ಶ್ರೇಷ್ಠ ರಸ್ತೆ-ವಿಶ್ವದ ಕೆಟ್ಟ ಬೈಕ್ ಇದುವೇ ಮಂಕಿ ರನ್ ರೇಸ್!

By Web Desk  |  First Published Nov 25, 2018, 10:10 PM IST

ಫನ್ ಹಾಗೂ ಅಡ್ವೆಂಚರ್ ಥ್ರಿಲ್‌ಗಾಗಿ ಆಯೋಜಿಸಲಾಗುವು ಮಂಕಿ ರನ್ ರೇಸ್‌ಗೆ ಸಿದ್ಧತೆ ಆರಂಭಗೊಂಡಿದೆ. ಈ ರೇಸ್‌ನಲ್ಲಿ ಪಾಲ್ಗೊಳ್ಳಲು ಬರೋಬ್ಬರಿ 1.16 ಲಕ್ಷ ಪಾವತಿಸಬೇಕು. ಈ ರೇಸ್ ಎಲ್ಲಿ ಆಯೋಜನೆಯಾಗಿದೆ. ಇದರ ವಿಶೇಷತೆ ಏನು? ಇಲ್ಲಿದೆ ವಿವರ.


ರೊಮೇನಿಯಾ(ನ.25): ವಿಶ್ವದ ಅತ್ಯಂತ ಶ್ರೇಷ್ಠ ರಸ್ತೆಯಲ್ಲಿ ಬೈಕ್ ಓಡಿಸುವ ಆಸೆ ನಿಮಗಿದೆಯಾ? ಹಾಗಿದ್ದರೆ ನೀವು ಮಂಕಿ ರನ್ ಅಡ್ವೆಂಚರ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಸೂಕ್ತ.  ಈ ಬಾರಿ ರೊಮೇನಿಯಾದ ಅತ್ಯಂತ ಸುಂದರ ಹಿಲ್ ಸ್ಟೇಶನ್ ಪ್ರದೇಶದಲ್ಲಿ ಮಂಕಿ ರನ್ ಅಡ್ವೆಂಚರ್ ಆಯೋಜನೆಯಾಗಿದೆ.

2019ರ ಜೂನ್ 28 ರಿಂದ ಜುಲೈ 2019 ಹಾಗೂ ಸೆಪ್ಟೆಂಬರ್ 2019 ರಲ್ಲಿ ಎರಡು ಬಾರಿ ಮಂಕಿ ರನ್ ಅಡ್ವೆಂಚರ್ ಆಯೋಜಿಸಲಾಗಿದೆ. ಈ ಸ್ಪರ್ದೆಯಲ್ಲಿ ಬಳಸೋ ಬೈಕ್  50 ಸಿಸಿ ಅನ್ನೋದೇ ವಿಶೇಷ. ಇದಕ್ಕೆ ಮಂಕಿ ಬೈಕ್ ಎಂದು ಕರೆಯಲಾಗುತ್ತದೆ.

Tap to resize

Latest Videos

undefined

48 ಸಿಸಿ, 4 ಸ್ಟ್ರೋಕ್ ಏರ್ ಕೂಲ್‌ಡ್ ಎಂಜಿನ್ ಹೊಂದಿರುವ ಈ ಬೈಕ್ ಕೇವಲ 75 ಕೆಜಿ ತೂಕ ಹೊಂದಿದೆ. ಇಷ್ಟೇ ಅಲ್ಲ ಫ್ರಂಟ್ ಡಿಸ್ಕ್ ಹಾಗೂ ರೇರ್ ಡ್ರಮ್ ಬ್ಕೇ ಕೂಡ ಇದೆ. ಇತರ ಬೈಕ್‌ಗಳಿಗೆ ಹೋಲಿಸಿದರೆ ಇದರ ಗಾತ್ರ ಚಿಕ್ಕದು.

ಉಕ್ರೇನ್ ಬಾರ್ಡರ್‌ನ ಸುಂದರ ರಸ್ತೆಗಳಲ್ಲಿ ರೇಸ್ ಆರಂಭಗೊಳ್ಳಲಿದೆ. 900 ಕಿ.ಮೀ ದೂರದ ಈ ರೇಸ್ ಕೋಸ್ಟಲ್ ಟೌನ್ ವಾಮ ವೆಚೆ ಬಳಿ ಅಂತ್ಯಗೊಳ್ಳಲಿದೆ. ಮಂಕಿ ರನ್ ಹೆಚ್ಚು ಫನ್ ಹಾಗೂ ಅಡ್ವೆಂಚರ್ ರೇಸ್ ಎಂದೇ ಗುರುತಿಸಿಕೊಂಡಿದೆ. ಆಯೋಜಕರೇ ಹೇಳುವಂತೆ ಅತ್ಯಂತ ಶ್ರೇಷ್ಠ ರಸ್ತೆ ಹಾಗೂ ವಿಶ್ವದ ಕೆಟ್ಟ ಬೈಕ್ ಪ್ರಯಾಣವೇ ಮಂಕಿ ರನ್.

click me!