ಮೈಲ್‌ಸ್ಟೋನ್‌ನಿಂದ ಹೆಲಿಕಾಪ್ಟರ್ ಪಡೆದ ಮುಂಬೈ ಮೂಲದ ಹೆಲಿಗೋ!

By Web Desk  |  First Published Feb 21, 2019, 5:39 PM IST

ಬೆಂಗಳೂರು ಏರೋ ಇಂಡಿಯಾ ಶೋನಲ್ಲಿ ಪ್ರದರ್ಶನಕ್ಕಿಟ್ಟಿರುವ ಏರ್‌ಬಸ್ ಎಚ್145 ಹೆಲಿಕಾಪ್ಟರ್‌ನ್ನು ಮುಂಬೈ ಮೂಲದ ಹೆಲಿಗೋ ಕಂಪೆನಿ ಪಡೆದುಕೊಂಡಿದೆ. ಈ ಹೆಲಿಕಾಪ್ಟರ್ ವಿಶೇಷತೆ ಏನು? ಇಲ್ಲಿದೆ ವಿವರ.


ಬೆಂಗಳೂರು(ಫೆ.21): ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಶ್ವಪ್ರಸಿದ್ಧ ಏರ್ ಶೋ ಮಹತ್ವದ ಒಪ್ಪಂದಕ್ಕೆ ಸಾಕ್ಷಿಯಾಗಿದೆ. ಏರೋ ಇಂಡಿಯಾ ಶೋನಲ್ಲಿ ಪ್ರದರ್ಶನಕ್ಕಿಟ್ಟಿರುವ ಮೈಲ್‌ಸ್ಟೋನ್ ಏವಿಯೇಷನ್‌ ಕಂಪೆನಿಯ ಏರ್‌ಬಸ್ ಎಚ್145 ಹೆಲಿಕಾಪ್ಟರ್‌ನ್ನು ಹೆಲಿಗೋ ಕಂಪನಿ ಪಡೆದುಕೊಂಡಿದೆ. ಮುಂಬೈ ಮೂಲದ ನಾನ್ ಶೆಡ್ಯೂಲ್ಡ್ ಹೆಲಿಕಾಪ್ಟರ್ ಕಾರ್ಯಾಚರಣೆಯ ಸಂಸ್ಥೆಯಾಗಿರುವ ಹೆಲಿಗೋ ಚಾರ್ಟರ್ಸ್‌ ಪ್ರೈವೇಟ್ ಲಿಮಿಟೆಡ್ ಲೀಸ್ ಆಧಾರದಲ್ಲಿ ಹೆಲಿಕಾಪ್ಟರ್  ಪಡೆದುಕೊಂಡಿದೆ. ಇಷ್ಟೇ ಅಲ್ಲ ಜಾರ್ಖಂಡ್‌ನಲ್ಲಿ ಏರ್‌ಬಸ್ ಎಚ್145 ಹೆಲಿಕಾಪ್ಟರ್‌ನ ಹಾರಾಟ ಸದ್ಯದಲ್ಲೇ  ಆರಂಭಿಸಲಾಗುತ್ತಿದೆ. 

ಇದನ್ನೂ ಓದಿ: ಬಾನಿನಲ್ಲಿ ಲೋಹದ ಹಕ್ಕಿಗಳ ಕಲರವ: ಇಲ್ಲಿದೆ ಏರೋ ಇಂಡಿಯಾ 2019 ಫೋಟೋಗಳು

Tap to resize

Latest Videos

ಮೈಲ್‌ಸ್ಟೋನ್‌ ಕಂಪನಿಯಲ್ಲಿ ಹೆಲಿಗೋ ವಿಶ್ವಾಸ ಇಟ್ಟಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಹೆಲಿಗೋ ಸಂಸ್ಥೆಗೆ ನಾವು ಹೆಲಿಕಾಪ್ಟರ್‌ಗಳನ್ನು ಪೂರೈಸುವ ಮೂಲಕ ನಮ್ಮ ಹಣಕಾಸು ಮತ್ತು ತಾಂತ್ರಿಕ ಸಾಮರ್ಥ್ಯಗಳು ದುಪ್ಪಟ್ಟಾಗಿವೆ. ನಮ್ಮ ಈ ಎರಡೂ ಸಂಸ್ಥೆಗಳ ಸಂಬಂಧ ದೀರ್ಘಾವಧಿವರೆಗೆ ಮುಂದುವರಿದು, ಉಭಯ ಸಂಸ್ಥೆಗಳು ಪ್ರಗತಿ ಕಾಣಲಿ ಎಂದು ಮೈಲ್‌ಸ್ಟೋನ್‌ನ ಹಿರಿಯ ಉಪಾಧ್ಯಕ್ಷ  ಮೈಕೆಲ್ ಯಾರ್ಕ್ ಶುಭ ಹಾರೈಸಿದರು.

ಎಚ್‌ಸಿಪಿಎಲ್ ಒಂದು ಪ್ರಮುಖವಾದ ಆನ್‌ಶೋರ್ ಮತ್ತು ಆಫ್‌ಶೋರ್ ಹೆಲಿಕಾಪ್ಟರ್ ಸೇವಾ ಸಂಸ್ಥೆಯಾಗಿದೆ. ಇದು ತೈಲ ಮತ್ತು ಅನಿಲ ಕಂಪನಿಗಳು, ಭಾರತದಲ್ಲಿ ಕಾರ್ಪೊರೇಟ್‌ಗಳು ಮತ್ತು ಅತಿ ಗಣ್ಯ ವ್ಯಕ್ತಿಗಳ ಪ್ರಯಾಣಕ್ಕೆ ಹೆಲಿಕಾಪ್ಟರ್‌ಗಳನ್ನು ಒದಗಿಸುತ್ತಿದೆ. ಪ್ರಸ್ತುತ ಕಂಪನಿಯು ನಾಲ್ಕು ಏರ್‌ಬಸ್ ಎಎಸ್365 ಎನ್3 ಡೌಫಿನ್ಸ್ ಸೇರಿದಂತೆ 10 ಹೆಲಿಕಾಪ್ಟರ್‌ಗಳ ಸೇವೆಯನ್ನು ನೀಡುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇದೇ ಕೊನೆಯ ಏರ್‌ ಶೋ?

ಎಚ್‌ಸಿಪಿಎಲ್ ಈ ವಿನೂತನವಾದ ಎಚ್145 ಹೆಲಿಕಾಪ್ಟರ್ ಅನ್ನು ತನ್ನ ವೈವಿಧ್ಯಮಯ ಉದ್ದೇಶಗಳಿಗೆ ಬಳಸಿಕೊಳ್ಳಲಿದೆ. ಸುರಕ್ಷತಾ ಕ್ರಮಗಳ ಸುಧಾರಣೆ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವ ಈ ಎಚ್145 ಹೆಲಿಕಾಪ್ಟರ್ ವೈವಿಧ್ಯಮಯವಾದ ಪಾತ್ರಗಳನ್ನು ನಿರ್ವಹಿಸಲಿದೆ ಎಂದು ಹೆಲಿಗೋ ಚಾರ್ಟರ್ಸ್‌ ಪ್ರೈವೇಟ್ ಲಿಮಿಟೆಡ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಕ್ಯಾಪ್ಟನ್ ಕೆ.ಪದ್ಮನಾಭನ್ ಹೇಳಿದರು.

4 ಟನ್-ವರ್ಗದ ಟ್ವಿನ್-ಎಂಜಿನ್ ರೋಟೋಕ್ರಾಫ್ಟ್ ಶ್ರೇಣಿಯಲ್ಲಿ ಎಸ್145 ಹೊಸ ಸದಸ್ಯನಾಗಿದೆ. ಉದ್ದೇಶಿತ ಸಾಮರ್ಥ್ಯ ಮತ್ತು ನಮ್ಯತೆ, ವಿಶೇಷವಾಗಿ ಎತ್ತರ ಮತ್ತು ಅತ್ಯುತ್ತಮವಾಗಿ ಕಾರ್ಯ ನಿರ್ವಹಣೆಗೆ ಪೂರಕವಾಗಿ  ಅಭಿವೃದ್ಧಿಗೊಳಿಸಲಾಗಿದೆ. ಗಾತ್ರದಲ್ಲಿ ಕಾಂಪ್ಯಾಕ್ಟ್ ಆಗಿದ್ದು, ನೋಡಲು ಸಣ್ಣದಾಗಿದ್ದರೂ ಈ ಹೆಲಿಕಾಪ್ಟರ್ ಫ್ಲೆಕ್ಸಿಬಲ್ ಕ್ಯಾಬಿನ್‌ಗಳನ್ನು ಒಳಗೊಂಡಿದೆ. ಇದರ ಮೂಲಕ ಹಲವಾರು ಉದ್ದೇಶಗಳಿಗೆ ಬಳಸಬಹುದಾದ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಇದನ್ನೂ ಓದಿ: ಭಾರತದಲ್ಲೇ ಉತ್ಪಾದಿಸಿ ಭಾರತಕ್ಕೇ ಮಾರಿ: ನಿರ್ಮಲಾ ಸೀತಾರಾಮನ್ ಆಹ್ವಾನ

ಹ್ಯೂಮನ್ ಮಶಿನ್ ಇಂಟರ್‌ಫೆಸ್(ಎಚ್‌ಎಂಐ) ಹೊಂದಿದ ಅತ್ಯಾಧುನಿಕ ಕಾಕ್‌ಪಿಟ್ ವಿನ್ಯಾಸ ಇತ್ತೀಚಿನ ತಂತ್ರಜ್ಞಾನಗಳು ಮತ್ತು ಹೆಲಿಯೋನಿಕ್ಸ್ ಏವಿಯೋನಿಕ್ಸ್‌ನಂತಹ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಅತ್ಯುತ್ತಮ ಸಾಮರ್ಥ್ಯದ ಎಂಜಿನ್‌ಗಳು, ಸುಧಾರಿತ ಪರಿವರ್ತನಾ ವ್ಯವಸ್ಥೆಯನ್ನು ಈ ಹೆಲಿಕಾಪ್ಟರ್‌ನಲ್ಲಿ ಅಳವಡಿಸಲಾಗಿದೆ. ಈ ಎಚ್145 ಹೆಲಿಕಾಪ್ಟರ್‌ನಲ್ಲಿ ಪ್ರಮುಖವಾಗಿ ರೋಟರ್ ಸಿಸ್ಟಂ ಇದ್ದು, ಬಹುಪಯೋಗಿ ಕ್ಯಾಬಿನ್ ಇದೆ.

click me!