100ಕ್ಕೂ ಹೆಚ್ಚು ಲಕ್ಸುರಿ ಕಾರಿನಲ್ಲಿ ಲೋಕಸಭಾ ಚುನಾವಣಾ ಪ್ರಚಾರ!

By Web DeskFirst Published Apr 7, 2019, 10:12 AM IST
Highlights

ಇದೇ ಮೊದಲ ಬಾರಿಗೆ ಚುನಾವಣಾ ಪ್ರಚಾರದ ರ‍್ಯಾಲಿಯಲ್ಲಿ 100ಕ್ಕೂ ಹೆಚ್ಚು ಲಕ್ಸುರಿ ಕಾರುಗಳನ್ನು ಉಪಯೋಗಿಸಲಾಗಿದೆ. ಈ ವಿಶೇಷ ರ‍್ಯಾಲಿ ಆಯೋಜಿಸಿದ್ದು ಏಲ್ಲಿ? ಹೇಗಿತ್ತು ಈ ರ‍್ಯಾಲಿ? ಇಲ್ಲಿದೆ ಮಾಹಿತಿ.
 

ಮುಂಬೈ(ಏ.07): ಲೋಕಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷ ಹಾಗೂ ಮುಖಂಡರು ರ‍್ಯಾಲಿ, ಪ್ರಚಾರ ಸಭೆ ಆಯೋಜಿಸುತ್ತಿದ್ದಾರೆ. ಈ ಮೂಲಕ ಮತದಾರರನ್ನು ಸೆಳೆಯಲು ಕಸರತ್ತು ಆರಂಭಿಸಿದ್ದಾರೆ. ಮುಂಬೈನಲ್ಲಿ ಉದ್ಯಮಿಗಳು ಹಾಗೂ ಐಷಾರಾಮಿ ಕಾರು ಮಾಲೀಕರು ವಿಶೇಷ ರ‍್ಯಾಲಿ ಆಯೋಜಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ಮೇ ಭಿ ಚೌಕಿದಾರ್ ಅಭಿಯಾನವನ್ನು ಬೆಂಬಲಿ ಈ ರ‍್ಯಾಲಿ ಆಯೋಜಿಸಿದ್ದಾರೆ.

ಇದನ್ನೂ ಓದಿ: ಒಮ್ನಿ To ಇಯಾನ್: ಇಲ್ಲಿದೆ ಗುಡ್ ಬೈ ಹೇಳಲಿರುವ ಕಾರುಗಳ ಲಿಸ್ಟ್!

ಈ ರ‍್ಯಾಲಿಯ ವಿಶೇಷತೆ ಅಂದರೆ 100ಕ್ಕೂ ಹೆಚ್ಚು ಐಷಾರಾಮಿ, ಲಕ್ಸುರಿ ಕಾರುಗಳನ್ನು ಬಳಸಲಾಗಿದೆ. ಲಕ್ಸುರಿ ಕಾರು ಮಾಲೀಕರು ಮೋದಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಈ ರ‍್ಯಾಲಿ ಆಯೋಜಿಸಲಾಗಿದೆ. ಮುಂಬೈ ಸಿ ಲಿಂಗ್ ಬ್ರಿಡ್ಜ್ ಸೇರಿದಂತೆ ನಗರದ ಹಲವೆಡೆ ರ‍್ಯಾಲಿ ಆಯೋಜಿಸಲಾಗಿತ್ತು. ರ‍್ಯಾಲಿಯಲ್ಲಿ ಪೊರ್ಶೆ, ಮಿನಿ ಕೂಪರ್, ಫೆರಾರಿ ಕ್ಯಾಲಿಫೋರ್ನಿಯಾ, BMW, ಜಾಗ್ವಾರ್, ರೇಂಜ್ ರೋವರ್,  ಆಡಿ ಸೇರಿದಂತೆ 100ಕ್ಕೂ ಹೆಚ್ಚು ಲಕ್ಸರಿ ಕಾರಿನಲ್ಲಿ ಮೇ ಭಿ ಚೌಕಿದಾರ್ ರ‍್ಯಾಲಿ ನಡೆಸಲಾಯಿತು.

ಇದನ್ನೂ ಓದಿ: ಮಾರ್ಚ್‌ನಲ್ಲಿ ಗರಿಷ್ಠ ಮಾರಾಟವಾದ ಟಾಪ್ 7 ಕಾರು- ಇಲ್ಲಿದೆ ಲಿಸ್ಟ್!

ಇದೇ ಮೊದಲ ಬಾರಿಗೆ ಈ ಕಾರು ಮಾಲೀಕರು ಈ ರೀತಿಯ ರಾಜಕೀಯ ಬೆಂಬಲದ ರ‍್ಯಾಲಿ ಆಯೋಜಿಸಿದ್ದಾರೆ. ಇಷ್ಟೇ ಅಲ್ಲ ರಾಜಕೀಯ ಪ್ರಚಾರ ರ‍್ಯಾಲಿಯಲ್ಲಿ ಇದೇ ಮೊದಲ ಬಾರಿಗೆ 100ಕ್ಕೂ ಹೆಚ್ಚು ಲಕ್ಸುರಿ ಕಾರನ್ನು ಬಳಸಲಾಗಿದೆ. ಈ ಹಿಂದೆ ರಾಜಕೀಯ ಮುಖಂಡರು ಮಾಡಿಫಿಕೇಶನ್, ಹೈ ಎಂಡ್ ಕಾರುಗಳನ್ನು ಚುನಾವಣೆ ಪ್ರಚಾರದಲ್ಲಿ ಬಳಸುತ್ತಿದ್ದರು. ಆದರೆ ಇದೀಗ ಸಾಮಾನ್ಯರ ಸೋಗಿನಲ್ಲಿ ಮತಕೇಳುವ ರಾಜಕಾರಣಿಗಳು ಐಷಾರಾಮಿ ಕಾರುಗಳನ್ನು ಪ್ರಚಾರದ ವೇಳೆ ಬಳಕೆ ಮಾಡುವುದು ಕಡಿಮೆ.

click me!