ಮಾರುತಿ, ಹ್ಯುಂಡೈ ಬೆಲೆ ಕಡಿತ, ಇನ್ಮುಂದೆ ಕಾರು ಖರೀದಿ ಅಗ್ಗ!

By Web Desk  |  First Published Sep 23, 2019, 8:12 PM IST

ವಾಹನ ಮಾರಾಟ ಕುಸಿತ ತಪ್ಪಿಸಲು ಇದೀಗ ಮಾರುತಿ ಸುಜುಕಿ ಹಾಗೂ ಹ್ಯುಂಡೈ ಬೆಲೆ ಕಡಿತಕ್ಕೆ ಮುಂದಾಗಿದೆ. ಬಲೆ ಕಡಿತ ಕಂಪನಿಯ ಕೊನೆಯ ಆಯ್ಕೆ, ಅದಕ್ಕೂ ಮುನ್ನ ರಿಯಾಯಿತಿ, ಕೊಡುಗೆ ಸೇರಿದಂತೆ ಹಲವು ಪ್ರಯತ್ನಗಳ ಮೂಲಕ ಕಂಪನಿ ವಾಹನ ಮಾರಾಟ ಹೆಚ್ಚಿಸಲು ಯೋಜನೆ ರೂಪಿಸಲಿದೆ.


ನವದೆಹಲಿ(ಸೆ.23): ಕಾರು ಖರೀದಿಗೆ ಯೋಜನೆ ಹಾಕಿಕೊಂಡಿದ್ದೀರಾ? ಹಾಗಾದರೆ ಇನ್ನು ಸ್ವಲ್ಪ ದಿನ ಕಾಯಿರಿ. ಕಾರಣ ಮಾರುತಿ ಹಾಗೂ ಹ್ಯುಂಡೈ ಕಾರಿನ ಬೆಲೆ ಇಳಿಕೆಯಾಗಲಿದೆ. ಭಾರತದ ಆಟೋಮೊಬೈಲ್ ಕ್ಷೇತ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕಾರುಗಳು ಮಾರಾಟವಾಗದೆ ಪರದಾಡುವಂತಾಗಿದೆ. ಶೀಘ್ರದಲ್ಲೇ ಮಾರಾಟಕ್ಕೆ ಪುನಶ್ಚೇತನ ನೀಡಲು ಮಾರುತಿ ಹಾಗು ಹ್ಯುಂಡೈ ಕಾರಿನ ಬೆಲೆ ಇಳಿಕೆ ಮಾಡಲಿದೆ.

ಇದನ್ನೂ ಓದಿ: ಆಟೋ ಮಾರಟ ಕುಸಿತಕ್ಕೆ ಕಾರಣ ಬಿಚ್ಚಿಟ್ಟ ಬಜಾಜ್; ನಿಟ್ಟುಸಿರು ಬಿಟ್ಟ ಕೇಂದ್ರ!

Latest Videos

undefined

ಇನ್ನೆರಡು ದಿನದಲ್ಲಿ ಬೆಳೆ ಇಳಿಕೆ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಿದ್ದೇವೆ ಎಂದು ಮಾರುತಿ ಚೇರ್ಮೆನ್ ಆರ್‌ಸಿ ಭಾರ್ಗವ ಹೇಳಿದ್ದಾರೆ. ಕಾರ್ಪೋರೇಟ್ ಟ್ಯಾಕ್ಸ್ ಸೇರಿದಂತೆ ಇತರ ವಿಭಾಗದಲ್ಲಿನ ಟ್ಯಾಕ್ಸ್ ಕಡಿತಗೊಳಿಸುವ ಸಾಧ್ಯತೆ ಇದೆ.  ಹೀಗಾದಲ್ಲಿ ಕಾರುಗಳ ಬೆಲೆ ಕಡಿಮೆಯಾಗಲಿದೆ.

ಇದನ್ನೂ ಓದಿ: 4 ವರ್ಷ ಹಿಂದೆಯೇ ಉಬರ್, ಓಲಾ ಬಗ್ಗೆ ಎಚ್ಚರಿಸಿದ್ದ ಆನಂದ್ ಮಹೀಂದ್ರಾ!

ಹ್ಯುಂಡೈ ಕಾರುಗಳು ಹೆಚ್ಚುವರಿ ಬೆನಿಫಿಟ್, ರಿಯಾಯಿತಿ ಹಾಗೂ ಕೊಡುಗೆಗಳ ಮೂಲಕ ಕಾರು ಮಾರಾಟ ಹೆಚ್ಚಳಕ್ಕೆ ಮುಂದಾಗಿದೆ. ಹೀಗಾಗಿ ಕಾರು ಖರೀದಿ ಇನ್ನು ಸುಲಭವಾಗಲಿದೆ. ಕಳೆದ 6 ತಿಂಗಳಿಂದ ಭಾರತದ ವಾಹನ ಮಾರಾಟ ಪಾತಾಳಕ್ಕೆ ಕುಸಿದಿದೆ. 

click me!