ನವದೆಹಲಿ(ಅ.03): ಲಕ್ಸುರಿಯಲ್ಲಿ ಯಾವುದೇ ರಾಜಿಇಲ್ಲದ, ಆಕರ್ಷಕ ವಿನ್ಯಾಸ, ದಕ್ಷ ಎಂಜಿನ್ ಹೊಂದಿರುವ ಹಾಗೂ ಕೈಗೆಟುಕುವ ದರದ ಆಡಿ Q2 ಕಾರು ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ ಅಂತ್ಯದಲ್ಲಿ ನೂತನ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ಬಿಡುಗಡೆಗೂ ಮುನ್ನ ನೂತನ ಕಾರಿನ ಬುಕಿಂಗ್ ಆರಂಭಗೊಂಡಿದೆ.
ಪವರ್‌ಫುಲ್ ಎಂಜಿನ್, ದುಬಾರಿ ಬೆಲೆ; ಭಾರತದಲ್ಲಿ ಬಿಡುಗಡೆಯಾಯ್ತು Audi RS Q8
undefined
ಆಡಿ Q2 ಕಾರನ್ನು 2 ಲಕ್ಷ ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬಹುದು. ಇದರ ಜೊತೆಗೆ ಮತ್ತೊಂದು ಕೊಡುಗೆಯನ್ನು ಆಡಿ ನೀಡುತ್ತಿದೆ. ಈಗಲೇ ಕಾರು ಬುಕ್ ಮಾಡುವ ಗ್ರಾಹಕರಿಗೆ 5 ವರ್ಷದ ಸರ್ವೀಸ್ ಪ್ಯಾಕೇಜ್, 2+3 ವಿಸ್ತರಿಸಿದ ವಾರೆಂಟಿ ಹಾಗೂ 2+3 ರೋಡ್ ಸೈಡ್ ಅಸಿಸ್ಟೆನ್ಸ್ ಉಚಿತವಾಗಿ ಸಿಗಲಿದೆ.
ಭಾರತದಿಂದ ರಫ್ತಾಗುತ್ತಿರುವ ಆಡಿ e tron ಯೂರೋಪ್‌ನ ಬೆಸ್ಟ್ SUV ಕಾರು!.
ಭಾರತದಲ್ಲಿ ಆಡಿ ಈ ವರ್ಷ ಬಿಡುಗಡೆ ಮಾಡುತ್ತಿರುವ 5ನೇ ಕಾರು ಇದಾಗಿದೆ. ಹಲವು ಫೀಚರ್ಸ್ ನೂತನ ಕಾರಿಗೆ ಸೇರ್ಪಡೆಗೊಂಡಿದೆ. ನೂತನ ಕಾರು 2 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ ಆಡಿ ಕ್ವಾಟ್ರೋ ಟೆಕ್ನಾಲಜಿ ಹೊಂದಿದೆ. ಇನ್ನು 4 ವೀಲ್ ಡ್ರೈವ್ ಸಿಸ್ಟಮ್ ಹೊಂದಿದೆ.
ನೂತನ ಆಡಿ Q2 ಕಾರಿನ ಬೆಲೆ 35 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಇದು ಆಡಿ ಕಾರುಗಳ ಪೈಕಿ ಅತ್ಯಂತ ಕಡಿಮೆ ಬೆಲೆಯ ಕಾರು ಅನ್ನೋದನ್ನು ಆಡಿ ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ ಲಕ್ಸುರಿ, ಸುರಕ್ಷತೆ, ಹೆಚ್ಚುವರಿ ಫೀಚರ್ಸ್ ಹಾಗೂ ಇತರ ವಿಶೇಷತೆಗಳಲ್ಲಿ ಆಡಿ ಎಂದಿಗೂ ರಾಜಿಯಾಗುವುದಿಲ್ಲ ಎಂದಿದೆ. ಕಡಿಮೆ ಬೆಲೆಯಲ್ಲಿ ಗರಿಷ್ಠ ಫೀಚರ್ಸ್ ಹಾಗೂ ಅಷ್ಟೇ ಕಂಫರ್ಟ್ ಆಡಿ ನೀಡಲಿದೆ ಎಂದಿದೆ.