ಹೊಸ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ- ಬೆಲೆ 2.19 ಕೋಟಿ!

Published : Apr 06, 2019, 07:59 PM IST
ಹೊಸ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ- ಬೆಲೆ 2.19 ಕೋಟಿ!

ಸಾರಾಂಶ

ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹೊಸ ಕಾರು ಖರೀದಿಸಿದ್ದಾರೆ. ನೂತನ ಕಾರಿನ ಬೆಲೆ 2.19 ಕೋಟಿ  ರೂಪಾಯಿ . ಆದರೆ ಪಾಂಡ್ಯ ಕಾರು ಖರೀದಿಯನ್ನು ಗೌಪ್ಯವಾಗಿಟ್ಟಿದರು. ಹಾರ್ದಿಕ್ ಪಾಂಡ್ಯ ನೂತನ ಕಾರು ಹೇಗಿದೆ? ಇದರ ವಿಶೇಷತೆ ಏನು?

ಮುಂಬೈ(ಏ.06): ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೆ ಖಾಸಗಿ ಟಿವಿ ಕಾರ್ಯಕ್ರಮದಲ್ಲಿ ಮಹಿಳೆಯ ಕುರಿತು ಅಸಭ್ಯ ಹೇಳಿಕೆ ನೀಡಿ ಟೀಂ  ಇಂಡಿಯಾದಿಂದ ಅಮಾನತುಗೊಂಡಿದ್ದ ಪಾಂಡ್ಯ ಇದೀಗ ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡುತ್ತಿದ್ದಾರೆ. ಐಪಿಎಲ್ ಟೂರ್ನಿ ನಡುವೆ ಹಾರ್ದಿಕ್ ಪಾಂಡ್ಯ, ಮರ್ಸಡೀಸ್ ಬೆಂಝ್ AMG G63 SUV ಕಾರು ಖರೀದಿಸಿದ್ದಾರೆ. ಇದರ ಬೆಲೆ 2.19 ಕೋಟಿ ರೂಪಾಯಿ(ಎಕ್ಸ್ ಶೋ ರೂಂ).

ಇದನ್ನೂ ಓದಿ: ಮಾರ್ಚ್‌ನಲ್ಲಿ ಗರಿಷ್ಠ ಮಾರಾಟವಾದ ಟಾಪ್ 7 ಕಾರು- ಇಲ್ಲಿದೆ ಲಿಸ್ಟ್!

ಪ್ರತಿ ವಿಚಾರವನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದ ಪಾಂಡ್ಯ, ಅಮಾನತಿನ ಬಳಿಕ ಖಾಸಗಿ ವಿಚಾರಗಳಿಗೆ ಬ್ರೇಕ್ ಹಾಕಿದ್ದಾರೆ. ಹೀಗಾಗಿ ಹಾರ್ದಿಕ್ ಪಾಂಡ್ಯ ನೂತನ ಕಾರು ಖರೀದಿಸಿದ ವಿಚಾರ ಬೆಳಕಿಗೆ ಬರಲಿಲ್ಲ. ಆದರೆ ಸಹೋದರ ಕ್ರುನಾಲ್ ಪಾಂಡ್ಯ ಪತ್ನಿ, ಪಾಂಡ್ಯ ನೂತನ ಕಾರಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಒಮ್ನಿ To ಇಯಾನ್: ಇಲ್ಲಿದೆ ಗುಡ್ ಬೈ ಹೇಳಲಿರುವ ಕಾರುಗಳ ಲಿಸ್ಟ್!

ನೂತನ ಕಾರನ್ನು ಡ್ರೈವ್ ಮಾಡುತ್ತಿರುವ ಪಾಂಡ್ಯ ವೀಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ಪಾಂಡ್ಯ ಖರೀದಿಸಿದ ಮರ್ಸಡೀಸ್ ಬೆಂಝ್ AMG G63 SUV ಕಾರು 2018ರಲ್ಲಿ ಬಿಡುಗಡೆಯಾಗಿದೆ. 4.0 ಲೀಟರ್ ಬೈ ಟರ್ಬೋ V8 ಪೆಟ್ರೋಲ್ ಎಂಜಿನ್, 585 Bhp ಪವರ್ ಹಾಗೂ 850 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ಕಾರಿನ ಗರಿಷ್ಠ ವೇಗ 220 km/h.

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ