ಪೇಟಿಎಂನ ಪೇಮೆಂಟ್ಸ್‌ ಬ್ಯಾಂಕ್‌ನಿಂದ ಫಾಸ್ಟ್‌ ಟ್ಯಾಗ್‌ ಮಾರಾಟ

Published : Dec 05, 2019, 06:37 PM IST
ಪೇಟಿಎಂನ ಪೇಮೆಂಟ್ಸ್‌ ಬ್ಯಾಂಕ್‌ನಿಂದ ಫಾಸ್ಟ್‌ ಟ್ಯಾಗ್‌ ಮಾರಾಟ

ಸಾರಾಂಶ

ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯವಾಗಿದೆ. ಆದರೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಅನ್ನೋ ಕೂಗು ಕೇಳಿ ಬರುತ್ತಿದೆ. ಇದೀಗ Paytm ಎಲ್ಲಾ ಟೋಲ್‌ಗಳು ಸೇರಿದಂತೆ ಇತರೆಡೆ ಫಾಸ್ಟ್ ಟ್ಯಾಗ್ ಮಾರಾಟ ಕೇಂದ್ರ ತೆರೆದಿದೆ. 

ಬೆಂಗಳೂರು(ಡಿ.05):  ಟೋಲ್‌ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್‌ ಕಡ್ಡಾಯವಾದ ಬೆನ್ನಲ್ಲೇ ಫಾಸ್ಟ್‌ಟ್ಯಾಗ್‌ಗಳಿಗೆ ಬೇಡಿಕೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಪೇಟಿಎಂ ಕೆಲವೊಂದು ಆಫರ್‌ಗಳೊಂದಿಗೆ ಈವರೆಗೆ ಆನ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್‌ ಮಾರಾಟ ಮಾಡುತ್ತಿತ್ತು. ಇದೀಗ ದೇಶಾದ್ಯಂತ ಮಾರಾಟ ಕೇಂದ್ರಗಳನ್ನೂ ತೆರೆದಿದು, ಪಾಸ್ಟ್ ಟ್ಯಾಗ್ ಮಾರಾಟ ಮಾಡುತ್ತಿದೆ.

ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲಾ ವಾಹನಗಳಿಗೂ ಕಡ್ಡಾಯ ಸೂಚನೆ ಇದು

ಇವುಗಳಲ್ಲಿ ಸುಮಾರು 250 ಕೇಂದ್ರಗಳು ಟೋಲ್‌ ಪ್ಲಾಜಾಗಳಲ್ಲಿವೆ. ಇನ್ನುಳಿದ 500 ಕೇಂದ್ರಗಳು ಕಾರ್ಪೋರೇಟ್‌ ಕಚೇರಿಗಳಲ್ಲಿ, ಪಾರ್ಕಿಂಗ್‌ ಲಾಟ್‌ ಮೊದಲಾದೆಡೆ ಆರಂಭವಾಗಿದೆ. 500 ರು ಪಾವತಿಸಿ ಪೇಟಿಎಂ ಫಾಸ್ಟ್‌ ಟ್ಯಾಗ್‌ ಖರೀದಿಸಬಹುದು. ಇದರಲ್ಲಿ 250 ರು.ಭದ್ರತಾ ಶುಲ್ಕ, 150 ರು. ಮಿನಿಮಮ್‌ ಬ್ಯಾಲೆನ್ಸ್‌ ಮತ್ತು ಟ್ಯಾಗ್‌ ನೀಡುವುದಕ್ಕೆ 100ರು. ಶುಲ್ಕ ಒಳಗೊಂಡಿರುತ್ತದೆ. 

ಇದನ್ನೂ ಓದಿ: ಫಾಸ್ಟ್‌ಟ್ಯಾಗ್‌ ಅಳವಡಿಕೆಗೆ ಗಡುವು ಡಿ.15ಕ್ಕೆ ವಿಸ್ತರಣೆ!

ಪೇಟಿಎಂ ಫಾಸ್ಟ್‌ ಟ್ಯಾಗ್‌ ಬಳಸಿದರೆ 2019-20 ರ ಅವಧಿಯಲ್ಲಿ ಎಲ್ಲಾ ಟೋಲ್‌ ಗೇಟ್‌ ಗಳಲ್ಲಿ ಶೇಕಡ 2.5 ರಷ್ಟುಕ್ಯಾಶ್‌ ಬ್ಯಾಕ್‌ ಲಭ್ಯವಿರಲಿದೆ. ಜೊತೆಗೆ ಉಚಿತ ಸಿನಿಮಾ ಟಿಕೆಟ್‌ ಗೆಲ್ಲುವ ಅವಕಾಶ ಕೂಡ ಇದೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ. 

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ