ಕೇವಲ 50 ನಿಸಾನ್ ಸೂಪರ್ ಕಾರು ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ!

Published : Dec 12, 2018, 07:33 PM ISTUpdated : Dec 12, 2018, 07:38 PM IST
ಕೇವಲ 50  ನಿಸಾನ್ ಸೂಪರ್ ಕಾರು ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ!

ಸಾರಾಂಶ

50ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ನಿಸಾನ್ ಇದೀಗ ಸೂಪರ್ ಕಾರು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಕೇವಲ 50 ಕಾರುಗಳನ್ನ ಬಿಡುಗಡೆ ಮಾಡಲಿದೆ. ಈ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.

ನವದೆಹಲಿ(ಡಿ.12): ನಿಸಾನ್ ಸಂಸ್ಥೆ ಸೂಪರ್ ಕಾರು ನಿರ್ಮಾಣದಲ್ಲಿ ಸಕ್ರಿಯಾವಾಗಿದೆ. ನಿಸಾನ್ GT-R50 ಹೆಸರಿನ ಈ ಕಾರು ಇತರ ಬುಗಾಟಿ, ಲ್ಯಾಂಬೋರ್ಗಿನಿ ಸೇರಿದಂತೆ ಇತರ ಸೂಪರ್ ಕಾರುಗಳಿಗೆ ಭಾರಿ ಪೈಪೋಟಿ ನೀಡಲು ಮುಂದಾಗಿದೆ. 

ಆದರೆ ನಿಸಾನ್ ಸಂಸ್ಥೆ ಕೇವಲ 50 ಸೂಪರ್ ಕಾರು ನಿರ್ಮಾಣ ಮಾಡಲು ಮುಂದಾಗಿದೆ. 711 ಬಿಹೆಚ್‌ಪಿ ಪವರ್ ಹಾಗೂ 780 nm ಪೀಕ್ ಟಾರ್ಕ್ ಉತ್ಪಾದಿಸಲಿದೆ.  ಇದು ಜಿಟಿ-3 ಸ್ಪೆಕ್ ಟರ್ಬೋಚಾರ್ಜರ್ ಎಂಜಿನ್ ಹೊಂದಿದೆ. ಆದರೆ ಇತರ ಬೆಲೆ ಎಷ್ಟು ಅನ್ನೋದನ್ನ ಇನ್ನೂ ಬಹಿರಂಗ ಪಡಿಸಿಲ್ಲ.

50ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ನಿಸಾನ್ ಕೇವಲ 50 ಕಾರು ಮಾರುಕಟ್ಟಗೆ ಬಿಡುಗಡೆ ಮಾಡಲಿದೆ. 2019ರ ಅಂತ್ಯ ಅಥವಾ 2020ರಲ್ಲಿ ನಿಸಾನ್ ಸೂಪರ್ ಕಾರು ಬಿಡುಗಡೆ ಮಾಡಲಿದೆ.  ಅತ್ಯಂತ ಆಕರ್ಷ ಲುಕ್ ನಿಸಾನ್ ಸೂಪರ್ ಕಾರಿನ ಮತ್ತೊಂದು ವಿಶೇಷತೆ.

PREV
click me!

Recommended Stories

ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?
ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು