ಕಾರು ಖರೀದಿಸುವಾಗ ಕಾರಿನ ಬಣ್ಣ ಕೂಡ ಅಷ್ಟೇ ಮುಖ್ಯವಾಗುತ್ತೆ. ನೆಚ್ಚಿನ ಬಣ್ಣ, ಲಕ್ಕಿ ಕಲರ್, ಜನ್ಮ ನಕ್ಷತ್ರ ಅಥವಾ ಗೋತ್ರಕ್ಕೆ ಸರಿಹೊಂದುವ ಬಣ್ಣ ಆಯ್ಕೆ ಮಾಡುತ್ತಾರೆ. ಹಾಗಾದರೆ ಭಾರತೀಯರು ಹೆಚ್ಚು ಯಾವ ಬಣ್ಣದ ಕಾರನ್ನ ಇಷ್ಟಪಡುತ್ತಾರೆ? ಈ ಕುರಿತು ಸಮೀಕ್ಷೆ ಬಹಿರಂಗ ಪಡಿಸಿದೆ.
ನವದೆಹಲಿ(ಜ.18): ಭಾರತದಲ್ಲಿ ದೇಶ-ವಿದೇಶಿ ಬ್ರ್ಯಾಂಡ್ ಕಂಪೆನಿಗಳು ಕಾರುಗಳು ಲಭ್ಯವಿದೆ. ಕಡಿಮೆ ಬೆಲೆಯಿಂದ ಹಿಡಿದು ಕೋಟಿ ಕೋಟಿ ರೂಪಾಯಿಗಳ ಲಕ್ಸುರಿ ಕಾರುಗಳು ಭಾರತದ ಮಾರುಕಟ್ಟೆಯಲ್ಲಿದೆ. ಗ್ರಾಹಕರು ತಮಗಿಷ್ಟವಾದ, ಸಾಮರ್ಥ್ಯಕ್ಕೆ ಹೊಂದುವ ಕಾರುಗಳನ್ನ ಖರೀದಿಸುತ್ತಾರೆ. ಆದರೆ ಖರೀದಿ ವೇಳೆ ಗ್ರಾಹಕರು ಹೆಚ್ಚು ಇಷ್ಟಪಡೋ ಬಣ್ಣ ಯಾವುದು ಅನ್ನೋ ಕುತೂಹಲಕ್ಕೆ ಇದೀಗ ಉತ್ತರ ಸಿಕ್ಕಿದೆ.
ಇದನ್ನೂ ಓದಿ: ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಕಾರು - ಪ್ರತಿ ಚಾರ್ಜ್‌ಗೆ 540 ಕೀ.ಮಿ ಪ್ರಯಾಣ
undefined
2018ರಲ್ಲಿ ಅಟೋಮೊಬೈಲ್ ಕಲರ್ ಕೋಟಿಂಗ್ BASF ನಡೆಸಿದ ಸಮೀಕ್ಷೆಯಲ್ಲಿ ಯಾವ ಬಣ್ಣದ ಕಾರನ್ನ ಭಾರತೀಯರು ಹೆಚ್ಚು ಇಷ್ಟ ಪಡುತ್ತಾರೆ ಅನ್ನೋದು ಬಹಿರಂಗವಾಗಿದೆ. ಕಳೆದ ವರ್ಷ ಭಾರತೀಯರಿಗೆ ಬಿಳಿ ಬಣ್ಣದ ಕಾರು ಹೆಚ್ಚು ಇಷ್ಟ ಅನ್ನೋದನ್ನ ಸಮೀಕ್ಷೆ ಬಹಿರಂಗ ಪಡಿಸಿದೆ. ಒಟ್ಟು ಶೇಕಡಾ 43 ರಷ್ಟು ಕಾರು ಖರೀದಿಸೋ ಭಾರತೀಯ ಗ್ರಾಹಕರು ಬಿಳಿ ಬಣ್ಣದ ಕಾರು ಇಷ್ಟಪಡುತ್ತಾರೆ.
ಇದನ್ನೂ ಓದಿ: ಬ್ರೇಕ್ ಫೇಲ್ ಆದಾಗ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ?
SUV ಕಾರುಗಳಲ್ಲಿ ಶೇಕಡಾ 41 ರಷ್ಟು ಮಂದಿ ಬಿಳಿ ಬಣ್ಣದ ಕಾರು ಇಷ್ಟಪಟ್ಟರೆ, 15% ಗ್ರೇ ಕಲರ್, 14% ಸಿಲ್ವರ್ ಹಾಗೂ ಶೇಕಡಾ 12 ರಷ್ಟು ಕೆಂಪು ಬಣ್ಣದ ಕಾರು ಖರೀದಿಸುತ್ತಾರೆ. ಸಬ್ ಕಾಂಪಾಕ್ಟ್ ಕಾರುಗಳಲ್ಲಿ ಶೇಕಡಾ 42 ರಷ್ಟು ಮಂದಿ ಬಿಳಿ ಬಣ್ಣದ ಕಾರು ಇಷ್ಟಪಟ್ಟರೆ, 17% ಗ್ರೇ, 16% ಸಿಲ್ವರ್ ಕಾರು ಇಷ್ಟಪಡುತ್ತಾರೆ.