ಫಾರ್ಚುನರ್ ಪ್ರತಿಸ್ಪರ್ಧಿ ಮಹೀಂದ್ರ ಅಲ್ಟುರಾಸ್ G4 ಬಿಡುಗಡೆ!

By Web Desk  |  First Published Nov 25, 2018, 3:32 PM IST

ಇತರ ಬ್ರ್ಯಾಂಡ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿರುವ ಮಹೀಂದ್ರ ಕಂಪನೆ ಇದೀಗ ಟೊಯೊಟಾ ಫಾರ್ಚುನರ್, ಫಾರ್ಡ್ ಎಂಡೇವರ್ ಕಾರುಗಳಿಗೆ ಪ್ರತಿ ಸ್ಪರ್ಧಿಯಾಗಿ ಮಹೀಂದ್ರ ಅಲ್ಟುರಾಸ್ ಕಾರು ಬಿಡುಗಡೆ ಮಾಡಿದೆ. ಇದರ ವಿಶೇಷತೆ ಏನು? ಬೆಲೆ ಎಷ್ಟು? ಇಲ್ಲಿದೆ.


ಮುಂಬೈ(ನ.25): ಟೊಯೊಟಾ ಫಾರ್ಚುನರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಇದೀಗ ಮಹೀಂದ್ರ ಅಲ್ಟುರಾಸ್ G4 ಕಾರು ಬಿಡುಗಡೆಯಾಗಿದೆ. 2 ವೇರಿಯೆಂಟ್‌ಗಳಲ್ಲಿ ಅಲ್ಟುರಾಸ್ ಲಾಂಚ್ ಆಗಿದೆ. ಅಲ್ಟುರಾಸ್ G4 2WD ಹಾಗೂ  ಅಲ್ಟುರಾಸ್ G4 4WD ಎಂಬು ಎರಡು ಕಾರು ಮಾರುಕಟ್ಟೆ ಪ್ರವೇಶಿಸಿದೆ.

Latest Videos

undefined

ನೂತನ ಅಲ್ಟುರಾಸ್ ಬೆಲೆ 26.95 ಲಕ್ಷ ರೂಪಾಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳಲಿದೆ. 2018ರ ಆಟೋ ಎಕ್ಸ್ಪೋದಲ್ಲಿ ಈ ಕಾರನ್ನ ಮಹೀಂದ್ರ ಪರಿಚಯಿಸಿತ್ತು. ಇದೀಗ ಎಕ್ಸೋಪದಲ್ಲಿ ಪರಿಚಯಿಸಲಾದ ಅಲ್ಟುರಾಸ್  ಹೆಚ್ಚಿನ ಬದಲಾವಣೆಗಳಿಲ್ಲದೇ  ಬಿಡುಗಡೆಯಾಗಿದೆ. 

ಇದನ್ನೂ ಓದಿ: ಅಂಬಿ ಕಾರ್ ಕ್ರೇಜ್: ಕೇವಲ 2 ಗಂಟೆಯಲ್ಲಿ ಮೈಸೂರು to ಬೆಂಗಳೂರು!

ಟೊಯೊಟಾ ಫಾರ್ಚುನರ್, ಫೋರ್ಡ್ ಎಂಡೆವರ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ   2.2 ಲೀಟರ್ ಟರ್ಬೋಚಾರ್ಜಡ್ ಡೀಸೆಲ್ ಎಂಜಿನ್, 187 bhp ಹಾಗೂ 420nm ಟಾರ್ಕ್ ಉತ್ಪಾದಿಸಲಿದೆ. 18 ಇಂಚಿನ್ ಅಲೋಯ್ ವೀಲ್ಹ್ಸ್ ಹೊಂದಿದೆ. 

7  ಸ್ಪೀಡ್ ಗೇರ್ ಹಾಗೂ AMT ಆಯ್ಕೆ ಕೂಡ ಹೊಂದಿದೆ. ಈ ಮೂಲಕ  ಮಹೀಂದ್ರ 7 ಸೀಟರ್ ಕಾರು ಬಿಡುಗಡೆಗೆ ಮುಂದಾಗಿದೆ. ಕ್ಲೈಮೇಟ್ ಕಂಟ್ರೋಲ್, ರೇರ್ ಎಸಿ ವೆಂಟ್ಸ್  ಹೊಂದಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 9 ಏರ್‌ಬ್ಯಾಗ್, ABS+EBD, ಟ್ರಾಕ್ಷನ್ ಕಂಟ್ರೋಲ್ ಸೌಲಭ್ಯ ಹೊಂದಿದೆ.

ಇದನ್ನೂ ಓದಿ: ಲಾಂಗ್ ಬೈಕ್ ರೈಡ್ ಮಾಡುವವರೇ ಎಚ್ಚರ-ಇಲ್ಲಿದೆ ಕಾರಣ!

ಈಗಾಗಲೇ ಮಹೀಂದ್ರ ಅಲ್ಟುರಾಸ್ G4 ಕಾರಿನ ಬುಕಿಂಗ್ ಆರಂಭಗೊಂಡಿದೆ. 50,000 ರೂಪಾಯಿ ಪಾವತಿಸಿ  ಅಲ್ಟುರಾಸ್ G4 ಕಾರನ್ನ ಬಕ್ ಮಾಡಬಹುದಾಗಿದೆ. ಮಹೀಂದ್ರ ಶೋ ರೂಂ ಅಥವಾ ಮಹೀಂದ್ರ ವೆಬ್‌ಸೈಟ್ ಮೂಲಕ ಅಲ್ಟುರಾಸ್ G4 ಕಾರನ್ನ ಬುಕ್ ಮಾಡಲು ಅವಕಾಶವಿದೆ.

click me!