಮೊದಲೇ 10,000 ರೂಪಾಯಿ ದಂಡದ ಚಲನ್ ಮೇಯರ್ ಕೈಸೇರಿದೆ.


ಮುಂಬೈ(ಜು.17):  500 ರೂಪಾಯಿ ಮೀನು ಊಟಕ್ಕೆ ಮಹಾನಗರ ಮೇಯರ್ ಬರೋಬ್ಬರಿ 10,000 ರೂಪಾಯಿ ದಂಡಕ್ಕೆ ಗುರಿಯಾದ ಘಟನೆ ನಡೆದಿದೆ. ಮುಂಬೈ ಮಹಾನಗರ ಪಾಲಿಕೆ ಮೇಯರ್ ವಿಶ್ವನಾಥ್ ಮಹದೇಶ್ವರ್,  ಸರ್ಕಾರಿ ಕಾರ್ಯನಿಮಿತ್ತ  ಕೊಲ್ಲದೊಂಗ್ಗಿರಿಗೆ  ಭೇಟಿ ನೀಡೋ ಮಾರ್ಗ ನಡುವೆ ಪ್ರಸಿದ್ಧ ಮೀನು ಊಟದ ಹೊಟೆಲ್ ನೋಡಿದ್ದಾರೆ. ತಕ್ಷಣವೇ ಕಾರು ನಿಲ್ಲಿಸಿದ ಮೇಯರ್, ಹೊಟೆಲ್ ತೆರಳಿ ರುಚಿಕರ ಮೀನು ಊಟ ಸವಿದಿದ್ದಾರೆ. ಹೊಟೆಲ್‌ನಿಂದ ಹೊರಬಂದ ಬೆನ್ನಲ್ಲೇ, ಪೊಲೀಸರ ಫೈನ್ ಚಲನ್ ಮೇಯರ್ ಕೈಸೇರಿದೆ. ಆದರೆ ಮೇಯರ್ ದಂಡ ಕಟ್ಟದೆ ಪಾರಾಗಿದ್ದಾರೆ.

ಇದನ್ನೂ ಓದಿ: ಮೋದಿ ಮನೆ ಸಮೀಪ ಕಾರ್ ಸ್ಟಂಟ್; ಹಣಕಾಸು ಸಚಿವನ ಸಂಬಂಧಿ ಅರೆಸ್ಟ್!

Latest Videos

undefined

ಮೇಯರ್ ವಿಶ್ವನಾಥ್ ಅವರ ಟೊಯೊಟಾ ಇನೋವಾ ಸರ್ಕಾರಿ ಕಾರು ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ವಿಲೆ ಪಾರ್ಲೆ ರಸ್ತೆ ಬದಿಯಲ್ಲಿ ನೋ ಪಾರ್ಕಿಂಗ್ ಬೋರ್ಡ್ ಇದ್ದರೂ ಕಾರು ನಿಲ್ಲಿಸಲಾಗಿತ್ತು. ಹೀಗಾಗಿ  ದಂಡ ಹಾಕಲಾಗಿದೆ. ಆದರೆ ಮೇಯರ್ ಕಾರು ಪಾರ್ಕ್ ಮಾಡಿದ 500 ಮೀಟರ್ ಸುತ್ತ ಎಲ್ಲೂ ಕೂಡ ಪಾರ್ಕಿಂಗ್ ಸ್ಲಾಟ್ ಇರಲಿಲ್ಲ. ಹತ್ತಿರದ ಪಾರ್ಕಿಂಗ್ ಸುಮೂರು 3 ಕಿ.ಮೀ ದೂರದಲ್ಲಿತ್ತು. ನಿಯಮದ ಪ್ರಕಾರ 500 ಮೀಟರ್ ಸುತ್ತ ಪಾರ್ಕಿಂಗ್ ಸ್ಥಳವಿಲ್ಲದಿದ್ದರೆ, ನೂತನ ನಿಯಮ ಅನ್ವಯವಾಗುವುದಿಲ್ಲ. ಹೀಗಾಗಿ ಮೇಯರ್ 10,000 ರೂಪಾಯಿ ದಂಡ ಕಟ್ಟದೇ ಪಾರಾಗಿದ್ದಾರೆ.   

ಇದನ್ನೂ ಓದಿ: ಕಾರು ಕ್ಲೀನ್ ಇಲ್ಲದಿದ್ದರೆ ಬೀಳುತ್ತೆ 9 ಸಾವಿರ ರೂ ದಂಡ!

ರಸ್ತೆ ನಿಯಮ ಉಲ್ಲಂಘನೆ ಮಾಡಿದರೆ ಈಗ  10 ಪಟ್ಟು ಹೆಚ್ಚು ದಂಡ ಕಟ್ಟಬೇಕು. ನಗರ ಪ್ರದೇಶಗಳಲ್ಲಿ ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಚಲನ್‌ಗಳೇ ಹೆಚ್ಚು. ರಸ್ತೆ  ನಿಯಮ ಕಟ್ಟು ನಿಟ್ಟಾಗಿದೆ. ಹೀಗಾಗಿ ಪ್ರಭಾವಿ ವ್ಯಕ್ತಿಯಾದರೂ ದಂಡ ಕಟ್ಟಲೇಬೇಕು.  ಮುಂಬೈ ನಗರದಲ್ಲಿ ಪಾರ್ಕಿಂಗ್ ಅತೀ ದೊಡ್ಡ ಸಮಸ್ಯೆ. ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿದರೆ ಗರಿಷ್ಠ 23,000 ರೂಪಾಯಿ ದಂಡ ಕಟ್ಟ ಬೇಕಾಗುತ್ತೆ. ನೂತನ ನಿಯಮ ಜಾರಿಯಾದ ಬೆನ್ನಲ್ಲೇ ಮುಂಬೈ ಪಾರ್ಕಿಂಗ್ ದಂಡ ಮೊತ್ತ ಪ್ರತಿ ದಿನ ಲಕ್ಷ ಲಕ್ಷ ದಾಟುತ್ತಿದೆ.  
 

click me!