
ಮುಂಬೈ(ನ.25): ಆಸ್ಟ್ರಿಯನ್ ಸ್ಪೋರ್ಟ್ ಬೈಕ್ ಕೆಟಿಎಂ ಸಂಸ್ಥೆಯ ಶೇಕಡಾ 49ರಷ್ಟು ಶೇರು ಹೊಂದಿರುವ ಬಜಾಜ್ ಆಟೋ ಇದೀಗ ಭಾರತದಲ್ಲಿ ನೂತನ KTM 200 ಡ್ಯೂಕ್ ಬಿಡುಗಡೆ ಮಾಡಿದೆ. ಹಲವು ವಿಶೇಷತೆಗಳೊಂದಿಗೆ ಕೆಟಿಎಂ ಮತ್ತೆ ಮಾರುಕಟ್ಟೆ ಸದ್ದು ಮಾಡಲಿದೆ ಅನ್ನೋದು ಸಂಸ್ಥೆಯ ವಿಶ್ವಾಸ.
ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್(ABS) ಹೊಂದಿರುವ ನೂತನ KTM 200 ಡ್ಯೂಕ್ ಬೈಕ್ ಬೆಲೆ 1.60 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ABS ಇಲ್ಲದ KTM 200 ಡ್ಯೂಕ್ ಬೈಕ್ ಹಾಗೇ ಮುಂದುವರಿಯಲಿದೆ. ಇದರ ಬೆಲೆ 1.51 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಭಾರತದ 450 ಕೆಟಿಎಂ ಶೋ ರೂಂಗಳಲ್ಲಿ ನೂತನ KTM 200 ಡ್ಯೂಕ್ ಬೈಕ್ ಲಭ್ಯವಿದೆ. ಸದ್ಯ ಗ್ರಾಹಕರಿಗೆ ಎಬಿಎಸ್ ಹಾಗೂ ನಾನ್ ಎಬಿಎಸ್ ಬೈಕ್ ಆಯ್ಕೆಗಳಿವೆ. ಇಷ್ಟೇ ಅಲ್ಲ ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿದೆ ಎಂದು ಬಜಾಜ್ ಅಟೋ ಅಧ್ಯಕ್ಷ ಅಮಿತ್ ನಂದಿ ಹೇಳಿದ್ದಾರೆ.
ಯುರೋಪ್‌ನಲ್ಲಿ ಹೆಚ್ಚು ಪ್ರಖ್ಯಾತಿ ಹೊಂದಿರುವ ಕೆಟಿಎಂ ಬೈಕ್, ಭಾರತದಲ್ಲಿ ಬಜಾಜ್ ಆಟೋ ಜೊತೆ ಸಹಭಾಗಿತ್ವ ಹೊಂದಿದೆ. 2008ರಲ್ಲಿ ಬಜಾಜ್ ಆಟೋ 49% ಶೇರುಗಳನ್ನ ಖರೀದಿಸಿತು. ಇನ್ನು 2012ರಲ್ಲಿ ಕೆಟಿಎಂ ಬೈಕ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿತು.