Mahindra XUV 300 ಕಾರು ಬಿಡುಗಡೆ ದಿನಾಂಕ ಬಹಿರಂಗ!

By Web Desk  |  First Published Jan 18, 2019, 3:03 PM IST

ಸಬ್ ಕಾಂಪಾಕ್ಟ್ SUV ಕಾರು ವಿಭಾಗದಲ್ಲಿ ಪೈಪೋಟಿ ಹೆಚ್ಚಾಗಿದೆ. ಇದೀಗ Mahindra ಕೂಡ 4 ಮೀಟರ್ SUV ಕಾರನ್ನ ಬಿಡುಗಡೆ ಮಾಡುತ್ತಿದೆ. Mahindra XUV 300 ಕಾರು ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಇದರ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.


ನವದೆಹಲಿ(ಜ.18): ಮಾರುತಿ ಬ್ರಿಜಾ, ಟಾಟಾ ನೆಕ್ಸಾನ್ ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ Mahindra ಕಂಪೆನಿ ಇದೀಗ XUV 300 ಕಾರು ಬಿಡುಗಡೆ ಮಾಡುತ್ತಿದೆ. ಈಗಾಗಲೇ 20,000 ರೂಪಾಯಿ ನೀಡಿ ಬುಕಿಂಗ್ ಆರಂಭಿಸಿರುವ Mahindra XUV 300 ಕಾರು ಇದೀಗ ಫೆಬ್ರವರಿ 14 ರಂದು ಬಿಡುಗಡೆಯಾಗಲಿದೆ ಎಂದು ಆಧೀಕೃತವಾಗಿ ಘೋಷಿಸಿದೆ.

Tap to resize

Latest Videos

undefined

ಇದನ್ನೂ ಓದಿ: ಜೀಪ್‌ ಕಂಪಾಸ್‌ ಲಾಂಗಿಟ್ಯೂಡ್‌(ಓ)-ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ!

ಭಾರತದ ಖ್ಯಾತ ರೇಸರ್ ಗೌರವ್ ಗಿಲ್ ನೂತನ Mahindra XUV 300 ಕಾರು ಡ್ರೈವ್ ಮಾಡೋ ವೀಡಿಯೋ ಒಂದನ್ನ ಕಂಪನಿ ಬಿಡುಗಡೆ ಮಾಡಿದೆ. ಈಗಾಗಲೇ ಭಾರಿ ಸದ್ದು ಮಾಡುತ್ತಿರುವ Mahindra XUV 300 ಕಾರು ಸಬ್ ಕಾಂಪಾಕ್ಟ್ SUV ಕಾರು ವಿಭಾಗದಲ್ಲಿ ಅಗ್ರಸ್ಥಾನಕ್ಕೇರಲಿದೆ ಅನ್ನೋ ಮಾತುಗಳು ಕೇಳಿಬಂದಿದೆ.

ಇದನ್ನೂ ಓದಿ: ಅಂಬಾನಿ ಪುತ್ರರ ಭದ್ರತೆಗಾಗಿ ಹೊಸ ರೇಂಜ್ ರೋವರ್ ಕಾರು!

ಮಹೀಂದ್ರ ಡೀಲರ್‌ಶಿಪ್ ಹಾಗೂ ಅಧೀಕೃತ ವೆಬ್‌ಸೈಟ್ ಮೂಲಕ Mahindra XUV300 ಕಾರು ಬುಕ್ ಮಾಡಬಹುದು ಎಂದು Mahindra ಹೇಳಿದೆ. ನೂತನ Mahindra XUV300 ಕಾರು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯೆಂಟ್‌ಗಳಲ್ಲಿ ಲಭ್ಯವಿದೆ. ಬೆಲೆ 8 ರಿಂದ 12 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. 

ಇದನ್ನೂ ಓದಿ: 20 ಸಾವಿರಕ್ಕೆ ಬುಕ್ ಮಾಡಿ ನೂತನ ಮಹೀಂದ್ರ XUV300 ಕಾರು!

ಮಹಾರಾಷ್ಟ್ರದ ನಾಸಿಕ್ ನಿರ್ಮಾಣ ಘಟಕದಲ್ಲಿ Mahindra XUV300 ಕಾರು ನಿರ್ಮಾಣವಾಗಿದೆ. Maruti Brezza, Ford Ecosport ಹಾಗೂ Tata Nexon ಕಾರುಗಳಿಗೆ ಪೈಪೋಟಿ ನೀಡಬಲ್ಲ ನೂತನ Mahindra XUV300 ಕಾರು ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

click me!