54 ತಿಂಗಳಲ್ಲಿ ಮಹತ್ವದ ಮೈಲಿಗಲ್ಲು ದಾಟಿದ ಮಾರುತಿ ಬ್ರಜಾ!

By Suvarna News  |  First Published Oct 6, 2020, 5:54 PM IST

ಸಬ್ ಕಾಂಪಾಕ್ಟ್ SUV ಪೈಕಿ ಮಾರುತಿ ಸುಜುಕಿ ಬ್ರೆಜಾ ಮೊದಲ ಸ್ಥಾನದಲ್ಲಿದೆ. ಈಗಾಗಲೇ ಬ್ರೆಜಾಗೆ ಪೈಪೋಟಿ ನೀಡಲು ಹಲವು SUV ಕಾರುಗಳು ಮಾರುಕಟ್ಟೆಯಲ್ಲಿವೆ. ತೀವ್ರ ಪೈಪೋಟಿ ಎದುರಿಸುತ್ತಿದ್ದರೂ ಮಾರುತಿ ಬ್ರೆಜಾ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಇದೀಗ ಬಿಡುಗಡೆಯಾದ 54 ತಿಂಗಳ ಬಳಿಕ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ.


ನವದೆಹಲಿ(ಅ.06): ಕೈಗೆಟುಕುವ ದರ, ಮೈಲೇಜ್, ಕಡಿಮೆ ನಿರ್ವಹಣೆ ವೆಚ್ಚಗಳಿಂದ ಭಾರತದಲ್ಲಿ ಮಾರುತಿ ಸುಜುಕಿ ಕಾರುಗಳ ಹೆಚ್ಚು ಜನಪ್ರಿಯವಾಗಿದೆ. ಮಾರುತಿ ಕಾರುಗಳಲ್ಲಿ ಸಬ್ ಕಾಂಪಾಕ್ಟ್ SUV ಕಾರಾದ ಬ್ರೆಜಾ ಮಾರಾಟದಲ್ಲೂ ದಾಖಲೆ ಬರೆದಿದೆ. 2016ರಲ್ಲಿ ಬಿಡುಗಡೆಯಾದ ಬ್ರೆಜಾ ಕಾರು ಇದೀಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.

ಮಾರುತಿ ಸುಜುಕಿ ಕೈ ಹಿಡಿದ ಆಗಸ್ಟ್; ಮಾರಾಟದಲ್ಲಿ ದಾಖಲೆ !..

Tap to resize

Latest Videos

undefined

2016ರಿಂದ ಇಲ್ಲೀವರೆಗೆ ಅಂದರೆ 54 ತಿಂಗಳಲ್ಲಿ ಮಾರುತಿ ಬ್ರೆಜಾ SUV 5.5 ಲಕ್ಷ  ಕಾರುಗಳು ಮಾರಾಟವಾಗಿದೆ. ಬಿಡುಗೆಯಾದ ಒಂದೇ ವರ್ಷಕ್ಕೆ ಅಂದರೆ 2017ರಲ್ಲಿ 1 ಲಕ್ಷ ಬ್ರೆಜಾ ಕಾರುಗಳು ಮಾರಾಟವಾಗಿತ್ತು. ಇದೀಗ 4.5 ವರ್ಷಕ್ಕೆ 5.5 ಲಕ್ಷ ಕಾರುಗಳು ಮಾರಾಟವಾಗಿದೆ. ಸರಾಸರಿ ಮಾರಾಟ ಗಣನೆಗೆ ತೆಗೆದುಕೊಳ್ಳುವುದಾದರೆ ಭಾರತದಲ್ಲಿ ಪ್ರತಿ 4 ನಿಮಿಷಕ್ಕೊಂದು ಮಾರುತಿ ಬ್ರೆಜಾ ಕಾರು ಮಾರಾಟವಾಗುತ್ತಿದೆ.

ಮಾರುತಿ S ಕ್ರಾಸ್ ಪೆಟ್ರೋಲ್ ಕಾರು ಬಿಡುಗಡೆ; ಕ್ರೆಟಾ, ಸೆಲ್ಟೋಸ್ ಕಾರಿಗಿಂತ ಕಡಿಮೆ ಬೆಲೆ!.

2020ರ  ಮಾರ್ಚ್ ತಿಂಗಳ ವೇಳೆಗೆ 5.2 ಲಕ್ಷ ಕಾರುಗಳು ಮಾರಾಟವಾಗಿತ್ತು. ತಿಂಗಲ ಸರಾಸರಿ ಮಾರಾಟ 10,833 ಆಗಿತ್ತು.  ಆದರೆ ಕೊರೋನಾ ವೈರಸ್, ಲಾಕ್‌ಡೌನ್ ಹಾಗೂ ಇತರ ಕಾರುಗಳ ಪೈಪೋಟಿಯಿಂದ ಬ್ರೆಜಾ ಕಾರು ಮಾರಾಟ ವೇಗದಲ್ಲಿ ಇಳಿಕೆಯಾಗಿದೆ. 2020ರ ಜನವರಿಯಿಂದ ಆಗಸ್ಟ್ ತಿಂಗಳಲ್ಲಿ ಕೇವಲ 37,000 ಕಾರುಗಳ ಮಾರಾಟವಾಗಿದೆ. ತಿಂಗಳ ಸರಾಸರಿ ಮಾರಾಟ 4,714ಕ್ಕೆ ಇಳಿಕೆಯಾಗಿದೆ.

ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಮಾರುತಿ ಬ್ರೆಜಾ 2ನೇ ಸ್ಥಾನಕ್ಕೆ ಕುಸಿದಿದೆ. ಬ್ರೆಜಾ 9,153 ಕಾರು ಮಾರಾಟವಾಗಿದ್ದರೆ, ಕಿಯಾ ಸೊನೆಟ್ ಕಾರು 9,266 ಕಾರು ಮಾರಾಟವಾಗೋ ಮೂಲಕ ಮೊದಲ ಸ್ಥಾನ ಆಕ್ರಮಿಸಿಕೊಂಡಿದೆ. ಹ್ಯುಂಡೈ ವೆನ್ಯೂ ಹಾಗೂ ಟಾಟಾ ನೆಕ್ಸಾನ್ 3 ಮತ್ತು 4ನೇ ಸ್ಥಾನ ಪಡೆದುಕೊಂಡಿದೆ.

click me!