ಭಾರತದಲ್ಲಿ ಸಾಮ್ರಾಜ್ಯ ವಿಸ್ತರಿಸುತ್ತಿರುವ ಎಂಜಿ ಮೋಟಾರ್ಸ್ ಕಾರು ಕಂಪನಿಗೆ ಗ್ರಾಹಕನೋರ್ವ ಹೊಡೆತ ನೀಡಿದ್ದಾರೆ. ಗ್ರಾಹಕ ನಿರ್ಧಾರದಿಂದ ಕುಪಿತಗೊಂಡಿರುವ ಎಂಜಿ ಮೋಟಾರ್ಸ್, ಕಾರು ಖರೀದಿಸಿದ ಮಾಲೀಕನ ವಿರುದ್ಧವೇ ಕೇಸ್ ದಾಖಲಿಸಿದೆ.
ರಾಜಸ್ಥಾನ(ಡಿ.05): ವಾಹನ ಖರೀದಿಸಿದ ಬಳಿಕ ತಾಂತ್ರಿಕ ದೋಷ, ವಾಹನದ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಗೆ ಕಂಪನಿ ಸ್ಪಂದಿಸುತ್ತಿಲ್ಲ ಅನ್ನೋ ಆರೋಪಗಳು ಸಾಕಷ್ಟಿವೆ. ಕಂಪನಿ ವಿರುದ್ದ ಗ್ರಾಹಕರು ಕೋರ್ಟ್ ಮೆಟ್ಟಿಲೇರಿ ಯಶಸ್ವಿಯಾದ ಘಟನೆಗಳು ಹೆಚ್ಚಿವೆ. ಆದರೆ ಕಾರು ಖರೀದಿಸಿದ ಮಾಲೀಕನ ಮೇಲೆ ಕಂಪನಿ ದೂರು ದಾಖಲಿಸಿ, ಕೋರ್ಟ್ ಮೆಟ್ಟಿಲೇರಿದೆ.
ಇದನ್ನೂ ಓದಿ: ಹೆಲ್ಮೆಟ್ ಹಾಕದ ಬೈಕ್ ಸವಾರನಿಗೆ ಫೈನ್; ನಡುರಸ್ತೆಯಲ್ಲಿ ಬೈಕ್ ಪುಡಿ ಪುಡಿ!
ರಾಜಸ್ಥಾನದ ವ್ಯಕ್ತಿ ನೂತನ MG ಹೆಕ್ಟರ್ SUV ಕಾರು ಖರೀದಿಸಿದ್ದಾನೆ. ಬಳಿಕ ಕಾರಿನಲ್ಲಿ ಕ್ಲಚ್ ಸಮಸ್ಯೆ ಇದೆ ಎಂದು ಡೀಲರ್ ಬಳಿ ತೆರಳಿದ್ದಾನೆ. ಆದರೆ ಡೀಲರ್ ಸರಿಯಾಗಿ ಸ್ಪಂದಿಸಿಲ್ಲ ಅನ್ನೋದು MG ಹೆಕ್ಟರ್ ಮಾಲೀಕನ ಆರೋಪ. ಇಷ್ಟಕ್ಕೆ ಸುಮ್ಮನಾಗದ ಮಾಲೀಕ ತನ್ನ MG ಹೆಕ್ಟರ್ ಕಾರಿನ ಮೇಲೆ ಕತ್ತೆ ವಾಹನ ಎಂದು ಫ್ಲೆಕ್ಸ್ ಬೋರ್ಡ್ ಹಾಕಿದ್ದಾನೆ. ಇಷ್ಟೇ ಅಲ್ಲ ರಸ್ತೆಯಲ್ಲಿ ಕತ್ತೆಯನ್ನು ಕಾರಿಗೆ ಕಟ್ಟಿ ಎಳೆದೊಯ್ಯುವ ರೀತಿ ಅಣುಕು ಪ್ರದರ್ಶನ ನೀಡಿದ್ದಾನೆ.
ಇದನ್ನೂ ಓದಿ: ಟ್ರಾಫಿಕ್ ನಿಯಮ ಉಲ್ಲಂಘಿಸಿದ 2 ಕೋಟಿ ಮೌಲ್ಯದ ಪೊರ್ಶೆ ಕಾರಿಗೆ 2.8 ಲಕ್ಷ ರೂ ದಂಡ!
ನಗರದ ಬೀ ಬೀದಿಗಳಲ್ಲಿ ಕತ್ತೆ ವಾಹನ ಅನ್ನೋ ಬೋರ್ಡ್ ರಾರಾಜಿಸುತ್ತಿದೆ. ಮಾಲೀಕರನ ಪ್ರತಿಭಟನೆ ವಿಚಾರ ಭಾರತ MG ಮೋಟಾರ್ಸ್ ಕಂಪನಿಯ ಗಮನಕ್ಕೆ ಬಂದಿದೆ. ತಕ್ಷಣವೇ MG ಮೋಟಾರ್ಸ್ ಡೀಲರ್‌ಗೆ ಮಾಹಿತಿ ನೀಡುವಂತೆ ಕೋರಿದೆ. ಈ ವೇಳೆ ಕಾರು ಮಾಲೀಕ ವೈಯುಕ್ತಿಕ ದ್ವೇಷಕ್ಕೆ ಈ ರೀತಿ ಮಾಡಿರುವುದು ಬೆಳೆಕಿಗೆ ಬಂದಿದೆ.
ಇದನ್ನೂ ಓದಿ: ಬಾಲಕನಿಗೆ ಗೇರ್ ಬದಲಾಯಿಸಲು ಅವಕಾಶ; ಚಾಲಕನ ಲೈಸೆನ್ಸ್ ಕ್ಯಾನ್ಸಲ್!
ಗ್ರಾಹಕರ ಪ್ರತಿ ಸಮಸ್ಯೆಗೆ MG ಮೋಟಾರ್ಸ್ ಅಷ್ಟೇ ಕಾಳಜಿ ವಹಿಸಿ ಸ್ಪಂದಿಸಲಿದೆ. ಗ್ರಾಹಕನಿಗೆ ಯಾವ ಸಮಸ್ಯೆ ಬರದ ರೀತಿ ಕಂಪನಿ ನಿಗಾ ವಹಿಸಲಿದೆ. ಈಗಾಗಲೇ 13,000 ಗ್ರಾಹಕರಿಗೆ ಕಾರು ಹಸ್ತಾಂತರಿಸಲಾಗಿದೆ. 30,000 ಕ್ಕೂ ಹೆಚ್ಚು ಗ್ರಾಹಕರು ಕಾರು ಬುಕ್ ಮಾಡಿದ್ದಾರೆ. ಭಾರತದ ನಂಬಿಕಸ್ಥ ಕಾರು ಅನ್ನೋ ಹೆಗ್ಗಳಿಕೆಗೆ MG ಪಾತ್ರವಾಗಿದೆ. ಹೀಗಿರುವಾಗ ರಾಜಸ್ಥಾನದಲ್ಲಿ ಗ್ರಾಹಕ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು MG ಹೇಳಿದೆ.
ಇದನ್ನೂ ಓದಿ: ಬಾಲಕನ ಮುಂದೆ ಚಾಲಕನ ಪೋಸ್; ಮರಳಿ ಬಂದಾಗ ಲೈಸೆನ್ಸ್ ಕ್ಯಾನ್ಸಲ್!
ಕತ್ತೆ ವಾಹನ ಎಂದು ಬೋರ್ಡ್ ಹಾಕಿರುವ ಕಾರಣ ಕಾರಿನ ಬ್ರ್ಯಾಂಡ್ ಮೌಲ್ಯ ಹಾಗೂ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ MG ಮೋಟಾರ್ಸ್ ಮಾಲೀಕನ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ.