ತಾಪ್ಸಿ ಪನ್ನು ಸರ್ಪ್ರೈಸ್ ಗಿಫ್ಟ್‌ಗೆ ತಂಗಿ ಕ್ಲೀನ್ ಬೋಲ್ಡ್!

By Web Desk  |  First Published Jul 16, 2019, 8:03 PM IST

ಬಾಲಿವುಡ್ ನಟಿ ತಾಪ್ಸಿ ಪನ್ನು ಶಾಗುನ್‌ಗೆ ಸರ್ಪ್ರೈಸ್ ಗಿಫ್ಟ್ ನೀಡಿ ಸುದ್ದಿಯಾಗಿದ್ದಾರೆ. ಅತ್ಯುತ್ತ ಚಿತ್ರ, ಅದ್ಭುತ ನಟನೆ ಮೂಲಕ  ಗಮನಸೆಳೆದಿರುವ ತಾಪ್ಸಿ, ಶಾಗುನ್‌ಗೆ ನೀಡಿದ ಅಚ್ಚರಿ ಉಡುಗೊರೆ ಏನು? ಇಲ್ಲಿದೆ ವಿವರ.


ಮುಂಬೈ(ಜು.16): ಬಾಲಿವುಡ್ ನಟಿ ತಾಪ್ಸಿ ಪನ್ನು ಅದ್ಭುತ ಚಿತ್ರಗಳ ಮೂಲಕ ಅಭಿಮಾನಿಗಳಿಗೆ ಹಲವು ಸರ್ಪ್ರೈಸ್ ನೀಡಿದ್ದಾರೆ. ಇದೀಗ ತಂಗಿ ಶಗುನ್‌ಗೆ ಸರ್ಪ್ರೈಸ್ ಗಿಫ್ಟ್ ನೀಡಿ ಕುಟುಂಬಕ್ಕೆ ಅಚ್ಚರಿ ನೀಡಿದ್ದಾರೆ. ತಂಗಿಗೆ ತಾಪ್ಸಿ ನೀಡಿದ ಅಚ್ಚರಿ ಉಡುಗೊರೆ ಜೀಪ್ ಕಂಪಾಸ್ ಕಾರು. ಭಾರತದಲ್ಲಿ SUV ಸೆಗ್ಮೆಂಟ್‌ ಕಾರುಗಳಲ್ಲಿ ಹೊಸ ಸಂಚಲನ ಮೂಡಿಸಿರುವ ಜೀಪ್ ಕಂಪಾಸ್ ಬಾಲಿವುಡ್ ಸೆಲೆಬ್ರೆಟಿಗಳು ನೆಚ್ಚಿನ ಕಾರಾಗಿ ಹೊರಹೊಮ್ಮಿದೆ. ಇದೀಗ ತಾಪ್ಸಿ ಪನ್ನು ಕೂಡ ಜೀಪ್ ಕಂಪಾಸ್ ಖರೀದಿಸಿ ಈ ಲಿಸ್ಟ್‌ಗೆ ಸೇರಿಕೊಂಡಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: ಮೋದಿ ಮನೆ ಸಮೀಪ ಕಾರ್ ಸ್ಟಂಟ್; ಹಣಕಾಸು ಸಚಿವನ ಸಂಬಂಧಿ ಅರೆಸ್ಟ್!

ಜೀಪ್ ಕಂಪಾಸ್ ಲಿಮಿಟೆಡ್ ಪ್ಲಸ್ ಎಡಿಶನ್ ಕಾರನ್ನು ತಾಪ್ಸಿ ಪನ್ನು ಖರೀದಿಸಿದ್ದಾರೆ.  ಈ ಕಾರಿನ ಬೆಲೆ 21.33 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈ ಎಡಿಶನ್ ಕಾರಿನಲ್ಲಿ ಡೀಸೆಲ್ 4x2, ಪೆಟ್ರೋಲ್ AT ಹಾಗೂ ಡೀಸೆಲ್ 4x4 ವೇರಿಯೆಂಟ್ ಲಭ್ಯವಿದೆ. 18 ಇಂಚಿನ ಆಲೋಯ್ ವೀಲ್ಹ್, ಪನೋರಮಿಕ್ ಸನ್‌ರೂಫ್ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯ ಈ ಕಾರಿನಲ್ಲಿದೆ.

ಇದನ್ನೂ ಓದಿ: ಕುಡಿದು ವಾಹನ ಚಲಾಯಿಸುವ ಮುನ್ನ 10 ಸಾವಿರ ಜೇಬಿನಲ್ಲಿಟ್ಟುಕೊಳ್ಳಿ!

ಆಕರ್ಷಕ ಲುಕ್,   ಬಲಿಷ್ಠ ಎಂಜಿನ್ ಹಾಗೂ ಪವರ್ ಹೊಂದಿರುವ ಈ ಕಾರು, ಮಾರಾಟದಲ್ಲೂ ದಾಖಲೆ ಬರೆದಿದೆ. 2.00 ಲೀಟರ್ ಮಲ್ಟಿಜೆಟ್ II ಡೀಸೆಲ್ ಎಂಜಿನ್ ಹೊಂದಿದೆ.  171 bhp ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ.  6 ಸ್ಪೀಡ್ ಮ್ಯಾನ್ಯುಯೆಲ್ ಗೇರ್‌ಬಾಕ್ಸ್ ಹೊಂದಿದೆ.  ಪೆಟ್ರೋಲ್ ಎಂಜಿನ್ ಕಂಪಾಸ್ ಕಾರು 1.4-ಲೀಟರ್ ಮಲ್ಟಿ ಏರ್ ಎಂಜಿನ್ ಹೊಂದಿದ್ದು,  161 bhp ಪವರ್ ಹಾಗೂ 250 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.  7-ಸ್ಪೀಡ್ ಡ್ಯುಯೆಲ್ ಕ್ಲಚ್ ಟ್ರಾನ್ಸ್‌ಮಿಶನ್ ಹೊಂದಿದೆ.

click me!