38 ತಿಂಗಳಲ್ಲಿ ದಾಖಲೆ ಬರೆದ ಮಾರುತಿ ಬಲೆನೋ ಕಾರು!

Published : Dec 12, 2018, 08:04 PM IST
38 ತಿಂಗಳಲ್ಲಿ ದಾಖಲೆ ಬರೆದ ಮಾರುತಿ ಬಲೆನೋ ಕಾರು!

ಸಾರಾಂಶ

ಮಾರುತಿ ಸುಜುಕಿ ಸಂಸ್ಥೆಯ ಬಲೆನೊ ಕಾರು ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. ಬಿಡುಗಡೆಯಾದ 38 ತಿಂಗಳಲ್ಲಿ ಹೊಸ ಸಾಧನೆ ಮಾಡಿದೆ. ಇಲ್ಲಿದೆ ಬಲೆನೊ ಕಾರಿನ ಹೊಸ ದಾಖಲೆ ವಿವರ.

ಬೆಂಗಳೂರು(ಡಿ.12): ಭಾರತದ ಅತೀ ದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಇದೀಗ ಮತ್ತೊಂದು ದಾಖಲೆ ಬರೆದಿದೆ. 2015ರಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡ ಮಾರುತಿ ಬಲೆನೊ ಕಾರು 38 ತಿಂಗಳಲ್ಲಿ 5 ಲಕ್ಷ ಕಾರು ಮಾರಾಟವಾಗೋ ಮೂಲಕ ದಾಖಲೆ ಬರೆದಿದೆ.

2016ರಲ್ಲಿ ಗರಿಷ್ಠ ಮಾರಾಟವಾದ ಕಾರುಗಳ ಪೈಕಿ ಮೊದಲ ಸ್ಥಾನ ಪಡೆದ ಬಲೆನೊ ಇದೀಗ ಬರೋಬ್ಬರಿ 5 ಲಕ್ಷ ಕಾರು ಮಾರಾಟವಾಗೋ ಮೂಲಕ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. ಈ ಮೂಲಕ 20.4 ಶೇಕಡಾ ಮಾರಾಟದಲ್ಲಿ ಹೆಚ್ಚಳವಾಗಿದೆ.

ಆಕರ್ಷಕ ಲುಕ್, ಬಲಿಷ್ಠ ಎಂಜಿನ್ ಹೊಂದಿರುವ ಬಲೆನೋ ಭಾರತೀಯರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ. ಭಾರತದಲ್ಲಿ ಮಾತ್ರವಲ್ಲ, ಆಸ್ಟ್ರೇಲಿಯಾ, ಲ್ಯಾಟಿನ್ ಅಮೇರಿಕಾ ಹಾಗೂ ಈಸ್ಟ್ ಏಷ್ಯಾಗಳಲ್ಲೂ ಬಲೆನೊ ಕಾರು ಯಶಸ್ವಿಯಾಗಿದೆ ಎಂದು ಮಾರುತಿ ಸುಜುಕಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್ ಕಾಲ್ಸಿ ಹೇಳಿದ್ದಾರೆ.
 

PREV
click me!

Recommended Stories

ಹೊಸ ಕಾರ್‌ಗಳಲ್ಲೀಗ ಸ್ಟೆಪ್ನಿ ಮಾಯ!
ಬಜಾಜ್‌ ಚೇತಕ್‌ನಿಂದ ಮತ್ತೊಂದು ಎಲೆಕ್ಟ್ರಿಕ್‌ ಸ್ಕೂಟರ್‌