ಸಾಂಕ್ರಾಮಿಕ ಪಿಡುಗಿನ ನಡುವೆ ಭಾರತದ ಆಟೋಮೊಬೈಲ್ ಚೇತರಿಸಿಕೊಳ್ಳುತ್ತಿದೆ. ಆದರಲ್ಲೂ ಜನರು ಟಾಟಾ ಕಾರುಗಳನ್ನು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳ ಅಂಕಿ ಅಂಶ ಇದನ್ನು ಸ್ಪಷ್ಟಪಡಿಸುತ್ತಿದೆ.
ಮುಂಬೈ(ಅ.02): ಭಾರತದ ಆಟೋಮೊಬೈಲ್ ಚೇತರಿಕೆ ಕಾಣುತ್ತಿದ್ದರೂ ನಿರೀಕ್ಷಿತ ಮಟ್ಟ ತಲುಪಿಲ್ಲ. 2019 ಹಾಗೂ 2020 ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೆ ತೀವ್ರ ಹೊಡೆತ ನೀಡಿದೆ. 2020ರ ಕೊರೋನಾ ವೈರಸ್ ಹಲವು ಬದಲಾವಣೆಗಳಿಗೂ ಕಾರಣವಾಯಿತು. ಇದೀಗ ನಿಧನಾವಾಗಿ ಆಟೋ ಸೆಕ್ಟರ್ ಚೇತರಿಕೆ ಕಾಣುತ್ತಿದೆ. ಜನರು ಸಾರಿಗೆ ವಾಹನದ ಬದಲು ಖಾಸಗಿ ವಾಹನದಲ್ಲಿ ಪ್ರಯಾಣಿಸಲು ಬಯಸುತ್ತಿದ್ದಾರೆ. ಇದಕ್ಕಾಗಿ ಕಾರು, ಬೈಕ್, ಸ್ಕೂಟರ್ ಖರೀದಿಗೆ ಮುಂದಾಗುತ್ತಿದ್ದಾರೆ. ಕಾರು ಖರೀದಿಯಲ್ಲಿ ಹೆಚ್ಚಿನ ಭಾರತೀಯರು ಇದೀಗ ಟಾಟಾ ಮೋಟಾರ್ಸ್ ಕಾರು ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.
ಲೀಸ್ ಮೂಲಕ ಕಾರು; ಟಾಟಾ ನೆಕ್ಸಾನ್ EV ಮೇಲೆ ಭರ್ಜರಿ ಆಫರ್!
ಸೆಪ್ಟೆಂಬರ್ ತಿಂಗಳಲ್ಲಿ ಟಾಟಾ ಮೋಟಾರ್ಸ್ ಕಾರುಗಳ ಬೇಡಿಕೆ ಹೆಚ್ಚಾಗಿದೆ. 2019ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ, ಈ ಬಾರಿ ಟಾಟಾ ಮೋಟಾರ್ಸ್ ಕಾರುಗಳ ಮಾರಾಟದಲ್ಲಿ ಶೇಕಡಾ 37 ರಷ್ಟು ಹೆಚ್ಚಳವಾಗಿದೆ. ಸೆಪ್ಟೆಂಬರ್ 2020ರಲ್ಲಿ ಟಾಟಾ ಮೋಟಾರ್ಸ್ 44,444 ವಾಹನಗಳು ಮಾರಾಟವಾಗಿದೆ. ಇನ್ನು 2019ರ ಸೆಪ್ಟೆಂಬರ್ ತಿಂಗಳಲ್ಲಿ 32,376 ವಾಹನ ಮಾರಾಟವಾಗಿತ್ತು.
ಹಬ್ಬದ ಪ್ರಯುಕ್ತ ಟಾಟಾ ಕಾರಿನ ಮೇಲೆ ಭರ್ಜರಿ ಆಫರ್ ಘೋಷಿಸಿದ ಬೆಂಗಳೂರು ಆದಿಶಕ್ತಿ ಕಾರ್ಸ್!.
ಪ್ಯಾಸೆಂಜರ್ ವಾಹನ ವಿಭಾಗದಲ್ಲಿ ಬರೋಬ್ಬರಿ ಶೇಕಡಾ 163 ರಷ್ಟು ಏರಿಕೆ ಕಂಡಿದೆ. 2020ರ ಸೆಪ್ಟೆಂಬರ್ ತಿಂಗಳಲ್ಲಿ 21,199 ಪ್ಯಾಸೆಂಜರ್ ವಾಹನ ಮಾರಾಟವಾಗಿದೆ. ಇನ್ನು 2019ರಲ್ಲಿ 8097 ಪ್ಯಾಸೆಂಜರ್ ವಾಹನ ಮಾರಾಟವಾಗಿತ್ತು. ಪ್ಯಾಸೆಂಜರ್ ವಾಹನ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದೆ. ಗ್ರಾಹಕರು ಇದೀಗ ಟಾಟಾ ಕಾರುಗಳತ್ತ ಮುಖಮಾಡುತ್ತಿದ್ದಾರೆ ಅನ್ನೋದು ಸೆಪ್ಟೆಂಬರ್ ತಿಂಗಳ ಅಂಕಿ ಅಂಶ ಸಾರಿ ಹೇಳುತ್ತಿದೆ ಎಂದು ಟಾಟಾ ಮೋಟಾರ್ಸ PVBU ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದ್ದಾರೆ.