ಪಿಯಾಗ್ಯೊ ಕಂಪೆನಿ ಭಾರತದಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡುತ್ತಿದೆ. ಕಡಿಮೆ ಬೆಲೆ, ಗರಿಷ್ಟ ಮೈಲೇಜ್ ಹಾಗೂ ಸುಲಭ ಚಾರ್ಜಿಂಗ್ ವ್ಯವಸ್ಥೆ ಹೊಂದಿರುವ ಈ ಆಟೋ ರಿಕ್ಷಾ ಭಾರತೀಯರನ್ನು ಮೋಡಿ ಮಾಡಲಿದೆ ಎಂದು ಕಂಪೆನಿ ಹೇಳಿದೆ. ಆಟೋ ರಿಕ್ಷಾ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಫೆ.21): ಇಟಲಿ ಮೂಲದ ದ್ವಿಚಕ್ರ ಹಾಗೂ ಮೂರು ಚಕ್ರದ ವಾಹನ ತಯಾರಿಕಾ ಕಂಪನಿ ಪಿಯಾಗ್ಯೊ ಇದೀಗ ಭಾರತದಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಲಿದೆ. ಈ ಮೂಲಕ ಮಹೀಂದ್ರ ಎಲೆಕ್ಟ್ರಿಕ್ ಹಾಗೂ ಬಜಾಜ್ ಆಟೋ ರಿಕ್ಷಾಗೆ ಪೈಪೋಟಿ ನೀಡಲು ಮುಂದಾಗಿದೆ.
ಇದನ್ನೂ ಓದಿ: ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳಿಗೆ 20 ಲಕ್ಷ ರೂ ಡಿಸ್ಕೌಂಟ್!
undefined
ಭಾರತ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಉತ್ತೇಜನ ನೀಡಿದೆ. ಹೀಗಾಗಿ ಪಿಯಾಗ್ಯೊ ಕೂಡ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಲಿದೆ. BS VI ಎಮಿಶನ್ ನಿಯಮ ಪಾಲನೆ ಮಾಡಲಿದೆ. ಇಷ್ಟೇ ಅಲ್ಲ ಗರಿಷ್ಠ ಸುರಕ್ಷತೆಗಾಗಿ ಎಲ್ಲಾ ನಿಯಮಗಳನ್ನೂ ಪಾಲಿಸಲಾಗುುವುದು ಎಂದು ಪಿಯಾಗ್ಯೊ ಹೇಳಿದೆ.
ಇದನ್ನೂ ಓದಿ: ಮಕ್ಕಳಿಗಾಗಿ ಪುಟ್ಟ ಆಟೋ ರಿಕ್ಷಾ ನಿರ್ಮಿಸಿದ ತಂದೆ!
ಇದೇ ವರ್ಷ ಪಿಯಾಗ್ಯೊ ಆಟೋ ರಿಕ್ಷಾ ಬಿಡುಗಡೆಯಾಗಲಿದೆ. ಈಗಾಗಲೇ ಎಲೆಕ್ಟ್ರಿಕ್ ಆಟೋ ರಿಕ್ಷಾ ತಯಾರಿಗಾಗಿ ಸಿದ್ದತೆ ಆರಂಭಿಸಿದೆ. 4-5 ತಿಂಗಳಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆಗೆ ಸಜ್ಜಾಗಲಿದೆ ಎಂದು ಪಿಯಾಗ್ಯೊ ಹೇಳಿದೆ. 1999ರಿಂದ ಭಾರತದಲ್ಲಿ ಪಿಯಾಗ್ಯೊ ಮಾರಾಟ ಆರಂಭಿಸಿದೆ. ಜನರ ವಿಶ್ವಾಸ ಗಳಿಸಿರುವ ಪಿಯಾಗ್ಯೊ ಇದೀಗ ಎಲೆಕ್ಟ್ರಿಕ್ ವಾಹನದಲ್ಲೂ ಜನರ ನಿರೀಕ್ಷೆಯನ್ನ ತಲುಪಲಿದೆ ಎಂದು ಪಿಯಾಗ್ಯೊ ಹೇಳಿದೆ.