ಬರುತ್ತಿದೆ ಸ್ಪೊರ್ಟೀವ್ ಮಾರುತಿ ಸ್ವಿಫ್ಟ್ ಕಾರು!

By Suvarna News  |  First Published Dec 28, 2019, 4:39 PM IST

ಹೊಸ ಸ್ವಿಫ್ಟ್ ಕಾರು ಆಕರ್ಷಕ ಲುಕ್‌ನಿಂದ ಹೆಚ್ಚು ಜನರನ್ನು ಆಕರ್ಷಿಸಿತ್ತು. ಇದೀಗ ಸ್ವಿಫ್ಟ್ ಮತ್ತಷ್ಟು ಆಕರ್ಷಕ ಹಾಗೂ ಸ್ಫೋರ್ಟೀವ್ ಲುಕ್‌ನಲ್ಲಿ ಬಿಡುಗಡೆಯಾಗುತ್ತಿದೆ. ನೂತನ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.


ಟೊಕಿಯೊ(ಡಿ.28): ಮಾರುತಿ ಸುಜುಕಿ ಹೊಸ ಅವತಾರದಲ್ಲಿ ಸ್ವಿಫ್ಟ್ ಕಾರು ಬಿಡುಗಡೆ ಮಾಡುತ್ತಿದೆ. ಹೊಸ ಸ್ವಿಫ್ಟ್ ಈಗಾಗಲೇ ದಾಖಲೆ ಮಾರಾಟ ಕಂಡಿದೆ. ಇದೀಗ ಇದೇ ಸ್ವಿಫ್ಟ್ ಕಾರನ್ನು ಮತ್ತಷ್ಟು ಸ್ಪೋರ್ಟೀವ್ ಮಾಡಿಫಿಕೇಶನ್ ಮೂಲಕ ಅನಾವರಣ ಮಾಡಲಾಗುತ್ತಿದೆ. ಟೊಕಿಯೊ ಆಟೋ ಸಾಲೊನ್ 2020ರ ಎಕ್ಸ್ಪೋದಲ್ಲಿ ನೂತನ ಕಾರನ್ನು ಪರಿಚಯಿಸಲು ಸುಜುಕಿ ಮುಂಜಾಗಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಹ್ಯುಂಡೈ ಔರಾ ಕಾರು; ಬೆಲೆ, ಇಲ್ಲಿದೆ ವಿಶೇಷತೆ!

Tap to resize

Latest Videos

undefined

ಕಟಾನ ಎಡಿಶನ್ ನೂತನ ಸ್ವಿಫ್ಟ್ ಹಲವು ವಿಶೇಷತೆ ಒಳಗೊಂಡಿದೆ. 1990ರಲ್ಲಿ ಜನಪ್ರಿಯವಾಗಿದ್ದ ಸುಜುಕಿ ಕಟಾನಾ ಬೈಕ್ ಹೆಸರನ್ನೇ ಮೂಲವಾಗಿಟ್ಟುಕೊಂಡು  ಇದೀಗ ಸುಜುಕಿ ಕಟನಾ ಎಡಿಶನ್ ಸ್ವಿಫ್ಟ್ ಕಾರು ಹೊರತರುತ್ತಿದೆ. ಮುಂಭಾಗದ ಗ್ರಿಲ್, ಹೆಡ್‌ಲ್ಯಾಂಪ್ಸ್ ಶೇಪ್, ಬಂಪರ್ ಸೇರಿದಂತೆ ಹಲವು ಬದಲಾವಣೆಗಳು ಕಾರಿನಲ್ಲಿದೆ.

ಇದನ್ನೂ ಓದಿ: ಬೆಂಗ್ಳೂರ್ ಸೇರಿದಂತೆ 5 ನಗರದಲ್ಲಿ MG ZS EV ಬುಕಿಂಗ್ ಆರಂಭ; 50 ಸಾವಿರ ರೂ!

ನೂತನ ಸುಜುಕಿ ಕಾರಿನ ಬೆಲೆ 5.72 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ) ಆರಂಭವಾಗಲಿದೆ. ಯುರೋಪ್ ಹಾಗೂ ಜಪಾನ್ ದೇಶದಲ್ಲಿ ಈ ಕಾರು 1.2 ಲೀಟರ್ k ಸೀರಿಸ್ ಎಂಜಿನ್ ಹೊಂದಿದೆ. ಆದರೆ ಭಾರತದಲ್ಲಿ 1.4 ಲೀಟರ್ ಟರ್ಬೋ ಚಾರ್ಜ್ ಎಂಜಿನ್ ಆಯ್ಕೆ ಇರಲಿದೆ ಎಂದು ಕಂಪನಿ ಹೇಳಿದೆ.

click me!