ಅಕ್ಟೋಬರ್ ಆಫರ್: ಕಾರಿನ ಮೇಲೆ 2.5 ಲಕ್ಷ ರೂ ಡಿಸ್ಕೌಂಟ್ ಘೋಷಿಸಿದ ಹೊಂಡಾ!

By Suvarna News  |  First Published Oct 5, 2020, 2:25 PM IST

ಹಬ್ಬದ ಪ್ರಯುಕ್ತ ಹೊಂಡಾ ಅಕ್ಟೋಬರ್ ತಿಂಗಳ ಆಫರ್ ಘೋಷಿಸಿದೆ. ಹೊಂಡಾ ಕಾರುಗಳ ಮೇಲೆ ಗರಿಷ್ಠ 2.5 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಡಿಸ್ಕೌಂಟ್ ಕುರಿತ ಹೆಚ್ಚಿನ ವಿವರ ಇಲ್ಲಿವೆ.


ನವದೆಹಲಿ(ಅ.05): ಸಾಲು ಸಾಲು ಹಬ್ಬಕ್ಕೆ ಭಾರತೀಯರು ಸಜ್ಜಾಗಿದ್ದಾರೆ. ತಯಾರಿಗಳು ಆರಂಭಗೊಂಡಿವೆ. ಇದರ ನಡುವೆ ಆಟೋಮೊಬೈಲ್ ಕಂಪನಿಗಳು ಕೂಡ ಹಬ್ಬದ ಋತುವಿನಲ್ಲಿ ಗರಿಷ್ಠ ಕಾರು ಮಾರಾಟ ಮಾಡಲು ಪ್ರತಿ ವರ್ಷ ಹಲವು ಆಫರ್ ಘೋಷಿಸುತ್ತದೆ. ಇದೀಗ ಹೊಂಡಾ ಭಾರತದಲ್ಲಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಗರಿಷ್ಠ 2.5 ಲಕ್ಷ ರೂಪಾಯಿ ಆಫರ್ ನೀಡಲಾಗಿದೆ.

ಮೇಡ್ ಇನ್ ಇಂಡಿಯಾ ಹೈಬ್ರಿಡ್ ಕಾರು ಬಿಡುಗಡೆಗೆ ಮಾಡಲಿದೆ ಹೊಂಡಾ!.

Tap to resize

Latest Videos

undefined

ಹೊಂಡಾ ಆಯ್ದ ಕಾರುಗಳ ಮೇಲೆ ಈ ಆಫರ್ ಅನ್ವಯವಾಗಲಿದೆ. ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಆಫರ್ ಹಾಗೂ ಕಾರ್ಪೋರೇಟ್ ಬೋನಸ್, ನಿರ್ವಹಣೆ ಸೇರಿದಂತೆ ಹಲವು ವಿಭಗಾಗಗಳಾಗಿ ಡಿಸ್ಕೌಂಟ್ ಆಫರ್ ವಿಂಗಡಿಸಲಾಗಿದೆ. 

ಹೊಂಡಾ ಅಮೇಜ್ ಕಾರಿನ ಮೇಲೆ 47,000 ರೂಪಾಯಿ ಆಫರ್ ನೀಡಲಾಗಿದೆ. 4 ಮತ್ತು 5ನೇ ವರ್ಷದ 12,000 ರೂಪಾಯಿ ಮೌಲ್ಯದ ವಿಸ್ತರಿಸಿದ ವಾರೆಂಟಿ, ಎಕ್ಸ್‌ಜೇಂಜ್ ಬೋನಸ್ 15,000 ರೂಪಾಯಿ ನೀಡಲಾಗಿದೆ. ಪೆಟ್ರೋಲ್ ವರ್ಶನ್ ಕಾರಿನ ಮೇಲೆ ಕ್ಯಾಶ್ ಡಿಸ್ಕೌಂಟ್ 20,000 ರೂಪಾಯಿ ನೀಡಲಾಗಿದೆ. ಇನ್ನು ಡೀಸೆಲ್ ಕಾರಿನಗೆ 10,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ ನೀಡಲಾಗಿದೆ.

ಸುಲಭ ಸಾಲ, ಕಡಿಮೆ ಬಡ್ಡಿ, 999 ರೂ EMI; ಹೊಸ ಆಫರ್ ಘೋಷಿಸಿದ ಹೊಂಡಾ!.

ಹೊಂಡಾ WR-V ಹಾಗೂ ಜಾಝ್ ಕಾರಿನ ಮೇಲೆ ಕ್ಯಾಶ್ ಡಿಸ್ಕೌಂಟ್ 25,000 ರೂಪಾಯಿ ನೀಡಲಾಗಿದೆ. ಇನ್ನು 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ನೀಡಲಾಗಿದೆ. ಹೊಂಡಾ ಸಿವಿಕ್ ಕಾರಿನ ಮೇಲೆ ಒಟ್ಟು 2.5 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. 

ಪೆಟ್ರೋಲ್ ವರ್ಶನ್ ಸಿವಿಕ್ ಕಾರಿಗೆ ಕ್ಯಾಶ್ ಡಿಸ್ಕೌಂಟ್ 1 ಲಕ್ಷ ರೂಪಾಯಿ ನೀಡಲಾಗಿದೆ. ಇನ್ನು  ಡೀಸೆಲ್ ಸಿವಿಕ್ ಕಾರಿಗೆ 2.5 ಲಕ್ಷ ರೂಪಾಯಿ ಕ್ಯಾಶ್ ಡಿಸ್ಕೌಂಟ್ ನೀಡಲಾಗಿದೆ. 

ಸೂಚನೆ: ನಗರದಿಂದ ನಗರ ಹಾಗೂ ರಾಜ್ಯಕ್ಕೆ ಆಫರ್‌ಗಳಲ್ಲಿ ವ್ಯತ್ಯಾಸವಾಗಬಹುದು. ನಿಮ್ಮ ಹತ್ತಿರದ ಡೀಲರ್ ಬಳಿ ಆಫರ್ ಕುರಿತು ವಿಚಾರಿಸಿ

click me!